ADVERTISEMENT

ಮತ್ತೆ ಒಡಿಶಾ ಮೇಳ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ಒಡಿಶಾ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸಂಸ್ಥೆಯು ಒಡಿಷಾ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಮತ್ತೊಮ್ಮೆ  ಏರ್ಪಡಿಸಿದೆ. ಇನ್ಫೆಂಟ್ರಿ ರಸ್ತೆಯಲ್ಲಿರುವ ಸಫೀನಾ ಪ್ಲಾಜಾದಲ್ಲಿ ಈಗಾಗಲೆ ಆರಂಭವಾಗಿರುವ ಮಾರಾಟ ಮೇಳದಲ್ಲಿ ಒಡಿಶಾದ ಸಾಂಪ್ರದಾಯಿಕ, ಪಾರಂಪರಿಕ ಕರಕುಶಲ ಕಲೆಗಳ ಪೂರ್ಣ ಪರಿಚಯ ಮಾಡಿಕೊಳ್ಳಬಹುದು.

ಸೀರೆಗಳು, ಕಲೆ ಮತ್ತು ಚಿತ್ರಕಲೆ, ಪಿಲಿಗಿರಿ ಆಭರಣ, ಕಂಚಿನ ಪಾತ್ರೆಪಗಡಿ, ಮರದ ಕೆತ್ತನೆಯ ವಸ್ತುಗಳು, ಕೈಮಗ್ಗದ ವಸ್ತು, ಬೆಡ್‌ಶೀಟ್‌, ಡ್ರೆಸ್ ಮೆಟೀರಿಯಲ್‌, ಕುರ್ತಾಗಳು ಪ್ರಮುಖವಾಗಿವೆ.

ಉಳಿದಂತೆ ಕಾಶ್ಮೀರಿ ಶಾಲು, ಶಾಂತಿನಿಕೇತನ ಬ್ಯಾಗು, ಕೋಲ್ಕತ್ತಾ ಸೀರೆ, ಜೇಡಿಮಣ್ಣಿನ ವಸ್ತು, ಮೀನಾಕರಿ ಹರಳು, ಸುವರ್ಣ ಲೇಪಿತ ಚಿನ್ನಾಭರಣ, ಮಧುಬನಿ ಚಿತ್ರಕಲೆ, ಗುಜರಾತ್ ಕುರ್ತಾ ಮತ್ತು ಡ್ರೆಸ್ ಮೆಟೀರಿಯಲ್‌, ರಾಜಸ್ತಾನಿ ಚಿತ್ರಕಲೆ, ಚಂದೇರಿ ಸೀರೆ/ ಡ್ರೆಸ್‌ಮೆಟೀರಿಯಲ್‌ ಮುಂತಾದುವುಗಳನ್ನು ಅಲ್ಲಿನ ಕುಶಲಕರ್ಮಿಗಳಿಂದಲೇ ಖರೀದಿಸಬಹುದು.

ವೆಜಿಟೆಬಲ್ ಡೈ ಇರುವ ಸಲ್ವಾರ್ ಕಮೀಜ್, ಮಿರರ್ ವರ್ಕ್‌ನ ಬಾಟಿಕ್, ಆಪ್ಲಿಕ್‌, ಬಾಟಿಕ್ ಕುರ್ತಿಗಳು, ಗಾಜಿನಿಂದ ಅಲಂಕೃತವಾದ ಚಿತ್ತಾಕರ್ಷಕವಾದ ಕಪ್ಪು ಪ್ರಿಂಟೆಡ್ ಕಾಟನ್ ಸೀರೆಗಳೂ ಇವೆ. ಮೇಳ ಮಾ.30ರವರೆಗೂ ಬೆಳಿಗ್ಗೆ 10ರಿಂದ ರಾತ್ರಿ9 ರವರೆಗೂ ತೆರೆದಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT