ADVERTISEMENT

ಮಹಿಳಾ ವಿಜ್ಞಾನಿಗಳ ಶ್ಲಾಘನೀಯ ಕಾರ್ಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 19:39 IST
Last Updated 23 ಜುಲೈ 2019, 19:39 IST

ಚಂದ್ರಯಾನ– 2 ಕಾರ್ಯಯೋಜನೆಗಾಗಿ ಬಲಶಾಲಿ ರಾಕೆಟ್‌ ಅನ್ನು ನಭಕ್ಕೆ ಏರಿಸುವ ಕಾರ್ಯದಲ್ಲಿ ನಮ್ಮ ಮಹಿಳಾ ವಿಜ್ಞಾನಿಗಳು ಮುಂಚೂಣಿಯಲ್ಲಿ ಇದ್ದುದನ್ನು ತಿಳಿದು ರೋಮಾಂಚನವಾಯಿತು. ಅಂತರಿಕ್ಷ ಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಜಗತ್ತಿನ ಪ್ರತಿಭಾನ್ವಿತ ಮಹಿಳೆಯರಲ್ಲಿ, ಭಾರತೀಯ ಮೂಲದ ಕಲ್ಪನಾ ಚಾವ್ಲಾ ಅವರ ಹೆಸರು ಚಿರಸ್ಮರಣೀಯ.

2022ರಲ್ಲಿ ಅಮೆರಿಕದ ಮಹಿಳಾ ಅಂತರಿಕ್ಷಯಾನಿಯು ಚಂದ್ರನಲ್ಲಿ ಇಳಿಯುವವರಿದ್ದಾರೆ. ಅದರ ಬೆನ್ನಲ್ಲೇ, ಭಾರತೀಯ ಮಹಿಳಾ ಯಾನಿಯೂ ಚಂದ್ರನಲ್ಲಿ ಇಳಿಯುವಂತಾದರೆ ಭಾರತೀಯರು ಆಶ್ಚರ್ಯಪಡಬೇಕಾಗಿಲ್ಲ. ಭಾರತೀಯ ಮಹಿಳೆಯು ಸಹನೆಯ ಸಾಕಾರಮೂರ್ತಿ ಆಗಿರುವಂತೆಯೇ, ಸಾಹಸದಲ್ಲಿ ಯಾರಿಗಿಂತಲೂ ಹಿಂದೆ ಬೀಳುವವಳಲ್ಲ ಎಂಬ ಮಾತಿಗೆ ಚಂದ್ರಯಾನ– 2ರ ಉಡ್ಡಯನದ ಯಶಸ್ಸೇ ಸಾಕ್ಷಿ.

– ಬಸವರಾಜ ಡಿ. ಕುಡಚಿ,ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.