ADVERTISEMENT

ತೂಕದ ಲೆಕ್ಕಕ್ಕೆ ಬೆಲ್ಟ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST
ತೂಕದ ಲೆಕ್ಕಕ್ಕೆ ಬೆಲ್ಟ್
ತೂಕದ ಲೆಕ್ಕಕ್ಕೆ ಬೆಲ್ಟ್   

ತೂಕ ಇಳಿಸಲು ಪಡಬೇಕಾದ ಪಾಡು ಅಷ್ಟಿಷ್ಟಲ್ಲ. ಡಯೆಟ್, ವ್ಯಾಯಾಮ, ಯೋಗ... ಏನೇನೆಲ್ಲಾ ಇಲ್ಲ? ಇವೆಲ್ಲಕ್ಕೆ ಜೊತೆಯಾಗಿ, ತೂಕ ಇಳಿಸಲು ನೆರವಾಗುವ, ಧರಿಸಬಹುದಾದ ಹೆಲ್ತ್‌ ಟ್ರ್ಯಾಕರ್ ಒಂದನ್ನು ಇತ್ತೀಚೆಗೆ ಕಂಡುಕೊಳ್ಳಲಾಗಿದೆ. ಅದೇ ಡಯೆಟ್ ಸ್ಟಾರ್ ಬೆಲ್ಟ್.

ದರ್ಜಿಯ ಅಳತೆಯ ಸ್ಕೇಲ್‌ ವಿನ್ಯಾಸ ಇದರದ್ದು. ಮಾಮೂಲಿ ತೊಡುವ ಬೆಲ್ಟ್‌ನಂತೆಯೇ ಇದನ್ನು ದಿನವೂ ತೊಟ್ಟುಕೊಳ್ಳಬಹುದು. ಇದೇನೂ ಬೊಜ್ಜು ಕರಗಿಸಿ ತೂಕ ಇಳಿಸುವುದಿಲ್ಲ. ಆದರೆ ತೂಕ ಇಳಿಸಲು ನಿಮ್ಮನ್ನು ಯಾವಾಗಲೂ ನೆನಪಿಸುತ್ತಿರುತ್ತದೆ.

ನಾವು ಮಾಡಬೇಕಾದ ಕೆಲಸವನ್ನು ಪದೇ ಪದೇ ನೆನಪಿಸುತ್ತಿದ್ದರೆ ಅಥವಾ ನಮ್ಮ ಲಕ್ಷ್ಯ ಬಯಸುವ ವಸ್ತು ಸದಾ ಕಣ್ಣ ಮುಂದೆಯೇ ಇದ್ದರೆ, ಆ ಕೆಲಸವನ್ನು ಬೇಗ ಮಾಡಿಮುಗಿಸಬಹುದು ಎಂಬ ಊಹೆಯನ್ನೇ ಎದುರಿಗಿಟ್ಟುಕೊಂಡು ಈ ಬೆಲ್ಟ್ ರೂಪಿಸಲಾಗಿದೆ. ಬೆಲ್ಟ್ ಹಾಕಿಕೊಳ್ಳುವಾಗ, ನಾನು ಎಷ್ಟು ಸಣ್ಣಗಾಗಿದ್ದೇನೆ, ಇನ್ನೂ ಎಷ್ಟು ಸಣ್ಣಗಾಗಬೇಕು ಎಂಬುದನ್ನು ಅಳತೆ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ. ಅದರೆಡೆಗೆ ಜಾಗರೂಕರಾಗಿರುತ್ತೇವೆ. ಇದು ಪರೋಕ್ಷವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆಯಂತೆ. 43+ ಇಂಚು / 110+ ಸೆಂಟಿಮೀಟರ್‌ವರೆಗೂ ಬೆಲ್ಟ್ ವಿಸ್ತರಣೆಗೊಳ್ಳುತ್ತದೆ. ಎಲ್ಲಿಗೆ ಹೋದರೂ ನಿಮ್ಮ ತೂಕದ ಮೇಲೆ ಒಂದು ಕಣ್ಣಿಟ್ಟಿರಬಹುದು. ⇒v

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.