ADVERTISEMENT

ಎಲ್ಲಿ ಹೋಯಿತು ಸಕಾಲ...?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಮಾರ್ಚ್ 2020, 16:00 IST
Last Updated 17 ಮಾರ್ಚ್ 2020, 16:00 IST

ಸರ್ಕಾರದ ಇಲಾಖೆಗಳಲ್ಲಿ ಜಾರಿಗೆ ತರಲಾಗಿದ್ದ ಸಕಾಲ ಸೇವೆಯಿಂದ ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಕಡತದ ಸ್ಥಿತಿಗತಿಯನ್ನು ಕುಳಿತಲ್ಲಿಯೇ ತಿಳಿದುಕೊಳ್ಳಬಹುದಿತ್ತು. ಆದರೆ ಈಗ ಬಹುತೇಕ ಇಲಾಖೆಗಳ ಕೆಳ ಹಂತದ ಕಚೇರಿಗಳಲ್ಲಿ ಸಕಾಲಕ್ಕಾಗಿ ತೆರೆದ ಗವಾಕ್ಷಿಯನ್ನು ಮುಚ್ಚಲಾಗಿದೆ. ಏನಾದರೂ ಸಬೂಬು ಹೇಳಿ ಅರ್ಜಿ ಸ್ವೀಕರಿಸುತ್ತಿಲ್ಲ. ಈಗ ಬಹುತೇಕ ಇಲಾಖೆಗಳು ಆನ್‌ಲೈನ್ ಸೇವೆ ನೀಡುತ್ತಿವೆ. ಆದರೂ ಸಕಾಲದ ಅಡಿ ಮಾತ್ರ ಅರ್ಜಿ ಸ್ವೀಕರಿಸುವಲ್ಲಿ ಮೀನಮೇಷ ಎಣಿಸುತ್ತಿರುವುದರ ಹಿಂದಿನ ಹಕೀಕತ್ತು ಏನು ಎನ್ನುವುದು ತಿಳಿಯದಾಗಿದೆ.

ಜನಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾದ ಹಾಗೂ ವಿವಿಧ ಕೆಲಸ ಕಾರ್ಯಗಳನ್ನು ಅತಿ ವೇಗವಾಗಿ ಮಾಡಲು, ಭ್ರಷ್ಟಾಚಾರವನ್ನು ಕೊಂಚವಾದರೂ ತಡೆಗಟ್ಟಲು, ಪಾರದರ್ಶಕ ಆಡಳಿತ ರೂಪಿಸಲು ಸಕಾಲವನ್ನು ಸಶಕ್ತಗೊಳಿಸಬೇಕಿದೆ.

ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರ್ಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.