ADVERTISEMENT

ಸಿ.ಡಿ.ಯಿಂದ ಬಗೆಬಗೆ ಅಲಂಕಾರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಸಿ.ಡಿ.ಯಿಂದ ಬಗೆಬಗೆ ಅಲಂಕಾರ
ಸಿ.ಡಿ.ಯಿಂದ ಬಗೆಬಗೆ ಅಲಂಕಾರ   

ಮನೆಯ ಅಲಂಕಾರ ಮಾಡುವ ಜಾಣ್ಮೆ ಇದ್ದರೆ ಬೇಡದ ವಸ್ತುಗಳಲ್ಲಿಯೂ ಕಲೆ ಅರಳಿಸುವ ಕೌಶಲ ಸಿದ್ಧಿಸುತ್ತದೆ. ಬಳಕೆಗೆ ಬಾರದ ಸಿ.ಡಿ.ಯಿಂದ‌ ಹಲವು ಆಲಂಕಾರಿಕ ವಸ್ತುಗಳನ್ನು ಮಾಡಬಹುದು. ಮಿನುಗುವ ಇವು ಮನೆಯ ಅಲಂಕಾರಕ್ಕೆ ಮೆರುಗು ನೀಡುತ್ತವೆ.

* ಸಿ.ಡಿ.ಯನ್ನು ಫ್ರೀಜರ್‌ನಲ್ಲಿ ಇಲ್ಲವೆ ಬಿಸಿನೀರಿನಲ್ಲಿ ಹಾಕಿ ಹತ್ತು ನಿಮಿಷ ಬಿಡಿ. ಹೀಗೆ ಮಾಡುವುದರಿಂದ ಸಿ.ಡಿ. ಬೇಕಾದ ಆಕಾರಕ್ಕೆ ಕತ್ತರಿಸುವುದು ಸುಲಭ.

* ಕತ್ತರಿಸಿದ ಸಿ.ಡಿ.ಯ ಚೂರುಗಳನ್ನು ಬಿಳಿ ಪ್ಲೇಟಿನ ಮೇಲೆ ಅಂಟಿಸಿ ಇದನ್ನು ಕೈತೋಟದಲ್ಲಿರುವ ಪೀಠೋಪಕರಣ ಮಧ್ಯೆ ಇಡಬಹುದು. ಕಪ್ಪು ಹಲಗೆಯ ಮೇಲೆ ಈ ಚೂರುಗಳನ್ನು ಅಂಟಿಸಿ ಮನೆಯ ಗೋಡೆಯ ಮೇಲೂ ಅಂಟಿಸಬಹುದು.

ADVERTISEMENT

* ಸಿ.ಡಿ.ಯನ್ನು ಒಂದಕ್ಕೊಂದು ತುದಿಯನ್ನು ಸೇರಿಸಿ ವೃತ್ತಾಕಾರದಲ್ಲಿ ಅಂಟಿಸಿ. ಮಧ್ಯೆ ಖಾಲಿ ಜಾಗದಲ್ಲಿ ಮತ್ತೊಂದು ಸಿ.ಡಿ. ಅಂಟಿಸಿ. ಮೂರು ಚಿಕ್ಕ ತುಂಡುಗಳಾಗಿ ಕತ್ತರಿಸಿ ಅದನ್ನು ತ್ರಿಕೋನಾಕಾರದಲ್ಲಿ ಜೋಡಿಸಿ. ಮಧ್ಯೆ ದಾರ ಹಾಕಿ. ಮೊದಲೇ ಅಂಟಿಸಿರುವ ಸಿ.ಡಿ.ಗೆ ದಾರ ಹಾಕಿ ತಯಾರಿಸಿರುವ ಗೊಂಡೆಯನ್ನು ಸಿಕ್ಕಿಸಿದರೆ ವಾಲ್‌ ಹ್ಯಾಂಗಿಂಗ್‌ ತಯಾರಾಗುತ್ತದೆ.

* ಸಿ.ಡಿ.ಯ ಹಿಂದೆ ದಪ್ಪದ ರಟ್ಟನ್ನು ಅಂಟಿಸಿ. ಮಧ್ಯದ ತೂತಿನ ಸುತ್ತ ಚಿಕ್ಕ ಮುತ್ತಿನ ಸರವನ್ನು ಅಂಟಿಸಿ. ರಟ್ಟು ಕಾಣದಂತೆ ಅಂಗಡಿಗಳಲ್ಲಿ ಸಿಗುವ ಹೂವಿನ ಆಲಂಕಾರಿಕ ವಸ್ತುಗಳನ್ನು ಅಂಟಿಸಿ. ಇದನ್ನು ಗೋಡೆಗೆ ಅಂಟಿಸಿದರೆ ಸಿ.ಡಿ.ಯಿಂದ ಮಾಡಿರುವುದೆಂಬುದು ಖಂಡಿತಾ ಯಾರೂ ಊಹಿಸಲಾರರು.

* ಅಡ್ಡ, ಉದ್ದ ಸಾಲಿನಲ್ಲಿ ಸಮಾನವಾಗಿ ಮೂರು ಸಿ.ಡಿ. ಅಂಟಿಸಿ. ಎರಡು ಸಾಲುಗಳ ಮಧ್ಯೆ ಮತ್ತೆರಡು ಸಿ.ಡಿ. ಅಂಟಿಸಿ.  ರಟ್ಟನ್ನು ಗಡಿಯಾರದ ಮುಳ್ಳಿನಂತೆ ಕತ್ತರಿಸಿ ಅದನ್ನು ಮಧ್ಯೆ ಅಂಟಿಸಿ. ಇದು ನೋಡಲು ಥೇಟ್‌ ಗಡಿಯಾರದಂತೆ ಕಾಣುತ್ತದೆ.

* ತಿಳಿ ಬಣ್ಣದ ಬಾಟಲಿಯ ಮೇಲೆ ಸಿ.ಡಿ. ಚೂರುಗಳನ್ನು ಅಂಟಿಸಿ, ಅದರೊಳಗೆ ಹೂವನ್ನು ಇರಿಸಿ. ಸುಲಭದಲ್ಲಿ ಚೆಂದದ ಹೂದಾನಿ ತಯಾರಾಗುತ್ತದೆ.

* ಹೂಕುಂಡದ ಸಮ ಮಧ್ಯ ಭಾಗದ ಸುತ್ತ ಸಿ.ಡಿ ಚೂರುಗಳನ್ನು ಅಂಟಿಸಿ. ಕತ್ತಲಿನಲ್ಲಿ ನಿಮ್ಮ ಕೈತೋಟದ ಮೆರುಗು ಹೆಚ್ಚುತ್ತದೆ.

* ಇಷ್ಟೇ ಅಲ್ಲದೆ ಸಿ.ಡಿ.ಗಳಿಂದ ನಾನಾ ಬಗೆಯ ಆಲಂಕಾರಿಕ ವಸ್ತುಗಳನ್ನು ತಯಾರಿಸುವುದನ್ನು ಕಲಿಸುವ ಹಲವು ವಿಡಿಯೊಗಳು ಯೂಟ್ಯೂಬ್‌ನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.