ADVERTISEMENT

ಮಾನವಹಕ್ಕು ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 19:45 IST
Last Updated 23 ಫೆಬ್ರುವರಿ 2020, 19:45 IST

ಸೂರತ್ ಮಹಾನಗರಪಾಲಿಕೆಯ ಕ್ಲರ್ಕ್ ಟ್ರೈನಿ ಹುದ್ದೆಗೆ ಆಯ್ಕೆಯಾಗಿದ್ದ ಮಹಿಳೆಯರನ್ನು ಬೆತ್ತಲೆಯಾಗಿ ದೈಹಿಕ ಪರೀಕ್ಷೆಗೆ ಒಳಪಡಿಸಿರುವ ಕ್ರಮ (ಪ್ರ.ವಾ., ಫೆ. 22) ಖಂಡನೀಯ. ಇದು ಮಾನವ ಹಕ್ಕುಗಳ ಉಲ್ಲಂಘನೆ. ಆಫ್ರಿಕಾದ ಬುಡಕಟ್ಟು ಜನರನ್ನು ಗುಲಾಮಗಿರಿಗಾಗಿ ಸೆರೆಹಿಡಿದು, ಸಂತೆಯಲ್ಲಿ ಮಾರಾಟಕ್ಕಿಟ್ಟ ಇತಿಹಾಸವನ್ನು ಈ ಘಟನೆ ನೆನಪಿಸುತ್ತಿದೆ. ಮಾನವೀಯತೆಯೇ ನಮ್ಮ ದೇಶದ ಶ್ರೇಷ್ಠ ಧರ್ಮ ಎಂಬುದನ್ನು ಯಾರೂ ಮರೆಯಬಾರದು. ಗುಜರಾತ್ ಸರ್ಕಾರ ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಹರೀಶ್ ಕಮ್ಮನಕೋಟೆ,ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT