ADVERTISEMENT

ಪ್ರಾಣಿಯೊಂದಿಗೆ ಸಲ್ಲದು ಸೆಲ್ಫಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
ಪ್ರಾಣಿಯೊಂದಿಗೆ ಸಲ್ಲದು ಸೆಲ್ಫಿ
ಪ್ರಾಣಿಯೊಂದಿಗೆ ಸಲ್ಲದು ಸೆಲ್ಫಿ   

ಕೈಯಲ್ಲೊಂದು ಸ್ಮಾರ್ಟ್‌ಫೋನ್ ಇದ್ದರೆ ಸಾಕು, ಕ್ಲಿಕ್ಕಿಸಿಕೊಳ್ಳುವ ಸೆಲ್ಫಿಗಳಿಗೆ ಬರವೇ ಇಲ್ಲ. ಆದರೆ ಮನುಷ್ಯರ ಈ ಸೆಲ್ಫಿ ಮೋಹ ಪ್ರಾಣಿಗಳನ್ನೂ ಬಿಡುತ್ತಿಲ್ಲ. ಪಕ್ಕದಲ್ಲಿ ಮುದ್ದಾದ ಪ್ರಾಣಿಯಿದ್ದರೆ ಸೆಲ್ಫಿಗಳ ಸಂಖ್ಯೆ ಇನ್ನಷ್ಟು ಏರುತ್ತಲೇ ಇರುತ್ತದೆ. ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವುದು ಒಂದು ರೀತಿ ಟ್ರೆಂಡ್ ಆಗಿದೆಯಂತೆ.

ಆಸ್ಟ್ರೇಲಿಯಾ, ಬ್ರೆಜಿಲ್‌ನಲ್ಲಂತೂ ಸೆಲ್ಫಿಗಳಿಗೆಂದೇ ಪ್ರಾಣಿಗಳನ್ನು ಬಳಸಿಕೊಂಡು ದುಡ್ಡು ಮಾಡುತ್ತಿರುವ ದಂಧೆಯೂ ಹೆಚ್ಚಾಗಿದೆಯಂತೆ. ಕಾಡುಪಾಪ, ಗೊರಿಲ್ಲಾ, ಹಾವು, ಜಿಂಕೆ, ಕಾಂಗರೂ ಹೀಗೆ ಹಲವು ಪ್ರಾಣಿಗಳನ್ನು ಬಂಧಿಸಿ ಸೆಲ್ಫಿಗಾಗೇ ಅವುಗಳನ್ನು ತಯಾರು ಮಾಡಲಾಗುತ್ತಿದೆ.

ಪ್ರಾಣಿಗಳು ಹುಟ್ಟಿದ ತಕ್ಷಣವೇ ಅವುಗಳನ್ನು ತಾಯಿಯಿಂದ ಬೇರ್ಪಡಿಸಿ ತಂದು ಪಳಗಿಸಲಾಗುತ್ತಿದೆ. ಇದಕ್ಕೆಂದೇ ಕಾಡು ಪ್ರಾಣಿಗಳನ್ನು ಸೆರೆಹಿಡಿಯುವ ಮಂದಿಯೂ ಹೆಚ್ಚಿದ್ದಾರೆ.

ADVERTISEMENT

ಆದರೆ ಅವುಗಳಿಗೆ ಮನುಷ್ಯನ ಈ ವರ್ತನೆಯಿಂದ ಆಗುತ್ತಿರುವ ತೊಂದರೆಗಳನ್ನು ಮಾತ್ರ ಕಡೆಗಣಿಸಲಾಗುತ್ತಿದೆ. ತಾಯಿಯಿಂದ ಬೇರ್ಪಡಿಸುವುದು, ಅವುಗಳು ಕಚ್ಚದಂತೆ ತಡೆಯಲು ಹಲ್ಲುಗಳನ್ನು ಕಿತ್ತು ಹಾಕುವುದು, ಹೇಳಿದಂತೆ ಕೇಳಲೆಂದು ಹೊಡೆಯುವುದು ಈ ವರ್ತನೆಗಳಿಂದ ಪ್ರಾಣಿಗಳಲ್ಲಿ ಒತ್ತಡವೂ ಹೆಚ್ಚುತ್ತಿದೆಯಂತೆ.

ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಈ ಸೆಲ್ಫಿಗಳ ಪ್ರಮಾಣ ಹೆಚ್ಚುತ್ತಿರುವುದನ್ನು ಗಮನಿಸಿದ ವಲ್ಡ್‌ ಅನಿಮಲ್ ಪ್ರೊಟೆಕ್ಷನ್ ಸಂಸ್ಥೆ ಹೊಸ ಆಂದೋಲನವನ್ನೇ ಕೈಗೊಂಡಿದೆ. ‘ಕ್ರುಯಲ್ಟಿ ಫ್ರೀ ಸೆಲ್ಫಿ’ ಎಂಬ ಹೊಸ ನಿಯಮದಲ್ಲಿ ‘ವೈಲ್ಡ್‌ಲೈಫ್ ಸೆಲ್ಫಿ ಪ್ಲೆಡ್ಜ್‌’ ಎಂಬ ಆಂದೋಲನ ಶುರುಮಾಡಿದೆ. ಜೊತೆಗೆ ಪ್ರಾಣಿಗಳಿಗೆ ತೊಂದರೆಯಾಗದಂತೆ ಹೇಗೆ ಸೆಲ್ಫಿ ತೆಗೆದುಕೊಳ್ಳಬಹುದು ಎಂಬ ಸಲಹೆಗಳನ್ನೂ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.