ADVERTISEMENT

ವಾಚಕರ ವಾಣಿ|'ಫೈವ್ ಸ್ಟಾರ್’ ಗರಿ ಮಾದರಿಯಾಗಲಿ

​ಪ್ರಜಾವಾಣಿ ವಾರ್ತೆ
Published 20 ಮೇ 2020, 20:15 IST
Last Updated 20 ಮೇ 2020, 20:15 IST

ತ್ಯಾಜ್ಯ ಸಂಸ್ಕರಣೆಯಲ್ಲಿ 1,435 ನಗರಗಳ ಜೊತೆ ಸ್ಪರ್ಧಿಸಿ, ಫೈವ್ ಸ್ಟಾರ್ ರೇಟಿಂಗ್‌ಗೆ ನಮ್ಮ ಮೈಸೂರು ಪಾತ್ರವಾಗಿರುವುದು ಹೆಮ್ಮೆಯ ವಿಷಯ. ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲು ಸ್ಥಳೀಯ ಸಂಸ್ಥೆಯು ಮಾಧ್ಯಮಗಳನ್ನು ಬಳಸಿಕೊಂಡಿತು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಟಕದ ಮೂಲಕ ಪ್ರಾತ್ಯಕ್ಷಿಕೆ ನೀಡಿತ್ತು. ಪ್ಲಾಸ್ಟಿಕ್ ಚೀಲ ಬಳಸುತ್ತಿದ್ದ ಮಳಿಗೆಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿತ್ತು.

ಈ ಸಾಧನೆಗೆ ಕಾರಣವಾದ ತ್ಯಾಜ್ಯ ಸಂಗ್ರಹ ವಿಧಾನ, ಹಸಿ ಮತ್ತು ಒಣ ಕಸ ಬೇರ್ಪಡಿಸುವಿಕೆ, ವೈಜ್ಞಾನಿಕ ವಿಲೇವಾರಿ, ಸಾರ್ವಜನಿಕರಿಂದ ಶುಲ್ಕ ಸಂಗ್ರಹದಂತಹ ಕಾರ್ಯಗಳು ರಾಜ್ಯದ ಇತರ ಜಿಲ್ಲೆಗಳೂ ಅನುಸರಿಸುವಂತೆ ಆಗಬೇಕು. ಸ್ವಚ್ಛತೆಯ ವಿಷಯದಲ್ಲಿ ಮೈಸೂರು ಇನ್ನೂ ಉನ್ನತ ಮಟ್ಟಕ್ಕೆ ಏರಬೇಕು. ಈ ದಿಸೆಯಲ್ಲಿ ಮಕ್ಕಳಿಗೆ ಎಳವೆಯಿಂದಲೇ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಕುಟುಂಬ, ಶಾಲಾ ಕಾಲೇಜುಗಳು ಇದನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಬೇಕಾಗಿದೆ.

-ಎಂ.ಎಸ್.ಉಷಾ ಪ್ರಕಾಶ್,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.