ADVERTISEMENT

ವಾಚಕರ ವಾಣಿ: ಭಾವಚಿತ್ರ ಬಳಸುವುದೇ ‘ಪ್ರತಿಷ್ಠೆಯ ಕಣ’ವಾದರೆ...

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 19:30 IST
Last Updated 7 ಜೂನ್ 2021, 19:30 IST

ಪಶ್ಚಿಮ ಬಂಗಾಳದಲ್ಲಿ ಲಸಿಕೆ ಪಡೆದುಕೊಂಡ 18ರಿಂದ 44 ವರ್ಷ ವಯೋಮಾನದವರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾವಚಿತ್ರವಿರುವ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ (ಪ್ರ.ವಾ., ಜೂನ್‌ 6). ಇನ್ನು ಸದ್ಯಕ್ಕೆ ದೇಶದ ಉಳಿದವರಿಗೆ ಪ್ರಧಾನಿಯವರ ಭಾವಚಿತ್ರವಿರುವ ಪ್ರಮಾಣಪತ್ರ ಸಿಗುತ್ತಿದೆ. ಪಕ್ಷಗಳು ಯಾವುದೇ ಆಗಿರಲಿ ತಾವು ಆಡಳಿತ ನಡೆಸುವಾಗ ಸರ್ಕಾರದ ಜಾಹೀರಾತುಗಳಲ್ಲಿ ಜನಪ್ರತಿನಿಧಿಗಳ ಭಾವಚಿತ್ರ ಬಳಸುವ ಕ್ರಮ ಹೊಸತೇನೂ ಅಲ್ಲ. ಆದರೆ, ಭಾವಚಿತ್ರ ಬಳಸುವುದೇ ‘ಪ್ರತಿಷ್ಠೆಯ ಕಣ’ವಾದರೆ ಸರ್ಕಾರದ ಖರ್ಚಿನಲ್ಲಾಗುವ ಇಂಥ ಪ್ರಚಾರವನ್ನು ಮುಂದುವರಿಸುವುದು ಸರಿಯೇ?

ಜನರಲ್ಲಿ ರಾಜಕೀಯ ಪ್ರಜ್ಞೆಯು ಹೆಚ್ಚುತ್ತಿರುವಾಗ ಇಂಥ ಭಾವಚಿತ್ರಗಳು ಕೂಡ ಪ್ರಸ್ತುತವಾಗಿ ಉಳಿಯುವುದಿಲ್ಲ. ಅಷ್ಟಕ್ಕೂ ಜನರಿಗೆ ಲಸಿಕೆಯಿಂದ ಹೆಚ್ಚು ಪ್ರಯೋಜನವೇ ಹೊರತು ನಾಯಕರ ಭಾವಚಿತ್ರಗಳಿಂದಲ್ಲ. ಶತಮಾನಗಳಿಂದ ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗೆ ವಿಜ್ಞಾನಿಗಳು ವಿಶ್ವಕ್ಕೆ ನೀಡಿದ ಕೊಡುಗೆಯ ಪ್ರಯೋಜನ ಪಡೆಯುತ್ತಿದ್ದೇವೆ. ಅಂಥ ವಿಜ್ಞಾನಿಗಳನ್ನು ದಿನನಿತ್ಯ ನೆನೆಯುವುದೇ ಇಲ್ಲ. ಲಸಿಕೆಯ ಆವಿಷ್ಕಾರದ ಹಿಂದೆ ಕೂಡ ಅಂಥವರ ನಿಸ್ವಾರ್ಥ ಸೇವೆ ಇದೆ ಅಲ್ಲವೇ?

–ಡಾ. ಜಿ.ಬೈರೇಗೌಡ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.