ADVERTISEMENT

ನೀಳ ಕೇಶಾಲಂಕಾರಕ್ಕೆ ಜಡೆಬಿಲ್ಲೆಗಳು

ಶ್ವೇತಾ
Published 24 ಏಪ್ರಿಲ್ 2018, 8:11 IST
Last Updated 24 ಏಪ್ರಿಲ್ 2018, 8:11 IST
ನೀಳ ಕೇಶಾಲಂಕಾರಕ್ಕೆ ಜಡೆಬಿಲ್ಲೆಗಳು
ನೀಳ ಕೇಶಾಲಂಕಾರಕ್ಕೆ ಜಡೆಬಿಲ್ಲೆಗಳು   

ಹೆಣ್ಣು ಮಕ್ಕಳು ಕೂದಲಿನ ಶೃಂಗಾರವನ್ನು ಹಲವಾರು ಶೈಲಿಯಲ್ಲಿ ಮಾಡಿಕೊಳ್ಳುತ್ತಾರೆ. ಫ್ಯಾಷನ್‌ಗಳಿಗೆ ಹಾಗೂ ಕೆಲವೊಂದು ಕಾರ್ಯಕ್ರಮಗಳಿಗೆ ತಕ್ಕಂತೆ ಕೂದಲನ್ನು ಶೃಂಗಾರಿಸಿಕೊಳ್ಳುತ್ತಾರೆ. ಕೆಲವೊಂದು ಕಾರ್ಯಕ್ರಮ
ಗಳಿಗೆ ಹೋಗಲು ಬ್ಯುಟಿ ಪಾರ್ಲರ್‌ಗಳಿಗೆ ತೆರಳಿ ಕೂದಲಿನ ಅಲಂಕಾರ ಮಾಡಿಕೊಳ್ಳುವುದು ಹೆಚ್ಚು.ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಉದ್ದ ಜಡೆ ಇಟ್ಟು ಅದಕ್ಕೆ ಮಲ್ಲಿಗೆ ಹೂವಿನಿಂದ ಅಲಂಕರಿಸುವುದು ಸಹಜ. ಆದರೆ ಈಗ ಆ ರೀತಿಯ ಜಡೆಗಳಿಗಾಗಿ ಜಡೆಬಿಲ್ಲೆಗಳನ್ನು ಇಟ್ಟರೆ ಹೆಚ್ಚಿನ ಮೆರುಗು ನೀಡುತ್ತದೆ. ಮದುಮಗಳಿಗೂ ಜಡೆಯ ಶೃಂಗಾರ ಮಾಡಿ ಅದಕ್ಕೆ ಜಡೆ ಬಿಲ್ಲೆಗಳನ್ನು ಇಟ್ಟರೆ ಜಡೆಯ ಅಂದವನ್ನು ಇನ್ನೂ ಹೆಚ್ಚಿಸುತ್ತದೆ.ಜಡೆಬಿಲ್ಲೆಗಳನ್ನು ಕೇವಲ ಅಂಗಡಿಗಳಿಂದಲೆ ಖರೀದಿಸಬೇಕಾಗಿಲ್ಲ. ಕೆಲವು ಹೂವುಗಳಿಂದಲೂ ಕೂಡ ಜಡೆಗೆ ತಕ್ಕ ಬಿಲ್ಲೆಗಳನ್ನು ನಾವೇ ತಯಾರಿಸಿ ಜಡೆಯನ್ನು ಶೃಂಗಾರಿಸಿಕೊಳ್ಳಬಹುದು.

