ADVERTISEMENT

ಸಾಕುಪ್ರಾಣಿಗೆ ತಾಕದಿರಲಿ ಬಿಸಿಲಿನ ಬೇಗೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST
ಬೇಸಿಗೆಯಲ್ಲಿ ಸಾಕುಪ್ರಾಣಿ
ಬೇಸಿಗೆಯಲ್ಲಿ ಸಾಕುಪ್ರಾಣಿ   

* ಪ್ರಾಣಿಗಳನ್ನು ಅತಿಯಾದ ಬಿಸಿಲಿಗೆ ಕರೆದುಕೊಂಡು ಹೋಗದಿರಿ. ಮುಂಜಾನೆ ಅಥವಾ ಸಂಜೆಯ ವೇಳೆ ವಾಕಿಂಗ್‌ ಕರೆದುಕೊಂಡು ಹೋಗಿ.  ವಾಹನಗಳ ಒಳಗೆ ಅವುಗಳನ್ನು ಬಿಡಬೇಡಿ.

* ಗಾಢ ಬಣ್ಣದ ನಾಯಿ, ಬೆಕ್ಕಿಗೆ ಸೂರ್ಯನ ಕಿರಣಗಳು ಹೆಚ್ಚಿನ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ನಿಮ್ಮ ಸಾಕುಪ್ರಾಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಪಗ್ಸ್‌, ಬುಲ್‌ ಡಾಗ್ಸ್‌ಗಳು ಹೆಚ್ಚು ಶಾಖವನ್ನು ತಡೆದುಕೊಳ್ಳುವುದಿಲ್ಲ. ಅತಿಯಾದ ತೂಕವಿರುವ ನಾಯಿ, ಪುಟ್ಟ ಮತ್ತು ವಯಸ್ಸಾದ ಪ್ರಾಣಿಗಳಿಗೆ ವಿಶೇಷ ಮುತುವರ್ಜಿ ವಹಿಸಬೇಕಾಗುತ್ತದೆ.

* ಸಾಕುಪ್ರಾಣಿಗಳಿಗಾಗಿ ಸಿಗುವಂತೆ ನೀರು ಇರಿಸಿ. ಅವುಗಳಿಗೆ ದಾಹವಾದಾಗ ಬಂದು ಕುಡಿಯುತ್ತವೆ. ಅತಿಯಾಗಿ ನೀರು ಕುಡಿದರೂ ನಾಯಿಗಳು ವಾಂತಿ ಮಾಡಿಕೊಳ್ಳುತ್ತವೆ. ಹಾಗಾಗಿ ಎಷ್ಟು ನೀರಿನ ಅಗತ್ಯವಿದೆ ಎಂಬುದನ್ನು ವೈದ್ಯರಿಂದ ತಿಳಿದುಕೊಳ್ಳಿ.

ADVERTISEMENT

* ಪ್ರಾಣಿಗಳ ದೇಹದ ಉಷ್ಣಾಂಶ ಹೆಚ್ಚಾಗಿದ್ದರೆ ನೀರಿನಲ್ಲಿ ಸ್ಪಾಂಜ್ ಅದ್ದಿ ಅವುಗಳ ಹೊಟ್ಟೆಯ ಮೇಲೆ ಒತ್ತಿ.

* ನಾಯಿಗಳಿಗೆ ವಿಪರೀತ ಬಿಸಿಲು ತಾಗಿದರೆ ಪಾದಕ್ಕೆ ಗಾಯವಾಗುವ ಸಂಭವವಿರುತ್ತದೆ. ಆಗ ತಕ್ಷಣ ತಣ್ಣೀರಿನಿಂದ ಅವುಗಳ ಪಾದವನ್ನು ತೊಳೆಯಬೇಕು. ಪಶುವೈದ್ಯರ ಬಳಿ ತೋರಿಸಬೇಕು.

* ಪ್ರಾಣಿಗಳಿಗೆ ಸೋಂಕು ತಪ್ಪಿಸಲು ಅವುಗಳಿಗೆ ಹಾಕಿರುವ ಬ್ಯಾಂಡೆಜ್‌ಗಳನ್ನು ನಿಯಮಿತವಾಗಿ ಬದಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.