ದೇಶದಲ್ಲಿ ಪ್ರತಿಯೊಂದು ಅತ್ಯಾಚಾರ ಪ್ರಕರಣ ಘಟಿಸಿದಾಗಲೂ ಮತ್ತೆಂದಿಗೂ ಇಂತಹ ಪ್ರಕರಣ ಮರುಕಳಿಸಬಾರದೆಂದು ಆಶಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಮೋಂಬತ್ತಿ ಬೆಳಗಿಸಿ ಪ್ರಾರ್ಥಿಸುತ್ತಲೇ ಇದ್ದೇವೆ. ಆದರೆ ಪ್ರಕರಣಗಳಿಗೆ ಕೊನೆಯಿಲ್ಲ ಎಂಬುದನ್ನು ಕ್ರೂರ ಮನಃಸ್ಥಿತಿಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇವೆ. ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ಯುವತಿಯ ಆಕ್ರಂದನ, ಆಳುವವರ ಕಿವಿಗೆ ಬೀಳದಿದ್ದುದು ದುರಂತ. ಆ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಮಾಮೂಲು ಎಂಬ ಮನೋಭಾವ ಇದರ ಹಿಂದೆ ಇದ್ದಿರಬಹುದು.
ವಿಜಯ ಕುಮಾರ್ ಎಸ್. ಸುಜ್ಜಲೂರು, ಟಿ.ನರಸೀಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.