ADVERTISEMENT

ಕೊಂಕಣಾ ಕಾರಣ...

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ಕೊಂಕಣಾ ಕಾರಣ...
ಕೊಂಕಣಾ ಕಾರಣ...   

–ಸುರೂಪಶ್ರೀ ಸಾರ್‌ಮ್ಮಾ

**

* ‘ಎ ಡೆತ್‌ ಇನ್‌ ಗಂಜ್‌’ ಸಿನಿಮಾವನ್ನು ನೀವು ಒಪ್ಪಿಕೊಂಡಿದ್ದೇಕೆ?
ಕೊಕೊ (ಕೊಂಕಣಾ ಸೇನ್‌ ಶರ್ಮಾ) ಸಿನಿಮಾ ಮಾಡುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ಒಪ್ಪಿಕೊಂಡೆ. ನಂಬ್ತೀರೋ ಇಲ್ವೋ, ಇದು 70ರ ದಶಕದ ಕತೆಯುಳ್ಳ ಸಿನಿಮಾ ಎಂಬ ಒಂದೆಳೆ ಬಿಟ್ಟರೆ ನನಗೆ ಏನೇನೂ ಮಾಹಿತಿ ಇರಲಿಲ್ಲ. ಆದರೆ ಕೊಕೊ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ಅನುಭವವೇ ಬೇರೆ.

ADVERTISEMENT

* ಕೊಂಕಣಾ ಒಳ್ಳೆಯ ನಟಿ ಎಂಬುದು ಗೊತ್ತಿದೆ. ನಿರ್ದೇಶಕಿಯಾಗಿ...
ಕೊಂಕಣಾ ಎಲ್ಲಾ ರೀತಿಯಿಂದಲೂ ಪರಿಪೂರ್ಣೆ ಅಷ್ಟೇ ಅಲ್ಲ ಪ್ರಬುದ್ಧೆ. ಯಾವುದೇ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಅವರು ಗಮನ ಕೊಡುತ್ತಾರೆ. ಪಾತ್ರಗಳ ಮೂಲಕ ವೀಕ್ಷಕರಿಗೆ ಏನು ಕೊಡಬೇಕು, ಭಾವನಾತ್ಮಕವಾಗಿ ಹೇಗೆ ಪ್ರಸ್ತುತಪಡಿಸಬೇಕು, ಅಂತಿಮವಾಗಿ ಎಂಥ ಫಲಿತಾಂಶ ಬೇಕು ಎಂಬ ನಿಖರ ಅರಿವು ಅವರಿಗಿರುತ್ತದೆ.

* ನಿಮ್ಮ ಖಡಕ್‌ ಮಾತಿನಿಂದ ಯಾವತ್ತೂ ತೊಂದರೆ ಆಗಿಲ್ವಾ?
ಆಗಿರಲೂಬಹುದು (ನಗು). ನನಗೆ ಅನಿಸಿದ್ದನ್ನು ಹೇಳಿದಾಗ ಜನ ನನ್ನ ಬಗ್ಗೆ ಟೀಕೆ ಮಾಡಬಹುದು. ಅದರ ಬಗ್ಗೆ ಕೇರ್‌ ಮಾಡೋಳಲ್ಲ ನಾನು. ಮತ್ತೊಂದು ವಿಷಯ. ನನ್ನ ಬಗ್ಗೆ ಏನೇ ಬರೆದರೂ ನಾನು ಓದೋದಿಲ್ಲ. ನಾನೇನು ಮಾಡುತ್ತಿದ್ದೇನೆ ಎಂಬುದು ನನಗೆ ಗೊತ್ತಿದೆ. ನಾನು ಮಾಡುವ ಕೆಲಸವೇ ನನ್ನ ಬಗ್ಗೆ ಹೇಳುತ್ತದೆ. ನಾನೇನೂ ಹೇಳುವ ಅಗತ್ಯವಿಲ್ಲ.

* ಹೀಲ್ಸ್‌ ಚಪ್ಪಲಿ ನಿಮಗೆ ಇಷ್ಟವೇ?
ಹೌದು, ಹೀಲ್ಸ್‌ ನನಗೆ ಇಷ್ಟ. ಆದರೆ ಸನ್ನಿವೇಶಕ್ಕೆ ಅಗತ್ಯವಿದ್ದರೆ ಮಾತ್ರ ನಾನು ಹೀಲ್ಸ್‌ ಚಪ್ಪಲಿ ಹಾಕುತ್ತೇನೆ.

* ಬರ್ಗರ್‌ ಮತ್ತು ಪಿಜ್ಜಾ, ಇವೆರಡರಲ್ಲಿ ನಿಮಗೆ ಯಾವುದು ಇಷ್ಟ?
ನಾನು ಮಾಂಸಾಹಾರಿಯಾಗಿದ್ದಾಗ ‌ಸಿಕ್ಕಾಪಟ್ಟೆ ಬರ್ಗರ್ ತಿನ್ನುತ್ತಿದ್ದೆ. ಈಗ ನಾನು ಸಸ್ಯಾಹಾರಿ. ಹಾಗಾಗಿ ಪಿಜ್ಜಾ ನನ್ನ ಆಯ್ಕೆ.

* ಈಚೆಗಷ್ಟೇ ಈಶಾನ್ಯ ಭಾರತ ಸುತ್ತಾಡಿದಿರಿ, ಹೇಗಿತ್ತು?
ಅದು ಅದ್ಭುತ ಅನುಭವ. ಅರುಣಾಚಲಪ್ರದೇಶ ನನಗೆ ತುಂಬಾ ಇಷ್ಟವಾಯಿತು. ‘ಸಂಗ್ಟಿ’ ಎಂಬ ಒಂದು ಹಳ್ಳಿ ನನಗೆ ಆಪ್ತವೆನಿಸಿತು. ಯಾಕೆ ಗೊತ್ತಾ? ಅಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇರಲಿಲ್ಲ. ಅದೊಂಥರಾ ದ್ವೀಪದಂತೆ ಇತ್ತು. ಆದರೂ ಸುಂದರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.