ADVERTISEMENT

ಕಾಣೆಯಾಗದಿರುವ ಬಗ್ಗೆ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಕಾಣೆಯಾಗದಿರುವ ಬಗ್ಗೆ ಪ್ರಕಟಣೆ
ಕಾಣೆಯಾಗದಿರುವ ಬಗ್ಗೆ ಪ್ರಕಟಣೆ   

ವಾಟ್ಸ್‌ಆ್ಯಪ್ ಈಗ ‘ಲೈವ್ ಲೊಕೇಷನ್’ ಎಂಬ ಹೊಸ ಫೀಚರ್ ಪರಿಚಯಿಸಿದೆ. ಈ ಆಯ್ಕೆಯ ಮೂಲಕ ನಾವು ಓಡಾಡುವ ದಾರಿಯ ಲೈವ್‌ ಲೊಕೇಷನ್ ಹಂಚಿಕೊಳ್ಳಬಹುದು. ಈಗಿರುವ ಲೊಕೇಷನ್ ಶೇರ್‌ ಫೀಚರ್‌ನಲ್ಲಿಯೇ ಈ ‘ಲೈವ್ ಲೊಕೇಷನ್‌’ ಆಯ್ಕೆಯೂ ಬರುತ್ತದೆ.

ಲೈವ್‌ ಲೊಕೇಷನ್ ಆಯ್ಕೆ ಮಾಡಿ ಗೆಳೆಯರಿಗೆ ಕಳುಹಿಸಿದರೆ ಸಾಕು. ನಾವು ಎಲ್ಲಿದ್ದೇವೆ ಎಂಬುದನ್ನು ನಿಖರವಾಗಿ ತೋರಿಸುತ್ತದೆ. ಇದರಲ್ಲಿ ಯಾರಿಗೆ, ಎಷ್ಟು ಹೊತ್ತು ನಮ್ಮ ಲೊಕೇಷನ್ ಬೇಕು ಎನ್ನುವುದನ್ನು ಕೂಡ ನಾವೇ ನಿರ್ಧರಿಸಬಹುದು.

ಎಲ್ಲಾದರು ಪ್ರಯಾಣ ಮಾಡಿದಾಗ ನೀವು ಎಲ್ಲಿದ್ದೀರಾ ಎಂಬ ಮಾಹಿತಿಯನ್ನು ಈ ಲೈವ್‌ ಲೊಕೇಷನ್ ತೊರಿಸುತ್ತದೆ. ಮೊಬೈಲ್ ಕಳೆದು ಹೋದರೆ ಈ ಸೌಲಭ್ಯದಿಂದ ಕಳ್ಳರ ಲೊಕೇಷನ್ ಕಂಡುಹಿಡಿಯಬಹುದು. ಇದು ಭಾರತ ಹಲವು ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಅಪ್‌ಡೇಟ್‌ ಸಿಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.