ADVERTISEMENT

ಬಾಲಿವುಡ್ ಫ್ಯಾಷನ್ ಮಾಯೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 7:22 IST
Last Updated 8 ಮಾರ್ಚ್ 2017, 7:22 IST
ಕರೀನಾ ಕಪೂರ್
ಕರೀನಾ ಕಪೂರ್   

ಸರಳ ಸುಂದರಿಯಾಗಿ ಮಿಂಚಿದ ಮಧುಬಾಲಾ: ‘ಮುಘಲ್‌–ಎ–ಆಜಮ್‌’ ಸಿನಿಮಾದ ‘ಮೋಹೆ ಪನಗಟ್‌ ಪೇ’ ಹಾಡಿನಲ್ಲಿ ಮಧುಬಾಲಾ ನೃತ್ಯವನ್ನು ಮರೆಯಲು ಸಾಧ್ಯವೇ. ಕಡಿಮೆ ಆಭರಣ ಧರಿಸಿದ್ದರೂ, ಕಣ್ಸೆಳೆಯುವ ಲೆಹೆಂಗಾದಿಂದಲೇ ಅವರು ಮಿಂಚಿದ್ದರು. 60ರ ದಶಕದಲ್ಲಿ ದೊಡ್ಡ ಫ್ಯಾಷನ್‌ ಟ್ರೆಂಡ್‌ ಅನ್ನೇ ಇದು ಸೃಷ್ಟಿಸಿತ್ತು. ಹಗುರವಾದ ಲೆಹೆಂಗಾ ಅದರ ಜೊತೆಗೆ ಕೈಗೆ ಧರಿಸುವ ಮೊಘಲ್‌ ಶೈಲಿಯ ಆಭರಣ, ಮೂಗುತಿ, ಜೊತೆಗೊಂದು ರಾಣಿ ಹಾರ ವಧುವನ್ನು ರಾಣಿಯಂತೆ ಕಂಗೊಳಿಸುವಂತೆ ಮಾಡಿತ್ತು.

ಮೆಚ್ಚುಗೆ ಗಳಿಸಿದ ಪ್ರೀತಿ ಉಡುಪು: ‘ವೀರ್‌ ಝರಾ’ ಸಿನಿಮಾದಲ್ಲಿ ಪ್ರೀತಿ ಜಿಂಟಾ ಅವರ ಮೇಕಪ್‌ ಬಹುಮೆಚ್ಚುಗೆಯನ್ನು ಪಡೆದಿತ್ತು. ಇಂದಿಗೂ ಆ ಶೈಲಿ ಪ್ರಶಂಸೆ ಗಳಿಸುತ್ತಿದೆ. ಬಿಳಿ ಬಣ್ಣದ ಲೆಹೆಂಗಾದಲ್ಲಿ ನೇರಳೆ ಬಣ್ಣದ ಅಂಚು, ಅದರ ಮೇಲೆ ಜರಿಯ ಕಸೂತಿ ಪ್ರೀತಿಗೆ ಹೊಸ ಮೆರುಗು ನೀಡಿತ್ತು.

‘ದೇವದಾಸ್‌’ನಲ್ಲಿ ಸೆಳೆದ ಜೋಡಿಗಳು: ಐಶ್ವರ್ಯಾ ರೈ ಬಚ್ಚನ್‌ ಮತ್ತು ಮಾಧುರಿ ದೀಕ್ಷಿತ್‌ ಜೋಡಿಯಾಗಿ ಕುಣಿದ ‘ಡೋಲಾ ರೇ’ ಹಾಡು ಬಹು ಜನಪ್ರಿಯವಾಯಿತು. ಅದರ ಜೊತೆ ಗಮನ ಸೆಳೆದಿದ್ದು ಇವರಿಬ್ಬರ ಉಡುಪು. ಒಂದೇ ರೀತಿಯ ಬಿಳಿ ಬಣ್ಣ ಮತ್ತು ಕೆಂಪು ಅಂಚಿನ ಬಂಗಾಲಿ ಶೈಲಿಯ ಸೀರೆ ಕೂಡ ಇಂದಿಗೂ ಜನಜನಿತವೇ.