ಅದೇ ರೀತಿ ಸಿಲ್ಕ್ ಥ್ರೆಡ್‌, ಕ್ವಿಲಿಂಗ್ ಪೇಪರ್, ಕುಂದನ್ ಹಾಗೂ ಮುತ್ತುಗಳಿಂದ ಜಡೆ ಬಿಲ್ಲೆಗಳನ್ನು ತಯಾರು ಮಾಡಬಹುದು. ಇದಕ್ಕೆ ಕೊಂಚ ಸಮಯದ ಅಗತ್ಯವಿರುತ್ತದೆ.ಜಡೆ ಬಿಲ್ಲೆಗಳು ಕೆಲವು ಭಾರಿ ನಮಗೆ ಬೇಕಾದ ವಿನ್ಯಾಸದಲ್ಲಿ ದೊರೆಯುವುದು ಕಷ್ಟ. ಆ ಕಾರಣಕ್ಕೆ ನಮಗೆ ಬೇಕಾದ ವಿನ್ಯಾಸದ ಹಾಗೂ ಬೇಕಾದ ಬಣ್ಣಗಳ ಬಿಲ್ಲೆ ಗಳನ್ನು ನಾವೇ ಸಿಲ್ಕ್‌ಥ್ರೆಡ್ ಹಾಗೂ ಡೊನಟ್ ರಿಂಗ್ ಬಳಸಿ ಬಿಲ್ಲೆಗಳನ್ನು ಮಾಡಿ ಅದಕ್ಕೆ ಬಾಲ್‌ ಚೈನ್, ಸ್ಟೋನ್ ಲೇಸ್‌ ಹಾಗೂ ಅಗತ್ಯವಿದ್ದರೆ ಜುಮ್ಕಗಳನ್ನು ಬಳಸಿ ಅಂದದ ಜಡೆಬಿಲ್ಲೆಗಳನ್ನು ತಯಾರಿಸಬಹುದು.

ಕ್ವಿಲಿಂಗ್ ಪೇಪರ್‌ಗಳಲ್ಲಿ ಬಿಲ್ಲೆಗಳನ್ನು ಬೇಕಾದ ಆಕಾರದಲ್ಲಿ ತಯಾರಿಸಬಹುದು. ಈ ರೀತಿಯ ಜಡೆ ಬಿಲ್ಲೆಗಳಿಗೆ ಕುಂದನ್ ಬಾಲ್ ಚೈನ್‌ ಹಾಗೂ ಸ್ಟೋನ್ ಲೇಸ್‌ಗಳನ್ನು ಅಂಟಿಸಿದರೆ ಆಕರ್ಷಕವಾಗಿ ಕಾಣುತ್ತದೆ. ಹೂವಿನ ದಳಗಳನ್ನು ಅಂದವಾಗಿ ಅಚ್ಚುಕಟ್ಟಾಗಿ ಜೋಡಿಸಿ ಬಿಲ್ಲೆಗಳನ್ನು ಮಾಡಬಹುದು. ಮದುಮಗಳಿಗೆ ಜಡೆಗೆ ಪೂರ್ತಿ ಮಲ್ಲಿಗೆಯನ್ನು ಇಟ್ಟು ಅದರ ಮೇಲೆ ಹೂವಿನಿಂದ ಮಾಡಿದ ಬಿಲ್ಲೆಗಳನ್ನು ಇಟ್ಟರೆ ಅಂಗಡಿಯಿಂದ ತಂದ ಸ್ಟೋನ್ ಜಡೆ ಬಿಲ್ಲೆಗಳಿಗಿಂದ ಹೂವಿನ ಎಸಳಿನ ಬಿಲ್ಲೆಗಳು ಜಡೆಗೆ ಹೆಚ್ಚಿನ ಮೆರುಗು ನೀಡುತ್ತದೆ.

ADVERTISEMENT

ಜಡೆ ಬಿಲ್ಲೆಗಳು ಕೇವಲ ಮದುಮಗಳಿಗೆ ಮಾತ್ರ ಬಳಸುವುದಲ್ಲದೆ, ಇತರರೂ ತಮ್ಮ ಕೂದಲಿನ ಶೃಂಗಾರಕ್ಕೆ ಬಿಲ್ಲೆಗಳನ್ನು ಇಡಬಹುದು. ಸೀರೆ ಹಾಗೂ ಸಾಂಪ್ರದಾಯಿಕ ಡ್ರೆಸ್‌ಗಳನ್ನು ಧರಿಸಿದಾಗ ಜಡೆಯ ಅಲಂಕಾರಕ್ಕೆ ಈ ಜಡೆ ಬಿಲ್ಲೆಗಳು ಹೆಚ್ಚಿನ ಸೌಂದರ್ಯವನ್ನು ತಂದುಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.