ADVERTISEMENT

ಮತ್ತೆ ಹುಟ್ಟಿ ಬರುವೆಯಾ?

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 15:22 IST
Last Updated 19 ಅಕ್ಟೋಬರ್ 2021, 15:22 IST

ಪ್ರಿಯ ಅಮೃತವರ್ಷಿಣಿ, ಪ್ರತೀ ಬೆಳಿಗ್ಗೆ ಇಂಪಾದ ಸಂಗೀತವನ್ನು ಸಿತಾರ್‌ನಲ್ಲಿ ಕೇಳಿಸುತ್ತಿದ್ದೆಯಲ್ಲ, ಎಲ್ಲಿಹೋದೆ? 20 ವರ್ಷಗಳ ಹಿಂದೆ ಎಫ್‌ಎಂ ಟ್ರಾನ್ಸ್‌ಮಿಟರ್ ಅನ್ನು ಪರೀಕ್ಷೆ ಮಾಡುತ್ತಿದ್ದಾಗ ಬೆಳಗ್ಗಿನಿಂದ ರಾತ್ರಿಯವರೆಗೂ ಸಂಗೀತ ಬರುತ್ತಿತ್ತು. ಕುತೂಹಲದಿಂದ ಆಕಾಶವಾಣಿಯವರನ್ನು ಕೇಳಿದ್ದೆ. ಹೊಸ ಚಾನೆಲ್ ಬರಲಿದೆ ಎಂದಿದ್ದರು. ನೀನು ಬಂದೆ. ಬಹಳ ಸಂತೋಷವಾಯಿತು. ಕಳೆದ ಒಂದು ವರ್ಷದಿಂದ ನಿನ್ನ ಧ್ವನಿ ಕ್ಷೀಣವಾಗುತ್ತಿತ್ತು. ಕೋವಿಡ್ ಪ್ರಭಾವ, ಇನ್ನೇನು ಸರಿಹೋಗಬಹುದು ಎಂದುಕೊಂಡಿದ್ದೆ. ಆದರೆ ಇನ್ನೂ ಹದಿವಯಸ್ಸನ್ನೂ ಪೂರೈಸದೆ ಮಾಯವಾಗಿಬಿಟ್ಟೆಯಲ್ಲಾ. ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ.

ಭಗವದ್ಗೀತೆಯ ಮತ್ತು ದಾಸವರೇಣ್ಯರ ಕನ್ನಡದ ಕೆಲವು ಹೊಸ ಪ್ರಯೋಗಗಳನ್ನು, ಸ್ಥಳೀಯ ಪ್ರತಿಭೆಗಳನ್ನು, ಹಳೆಯ ಮಧುರ ನೆನಪುಗಳನ್ನು, ಸಂಗೀತ ಪಾಠಗಳನ್ನು ಕೇಳಿಸುತ್ತಿದ್ದೆಯಲ್ಲ. ಈಗೆಲ್ಲಿ ಕೇಳೋಣ? ಮತ್ತೆ ಹುಟ್ಟಿ ಬರುವೆಯಾ?

ಬಿ.ಎಸ್‌.ಶೈಲಜಾ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.