ADVERTISEMENT

ಮಾಧುರಿ ಮಾಯೆ: ‘ಹಮ್‌ ಆಪ್‌ ಕೆ ಹೆ ಕೌನ್‌’ ಸಿನಿಮಾದಲ್ಲಿ ಸಲ್ಮಾನ್‌ ಮತ್ತು ಮಾಧುರಿ ಶೂಗಾಗಿ ಜಗಳವಾಡುವ ದೃಶ್ಯದಲ್ಲಿ ಬಹುಮಂದಿಯ ಕಣ್ಸೆಳೆದಿದ್ದು ಮಾಧುರಿ ಉಡುಪು. ಹಸಿರು ಮತ್ತು ಬಿಳಿ ಬಣ್ಣದ ಲೆಹೆಂಗಾ  ಇಂದಿಗೂ ಮೆಹೆಂದಿ ಕಾರ್ಯಕ್ರಮಕ್ಕೆ ಹೇಳಿಮಾಡಿಸಿದಂತಿದೆ.

ಸರಳವಾಗಿ ಮಿಂಚಿದ ಮೊನಿಷಾ: ಬಾಂಬೆ ಸಿನಿಮಾದಲ್ಲಿ ‘ಕೆಹನಾ ಹಿ ಕ್ಯಾ’ ಹಾಡಿನಲ್ಲಿ ಮೊನಿಷಾ ಕೊಯಿರಾಲಾ ತೊಟ್ಟಿದ್ದ ಬಿಳಿ ಲೆಹೆಂಗಾದ ಸೌಂದರ್ಯವೇ ಅದ್ಭುತ. ಇದು ಸಹ ಮದುವೆಯ ಹಿಂದಿನ ದಿನ ನಡೆಯುವ ಕಾರ್ಯಕ್ರಮಗಳಿಗೆ ಧರಿಸಲು ಸೂಕ್ತ.

ಮದರಂಗಿಯಲ್ಲಿ ಚೆಲುವಿನ ಬಿಂಬ: ಡಿಡಿಎಲ್‌ಜೆ ಸಿನಿಮಾದಲ್ಲಿ ಕಾಜೋಲ್‌ ಧರಿಸಿದ್ದ ‘ಲುಂಗಿ ಸ್ಟೈಲ್‌’ ಲೆಹೆಂಗಾ ಇಂದಿಗೂ ಯುವತಿಯರ ಮೆಚ್ಚಿನ ಆಯ್ಕೆ. ಮನೀಶ್‌ ಮಲ್ಹೋತ್ರ ವಿನ್ಯಾಸ ಮಾಡಿದ್ದ ಈ ಉಡುಪು ಧರಿಸಿ ಕಾಜೋಲ್‌ ‘ಮೆಹೆಂದಿ ಲಗಾ ಕೆ ರಖನಾ’ ಹಾಡಿಗೆ ಹೆಜ್ಜೆ ಹಾಕಿದ್ದರು.

ಕರೀನಾ ಕಪೂರ್‌ ಮೋಡಿ: ‘ಕಭಿ ಖುಷಿ ಕಭಿ ಘಮ್‌’ ಸಿನಿಮಾದಲ್ಲಿ ಕರೀನಾ ಕಪೂರ್ ‘ಶರಾರಾ–ಶರಾರಾ’ ಹಾಡಿಗೆ ಹಾಕಿದ ಹೆಜ್ಜೆ ಅಭಿಮಾನಿಗಳು  ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಇದರಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಕರೀನಾ ಧರಿಸಿದ್ದ ಬೇಬಿ ಪಿಂಕ್‌ ಲೆಹೆಂಗಾ. ಇಂತಹ ಲೆಹೆಂಗಾಕ್ಕೆ ಬೆಳ್ಳಿಯ ಆಭರಣ ಹೊಂದಿಕೆಯಾಗುತ್ತದೆ.  

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.