ADVERTISEMENT

ವಾಚಕರ ವಾಣಿ | ಪಂಚಾಯಿತಿಗಳ ವಿರುದ್ಧ ಕ್ರಮ ಯಾಕಿಲ್ಲ?

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 19:45 IST
Last Updated 16 ಜುಲೈ 2020, 19:45 IST

ಅನೇಕ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರು ಹಾಗೂ ಬೀದಿ ದೀಪಗಳಿಗಾಗಿ ಬಳಸಿದ ವಿದ್ಯುತ್‌ ಶುಲ್ಕದ ಬಾಕಿ ಮೊತ್ತವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಕಟ್ಟಬೇಕಾಗಿರುವುದು ₹ 3 ಸಾವಿರ ಕೋಟಿಗಿಂತ ಅಧಿಕ ಎಂದು ವರದಿಯಾಗಿದೆ (ಪ್ರ.ವಾ., ಜುಲೈ 14).

ಸಾಮಾನ್ಯ ಜನರು ಸಕಾಲದಲ್ಲಿ ವಿದ್ಯುತ್‌ ಶುಲ್ಕವನ್ನು ಪಾವತಿಸದಿದ್ದರೆ ಅವರ ಮನೆಗಳ ವಿದ್ಯುತ್‌ ಸಂಪರ್ಕವನ್ನುಮುಲಾಜಿಲ್ಲದೆ ಕಡಿತಗೊಳಿಸಲಾಗುತ್ತದೆ. ಇಂತಹುದೇ ಕ್ರಮವು ಪಂಚಾಯಿತಿಗಳ ವಿಷಯದಲ್ಲೂ ಆಗಬೇಕಿದೆ. ಇಲ್ಲವೇ ಮುಂಚಿತವಾಗಿ ಹಣ ಸಂದಾಯ ಮಾಡಿ ವಿದ್ಯುತ್ ಖರೀದಿಸುವ ಪದ್ಧತಿಯನ್ನು ಜಾರಿಗೆ ತರಬೇಕು.

ಇದರಿಂದ ವಿದ್ಯುತ್ ಕಂಪನಿಗಳ ಸಮಸ್ಯೆಗೆ ಮುಕ್ತಿ ಸಿಗುವುದು ಮಾತ್ರವಲ್ಲ, ಗ್ರಾಮ ಪಂಚಾಯಿತಿಗಳಲ್ಲೂ ವಿದ್ಯುತ್‌ನ ಸದ್ಬಳಕೆ ಸಾಧ್ಯವಾಗುತ್ತದೆ.
-ನಾಗರಾಜ ಮಸೂತಿ,ಕುರುಗೋಡು, ಬಳ್ಳಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.