ADVERTISEMENT

ತಿರುಗು ಮುರುಗು ಮನೆ

ಸಂದೀಪ್ ಕೆ.ಎಂ.
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಉಲ್ಟಾ ಮನೆ
ಉಲ್ಟಾ ಮನೆ   

ರಷ್ಯಾದ ಊಫಾ ನಗರದಲ್ಲಿ ವಾಸ್ತುಶಿಲ್ಪಿಯೊಬ್ಬ ತಲೆಕೆಳಗಾದ ಮನೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾನೆ. ಈ ಮನೆಯಲ್ಲಿ ನೆಲ ಆಕಾಶ ನೋಡುತ್ತಿದ್ದರೆ, ಸೂರು ಭೂಮಿಯನ್ನು ಸ್ಪರ್ಶಿಸುತ್ತಿದೆ.

ಹಾಲಿವುಡ್ ಸಿನಿಮಾದ ಮಾಯಾನಗರಿಯ ಮನೆಯಂತೆ ಈ ಸೂರು ಭಾಸವಾಗುತ್ತದೆ. ಈ ಮಾಯಾ ಮನೆ ನಿರ್ಮಾಣ ಮಾಡಲು 100 ಕಾರ್ಮಿಕರು ಶ್ರಮಿಸಿದ್ದಾರೆ. ಒಮ್ಮೆಲೆ 50 ಮಂದಿ ಮನೆಯೊಳಗೆ ಹೋಗಬಹುದಾದಷ್ಟು ದೊಡ್ಡದಾಗಿದೆ ಈ ಮನೆ.

ಇದರ ವಿಶಿಷ್ಟ ವಿನ್ಯಾಸದಿಂದಲೇ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ವಿವಿಧ ಭಂಗಿಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಸಂತಸಪಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿಗರ ಫೋಟೊ ವೈರಲ್ ಆಗಿ ಇದರ ಜನಪ್ರಿಯತೆಯೂ ಹೆಚ್ಚಾಗಿದೆ.

ADVERTISEMENT

₹2.4 ಕೋಟಿ ವೆಚ್ಚದ ಮನೆ 3000 ಚದರ ಅಡಿ ವಿಸ್ತೀರ್ಣದಲ್ಲಿದೆ. ಪೀಠೋಪಕರಣಗಳು, ಬಿನ್ ಬ್ಯಾಗ್, ಪುಸ್ತಕಗಳು ಅಡುಗೆ ಮನೆಯಲ್ಲಿರುವ ವಸ್ತುಗಳು ಆಗಸಕ್ಕೆ ಮುಖ ಮಾಡಿರುವ ನೆಲಕ್ಕೆ ಬಿಗಿಯಾಗಿ ಅಂಟಿಕೊಂಡಿದೆ. ಡೈನಿಂಗ್ ಟೇಬಲ್ ಮೇಲಿರುವ ಹಣ್ಣು, ಆಹಾರ, ಜ್ಯೂಸ್ ಇನ್ನೇನು ತಲೆ ಮೇಲೆ ಬೀಳುತ್ತಿದೆ ಎಂದು ಭಾಸವಾಗುತ್ತದೆ.

ಬೇಡ್ ರೂಂನಲ್ಲಿ ಮಂಚವು ತಲೆ ಮೇಲೆ ಇರುತ್ತದೆ. ಹಾಲ್‌ನಲ್ಲಿರುವ ಟಿವಿಯಲ್ಲಿ ಪ್ರಸಾರವಾಗುತ್ತಿರುವ ದೃಶ್ಯವು ಉಲ್ಟಾ ಕಾಣಿಸುತ್ತದೆ. ಇಲ್ಲಿ ಕ್ಲಿಕಿಸಿದ ಫೋಟೊ ನೋಡುತ್ತಿದ್ದರೆ ಬಾಹ್ಯಕಾಶಯಾನಿಗಳು ಗಾಳಿಯಲ್ಲಿ ತೇಲವಂತಿರುವಂತೆ ಗೋಚರಿಸುತ್ತದೆ.

ಒಟ್ಟಿನಲ್ಲಿ ಒಂದು ಮನೆಯನ್ನು ಬುಡ ಸಮೇತ ಕಿತ್ತು ಉಲ್ಟಾ ಇಡಲಾಗಿದೆ. ಆದರೆ ಮನೆಯ ಯಾವ ವಸ್ತುಗಳು ಸ್ಥಾನಪಲ್ಲಟಗೊಳ್ಳದೇ ಭದ್ರವಾಗಿವೆ. ವಿಭಿನ್ನ ದೃಷ್ಟಿಕೋನದಿಂದ ಜೀವನ ನೋಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮನೆ ನಿರ್ಮಿಸಲಾಗಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.