ADVERTISEMENT

ಸಂವಾದಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2013, 19:59 IST
Last Updated 20 ಜನವರಿ 2013, 19:59 IST
ಸಂವಾದಕ್ಕೆ ಆಹ್ವಾನ
ಸಂವಾದಕ್ಕೆ ಆಹ್ವಾನ   

ಸಾಂಸ್ಕೃತಿಕ ವೈವಿಧ್ಯವೆಂದು ಗುರುತಿಸುವ ಕಲಾ ಪ್ರಕಾರಗಳು ಜಾತಿಗೆ ಸೀಮಿತವಾಗುವ ವ್ಯಂಗ್ಯವೊಂದು ನಮ್ಮ ಮುಂದಿರುವಂತೆಯೇ ಜಾತಿಯನ್ನು ಮೀರಿವೆ ಎಂಬ ಭಾವ ಹುಟ್ಟಿಸುವ ಕಲಾ ಪ್ರಕಾರಗಳೊಳಗೆ ಜಾತೀಯತೆ ಸುಪ್ತವಾಗಿರುವ ವಾಸ್ತವವೂ ನಮ್ಮೆದುರು ಇದೆ. ಈ ಹಿನ್ನೆಲೆಯಲ್ಲಿ ಭಿನ್ನ ಕಲಾ ಪ್ರಕಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚರ್ಚಿಸಿರುವ ಬರಹಗಳು ಇಲ್ಲಿವೆ. ತನ್ನ ಮೇರೆಗಳನ್ನು ವಿಶ್ವಾತ್ಮಕವಾಗಿ ವಿಸ್ತರಿಸಿಕೊಂಡಿರುವ ಚಿತ್ರ ಕಲಾ ಕ್ಷೇತ್ರದಲ್ಲಿರುವ ಸುಪ್ತ ಜಾತಿಕಾರಣವನ್ನು ಪ್ರಸಿದ್ಧ ಕಲಾವಿಮರ್ಶಕರೇ ಇಲ್ಲಿ ಅನಾವರಣಗೊಳಿಸಿದ್ದಾರೆ.

ಯಕ್ಷಗಾನದ ಹಿರಿಯರಲ್ಲೊಬ್ಬರು ತಮ್ಮ ಅನುಭವವನ್ನು ಮುಂದಿಟ್ಟು ಜಾತಿಯನ್ನು ಮೀರುವ ಮಧ್ಯಮ ಮಾರ್ಗವೊಂದನ್ನು ಸೂಚಿಸಿದ್ದಾರೆ. `ಹೊರಗೆ ಉಳಿದುಕೊಳ್ಳುವ' ಪ್ರತಿಭಟನಾ ಮಾದರಿಯ ಮಿತಿಯನ್ನು ಮತ್ತೊಬ್ಬ ವಿದ್ವಾಂಸರು ತೆರೆದಿಟ್ಟಿದ್ದರೆ, `ಪ್ರಜಾವಾಣಿ' ಬಳಗದ ವರದಿಗಾರರೊಬ್ಬರು ವೀರಗಾಸೆ ಕಲೆಯ ದ್ವಂದ್ವವನ್ನು ಅನಾವರಣಗೊಳಿಸಿದ್ದಾರೆ.

ಈ ನಿಲುವುಗಳಿಗೆ ಭಿನ್ನವಾದ ಬಗೆಯಲ್ಲಿ ವಿಷಯವನ್ನು ಗ್ರಹಿಸಿರುವ ಓದುಗರೊಬ್ಬರ ಬರಹವೂ ಇದೆ. ಈ ಬರಹಗಳ ಮಿತಿಗಳೇನೇ ಇದ್ದರೂ ಚರ್ಚೆಯೊಂದಕ್ಕೆ ಬೇಕಿರುವ ಪ್ರಶ್ನೆಗಳನ್ನಂತೂ ಮುಂದಿಡುತ್ತಿವೆ. ನಿಮ್ಮ ಪ್ರತಿಕ್ರಿಯೆಗಳು ಈ ಚರ್ಚೆಯನ್ನು ಅರ್ಥ ಪೂರ್ಣಗೊಳಿಸುವುದರೊಂದಿಗೆ ಹೊಸ ವಿಚಾರಗಳನ್ನು ಬಯಲಿಗೆ ತರುತ್ತವೆ ಎಂಬುದು ನಮ್ಮ ನಿರೀಕ್ಷೆ.

ನಿಮ್ಮ ಪ್ರತಿಕ್ರಿಯೆಯನ್ನು ಅಂಚೆ ಅಥವಾ ಇಮೇಲ್ ಮೂಲಕ 2013ರ ಜನವರಿ 26ರ ಒಳಗೆ ಕಳುಹಿಸಬಹುದು. ವಿಳಾಸ: `ಸಂಪಾದಕರು, `ಜಾತಿ ಸಂವಾದ' ವಿಭಾಗ, 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು -560001'
ಇಮೇಲ್:jathisamvada@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT