ADVERTISEMENT

ಬೊಕ್ಕ ತಲೆಯಲ್ಲಿ ಚಿತ್ರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ತಲೆಯೇ ಕ್ಯಾನ್ವಾಸ್‌
ತಲೆಯೇ ಕ್ಯಾನ್ವಾಸ್‌   

ಬೊಕ್ಕ ತಲೆ ಇದು ಹಲವರಿಗೆ ಚಿಂತೆ ನೀಡುವ ವಿಷಯ. ಆದರೆ ಇಲ್ಲೊಬ್ಬ ಕಲಾವಿದ ಬೊಕ್ಕ ತಲೆಯ ಮೇಲೆ ಚಿತ್ರಗಳನ್ನು ಬಿಡಿಸಿಕೊಂಡು ಜನಪ್ರಿಯತೆ ಗಳಿಸಿದ್ದಾನೆ.

ಲಂಡನ್‌ ಮೂಲದ ಈತನ ಹೆಸರು ಫಿಲಿಪ್‌ ಲೆವಿನ್‌. ಚಿಕ್ಕ ವಯಸ್ಸಿನಲ್ಲಿಯೇ ಈತನ ಕೂದಲು ಉದುರಲು ಶುರುವಾಯಿತು. ಆದರೆ ಹೀಗಾಯಿತೆಂದು ಫಿಲಿಪ್‌ ಆತಂಕಗೊಳಲಿಲ್ಲ. ಕೂದಲು ಬರಲಿ ಎಂದು ಔಷಧಿಗಳನ್ನೂ ಹಚ್ಚಲಿಲ್ಲ.

2006ರಿಂದ ತಲೆಯ ಮೇಲೆಯೇ ಕಲೆ ಮೂಡಿಸಲು ಅಣಿಯಾದರು. ಒಂದು ಸಾವಿರ ಸ್ವರೊಸ್ಕಿ ಹರಳುಗಳನ್ನು ತಲೆಯ ಮೇಲೆ ಒಪ್ಪವಾಗಿ ಜೋಡಿಸಿಕೊಂಡು ಸುದ್ದಿಯಾದರು.

ADVERTISEMENT

ಲಂಡನ್ನಿನ ಹಲವೆಡೆ ಇವರ ಬೊಕ್ಕತಲೆಯ ಚಿತ್ರ ಪ್ರದರ್ಶನ ನಡೆಯುತ್ತಲೇ ಇರುತ್ತದೆ. ತಮ್ಮ ಕಲಾ ಪ್ರದರ್ಶನಕ್ಕೆ ವೆಬ್‌ಸೈಟ್‌ ಅನ್ನು ಫಿಲಿಪ್‌ ಪ್ರಾರಂಭಿಸಿದ್ದಾರೆ.

‘ಜೀವನದಲ್ಲಿ ಸಮಸ್ಯೆ ಬಂತೆಂದು ತಲೆಕೆಡಿಸಿಕೊಳ್ಳದಿರಿ ಅದನ್ನು ಸಕಾರಾತ್ಮಕವಾಗಿ ಬದಲಾಯಿಸುವ ಪ್ರಯತ್ನ ಮಾಡಿ’ ಎಂಬ ಸಂದೇಶ ನೀಡುವುದು ಇವರ ಈ ಪ್ರಯತ್ನದ ಉದ್ದೇಶವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.