
ಪ್ರಜಾವಾಣಿ ವಾರ್ತೆ
ಹತ್ತು ವರ್ಷದ ಮಕ್ಕಳು ಶಾಲಾಪಠ್ಯವನ್ನು ಓದಿ ನೆನಪಿಟ್ಟುಕೊಳ್ಳುವುದೇ ಕಷ್ಟ. ಸ್ವಲ್ಪ ಚುರುಕಾಗಿರುವವರು ಗಣಿತ, ವಿಜ್ಞಾನ ಹೀಗೆ ಕೆಲವೊಂದು ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾರೆ.
ಹರಿಯಾಣದ ಪಂಚಕುಲ ಸಮೀಪದ ಭವನ್ ವಿದ್ಯಾಲಯದಲ್ಲಿ ಓದುತ್ತಿರುವ ಕೌಟಿಲ್ಯ ಪಂಡಿತ್ ಉಳಿದ ಮಕ್ಕಳಿಗಿಂತ ತುಂಬಾ ಭಿನ್ನ. ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಬೇಕಿದ್ದರೆ ಗೂಗಲ್ ಹುಡುಕುವ ಬದಲು ಈ ಬಾಲಕನನ್ನು ಕೇಳಿದರೆ ಸಾಕು ಎನ್ನುತ್ತಾರೆ. ಕೌಟಿಲ್ಯನ ಬಗ್ಗೆ ತಿಳಿದವರು. 213 ದೇಶಗಳ ಬಹುತೇಕ ಮಾಹಿತಿ ಮತ್ತು ಅಂಕಿ ಅಂಶಗಳು ಇವನಿಗೆ ಗೊತ್ತು. ಕೌಟಿಲ್ಯನ ಐಕ್ಯೂ ಮಟ್ಟ 150ರಷ್ಟಿದೆ. ಎಲ್ಲರೂ ಈತನನ್ನು ಗೂಗಲ್ ಬಾಯ್ ಎಂದೇ ಕರೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.