ADVERTISEMENT

ವಾಚಕರ ವಾಣಿ | ಈ ತತ್ವ ಪಾಲಿಸೋಣ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಜೂನ್ 2021, 19:45 IST
Last Updated 23 ಜೂನ್ 2021, 19:45 IST

ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ನಾವೆಲ್ಲರೂ ಹೆಚ್ಚು ಅವಲಂಬಿತರಾಗಿದ್ದೇವೆ. ಹೆಚ್ಚು ಹೆಚ್ಚು ಬಳಸಿದಂತೆ ಮುಂದಿನ ಪೀಳಿಗೆಗೆ ಇವು ಸಿಗುವುದಿಲ್ಲ. ಇಂತಹ ಬರಿದಾಗುವ ಸಂಪ ನ್ಮೂಲಗಳು ಬರೀ ನಮ್ಮ ಪೀಳಿಗೆಗೆ ಖಾಲಿ ಆಗಬಾರದಲ್ಲವೇ? ಈಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕಾದ ಸಂದರ್ಭ ಬಂದಿದೆ.

ಆಮದಾಗುವ ಪೆಟ್ರೋಲಿಯಂ ಸಂಪನ್ಮೂಲಗಳಿಗೆ ಅಷ್ಟೊಂದು ತೆರಿಗೆ ಕಟ್ಟಿ, ಜಾಗತಿಕ ತಾಪಮಾನ ಹೆಚ್ಚಿಸಿ, ಪ್ರಕೃತಿಯನ್ನು ನಾಶ ಮಾಡುವಂತಹ ಅನೇಕ ಅನಿಲಗಳು ಹೊರಸೂಸುವಂತೆ ಮಾಡಿ, ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಂಡು ಆರ್ಥಿಕವಾಗಿ ದುರ್ಬಲರಾಗುವ ಬದಲು, ನವೀಕರಿಸುವ ಮತ್ತು ಪುನರ್‌ಭರ್ತಿ ಮಾಡುವ ನೈಸ ರ್ಗಿಕ ಇಂಧನಗಳನ್ನು ಬಳಸಬಹುದಲ್ಲವೇ? ಅಷ್ಟಕ್ಕೂ ಇವು ಬರಿದಾಗದ ಸಂಪನ್ಮೂಲಗಳು. ಇವನ್ನು ಬಳಸುವುದರಿಂದ ನಮಗೆ ಅನೇಕ ಉಪಯೋಗಗಳಿವೆ. ಇವು ಹೊರಸೂಸುವ ಅನಿಲಗಳು ಹೆಚ್ಚು ದುಷ್ಪರಿಣಾಮವನ್ನು ಬೀರುವುದಿಲ್ಲ. ಅದಲ್ಲದೆ ಬೆಲೆಯೂ ಕಡಿಮೆ. ಸೌರಶಕ್ತಿಯಂತಹ ಸಂಪನ್ಮೂಲಗಳನ್ನು ಮನುಷ್ಯ ಎಷ್ಟೇ ಬಳಸಿದರೂ ಪ್ರಕೃತಿಗೆ ಅದನ್ನು ಪುನರ್‌ಭರ್ತಿ ಮಾಡುವ ಸಾಮರ್ಥ್ಯವಿದೆ. ಸಂಪನ್ಮೂಲ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದಕ್ಕಾಗಿ 4R (ರೆಡ್ಯೂಸ್‌- ಕಡಿತ, ರೀಯೂಸ್‌– ಮರುಬಳಕೆ, ರೀಜನರೇಟ್‌- ಪುನರುತ್ಪಾದನೆ, ರಿಸರ್ಚ್‌– ಸಂಶೋಧನೆ) ತತ್ವವನ್ನು ಪಾಲಿಸುವುದರತ್ತ ನಮ್ಮೆಲ್ಲರ ಹೆಜ್ಜೆ ಇರಲಿ.

-ಅರ್ಚನಾ,ಅರಕಲಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT