ADVERTISEMENT

ಯಾರವಳು, ಏನಾದಳು?

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ಯಾರವಳು, ಏನಾದಳು?
ಯಾರವಳು, ಏನಾದಳು?   

ಹಸಿಬಿಸಿ ಟ್ರೇಲರ್‌ಗಳಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ  ‘ಜೂಲಿ 2’ ಇದೀಗ ಮತ್ತೊಂದು ಕಾರಣಕ್ಕೆ ಚರ್ಚೆಯ ವಿಷಯವಾಗಿದೆ. ‘90ರ ದಶಕದಲ್ಲಿ ದೇಶದ ಗಮನಸೆಳೆದಿದ್ದ ಗ್ಲಾಮರ್ ತಾರೆಯೊಬ್ಬಳ ಜೀವನ ಆಧರಿಸಿದ ಚಿತ್ರ ಇದು’ ಎಂದು ವಿತರಣೆಯ ಹಕ್ಕು ಖರೀದಿಸಿರುವ ಪಹ್ಲಾಜ್ ನಿಹ್ಲಾನಿ ಹೇಳಿಕೊಂಡಿದ್ದಾರೆ.

‘ಖಾನ್ ತ್ರಯರ ಪೈಕಿ ಒಬ್ಬರ ಚಿತ್ರದಿಂದ ಬೆಳ್ಳಿತೆರೆಗೆ ಬಂದ ನಟಿ ನಂತರದ ದಿನಗಳಲ್ಲಿ ತಮಿಳು–ತೆಲುಗು ಸಿನಿಮಾಗಳಲ್ಲಿ ಮಿನುಗಿದಳು. ತಮಿಳು–ತೆಲುಗು ಚಿತ್ರರಂಗದ ವಿವಾಹಿತ ಸೂಪರ್‌ಸ್ಟಾರ್‌ನ ಪ್ರೇಯಸಿಯಾಗಿದ್ದ ಆಕೆ, ಅದೇ ಕಾರಣಕ್ಕೆ ದಕ್ಷಿಣ ಭಾರತದಲ್ಲಿ ಅವಕಾಶಗಳನ್ನು ಕಳೆದುಕೊಂಡಳು. ನಂತರದ ದಿನಗಳಲ್ಲಿ ಭೋಜ್‌ಪುರಿ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದಳು’ ಎಂದು ನಿಹ್ಲಾನಿ ಒಗಟು ಎಸೆದಿದ್ದಾರೆ.

‘ನನ್ನ ಪಾತ್ರಕ್ಕೂ, ಆ ನಟಿಗೂ ಸಂಬಂಧ ಇರುವುದನ್ನು ನಾನು ನಿರಾಕರಿಸುತ್ತಿಲ್ಲ. ಆದರೆ ಅದು ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ ನನಗೆ ಗೊತ್ತಿಲ್ಲ’ ಎನ್ನುವುದು ಚಿತ್ರದ ನಾಯಕಿ, ಮಾದಕ ನಟಿ ಲಕ್ಷ್ಮಿ ರೈ ಅವರ ಮಾತು.

ADVERTISEMENT

‘ಇದು ಸತ್ಯಕಥೆಯನ್ನು ಆಧರಿಸಿದ ಚಿತ್ರ ಅಂತ ನನಗೆ ಸ್ಪಷ್ಟವಾಗಿ ಗೊತ್ತು. ಯಾರ ಬದುಕಿಗೆ ಈ ಚಿತ್ರ ಸಂಬಂಧಿಸಿದೆಯೋ, ಆಕೆಯನ್ನು ಚೆನ್ನಾಗಿ ಅರಿತವರು ಈ ಚಿತ್ರದಲ್ಲಿಯೂ ನಟಿಸಿದ್ದಾರೆ. ನಾನು ಈಗ ಅಧಿಕೃತವಾಗಿ ನಿಜಜೀವನದ ಜೂಲಿ ಯಾರು ಅಂತ ಹೇಳಿದರೆ ಚಿತ್ರದ ಬಿಡುಗಡೆಗೆ ಕಷ್ಟವಾಗುತ್ತೆ. ಮುಂದಿನ ಶುಕ್ರವಾರ ಹೇಗೂ ಚಿತ್ರ ರಿಲೀಸ್ ಆಗುತ್ತೆ. ಜನರಿಗೆ ಆಮೇಲೆ ತಾನಾಗಿಯೇ ಅರ್ಥವಾಗುತ್ತೆ’ ಎಂದು ಮುಗುಮ್ಮಾಗಿ ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ ನಿಹ್ಲಾನಿ.

ಕಾಪಿರೈಟ್ ಮತ್ತು ಇತರ ಸಮಸ್ಯೆಗಳ ಕಾರಣ ಚಿತ್ರದ ಬಿಡುಗಡೆ ತಡವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.