ADVERTISEMENT

ದಾಂಪತ್ಯಗೀತೆಗೆ ತಲೆದೂಗಿದರು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ದಾಂಪತ್ಯಗೀತೆಗೆ ತಲೆದೂಗಿದರು
ದಾಂಪತ್ಯಗೀತೆಗೆ ತಲೆದೂಗಿದರು   

‘ಪ್ರಜಾವಾಣಿ’ ಗುಲ್‌ಮೊಹರ್‌ ಪುಟದಲ್ಲಿ ಅ.3ರಂದು ಪ್ರಕಟವಾಗಿದ್ದ ‘ಆಕೆಯನ್ನು ಸದಾ ಪ್ರೀತಿಸುವೆ...’ ಲೇಖನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನೂರಾರು ಮಂದಿ ಲೇಖನವನ್ನು ಶೇರ್‌ ಮಾಡಿದ್ದಾರೆ, ಕಾಮೆಂಟ್‌ ಬರೆದಿರುವ ಬಹುತೇಕರು ‘ನಿಮ್ಮದು ನಿಜವಾದ ಪ್ರೀತಿ. ಅಭಿನಂದನೆಗಳು’ ಎಂದು ಖುಷಿ ಹಂಚಿಕೊಂಡಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

*
ನಿಮಗೆ ನಿಮ್ಮ ಪ್ರೀತಿ ಸಿಕ್ಕಿದೆ
ನಿಮಗೆ ನಿಮ್ಮ ಪ್ರೀತಿ ಸಿಕ್ಕಿದೆ. ಅಭಿನಂದನೆಗಳು. ಎಲ್ಲರಿಗೂ ಇಂತ ಭಾಗ್ಯ ಸಿಗುವುದಿಲ್ಲ.
–ರಾಜ್‌ಕುಮಾರ್, ಬೆಂಗಳೂರು

*
ಪ್ರೀತಿಯ ಬೆಳಕು
ದಾಂಪತ್ಯದ ಪ್ರೀತಿಯಿಂದ ಬೆಳಗುತ್ತಿರುವ ನಿಮ್ಮ ಬದುಕಿನಲ್ಲಿ ಕತ್ತಲು ಎಂದಿಗೂ ಆವರಿಸದು. ದೇವರು ಸದಾ ನಿಮ್ಮೊಡನೆ ಇರುತ್ತಾನೆ.
–ಕೆಂಚವೀರಪ್ಪ, ಜಿ.ಕೆ.ದುರ್ಗ

ADVERTISEMENT

*
ಅಪರೂಪದ ಪ್ರೀತಿ
ನಿಮ್ಮ ಪ್ರೀತಿ ದೇಹ-ಮನಸುಗಳಿಗೆ ಅತೀತವಾದುದು. ನೀವು ಆತ್ಮ ಸಂಗಾತಿಗಳು. ಸೂಕ್ಷ್ಮ ಸಂವೇದನೆ, ಸದಭಿರುಚಿ ಮತ್ತು ಸಂಗಾತಿಯ ನಿರೀಕ್ಷೆಗಳನ್ನು ಅರಿತು ಬಾಳುವ ನಿಮ್ಮ ದಾಂಪತ್ಯ ಜೀವನ ಎಲ್ಲರಿಗೂ ಮಾದರಿ.
–ಮುತ್ತು ನಾಯ್ಕೋಡಿ

*
ಇದು ಆರಂಭ
ಎಲ್ಲರೂ ತಮ್ಮ ಬದುಕು ಮುಗಿಯಿತು ಎಂದುಕೊಳ್ಳುವ ಹಂತದಿಂದ ನೀವು ಬದುಕನ್ನು ಆರಂಭಿಸಿದ್ದೀರಿ. ನಿಮ್ಮದು ನಿಜವಾದ ಪ್ರೀತಿ ಎಂದು ನಿರೂಪಿಸಿದ್ದೀರಿ. ನೀವು ತುಂಬಾ ದೊಡ್ಡವರು ಸರ್.
–ವೈ.ಎಸ್.ನಾಡಗೇರಿ

*
ಬಾಳು ಬೆಳಗಲಿ
ಮುಖದ ಸೌಂದರ್ಯಕ್ಕಿಂತ ಆತ್ಮದ ಸೌಂದರ್ಯಕ್ಕೆ ಬೆಲೆ ಕೊಟ್ಟ ನಿಮ್ಮ ಬಾಳು ಹಲವರಿಗೆ ಮಾದರಿ. ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲವಾಗಿ ಬೆಳೆಯಲಿ
–ಎಂ.ಕೆ.ಫಕೀರಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.