ADVERTISEMENT

ಹಲ್ಲು ಉಜ್ಜಿದ್ರಾ...?

​ಪ್ರಜಾವಾಣಿ ವಾರ್ತೆ
Published 2 ಜೂನ್ 2017, 19:30 IST
Last Updated 2 ಜೂನ್ 2017, 19:30 IST
ಹಲ್ಲು ಉಜ್ಜಿದ್ರಾ...?
ಹಲ್ಲು ಉಜ್ಜಿದ್ರಾ...?   

ಹಲ್ಲು ಉಜ್ಜುವುದೇ ಬಾಯಿಯ ಆರೋಗ್ಯ ಕಾಪಾಡಿದಂತೆ ಅಲ್ಲ. ಬಾಯಿಯನ್ನು ಸ್ವಚ್ಛವಾಗಿಡುವುದು ದೇಹದ ಆರೋಗ್ಯವನ್ನೂ ಕಾಪಾಡಿದಂತೆ. ಬಾಯಿಯಲ್ಲಿನ ರೋಗಾಣು, ದುರ್ಗಂಧವನ್ನು ನಿವಾರಣೆ ಮಾಡಿದರೆ ದೇಹದ ಆರೋಗ್ಯವು ಚೆನ್ನಾಗಿರುತ್ತದೆ.

ಬಾಯಿಯ ಆರೋಗ್ಯಕ್ಕೆ ಹಲ್ಲು ಉಜ್ಜುವುದರೊಂದಿಗೆ ಮೌತ್‌ವಾಷ್‌ ಹೆಚ್ಚು ಪರಿಣಾಮಕಾರಿ. ಮನೆಯಲ್ಲೇ ಹೇಗೆ ಮೌತ್‌ವಾಷ್ ತಯಾರಿಸಿಕೊಳ್ಳಬಹುದು.

* ಒಂದು ಲೋಟ ಬಿಸಿ ನೀರಿಗೆ ಪುದೀನ ರಸ, ನಿಂಬೆ ಹಣ್ಣಿನ ರಸ ಸೇರಿಸಿ, ಹಲ್ಲು ಉಜ್ಜಿದ ಬಳಿಕ ಈ ನೀರಿನಿಂದ ಐದು ನಿಮಿಷ ಬಾಯಿ ಮುಕ್ಕಳಿಸಿ.
* ಒಂದು ಲೋಟ ನೀರಿಗೆ ರೋಸ್‌ಮೆರಿ ಎಲೆ, ಪುದೀನ ಎಲೆ ಸೇರಿಸಿ ಕುದಿಸಿ. ನಂತರ ಈ ನೀರಿನಿಂದ ಬಾಯಿ ಮುಕ್ಕಳಿಸಿ. ಇದು ಹಲ್ಲಿನಲ್ಲಿ ಉಂಟಾದ ಕಪ್ಪು ಕಲೆಯನ್ನು ನಿವಾರಣೆ ಮಾಡುತ್ತದೆ.
* ಹದಿನೇಳು ಚಮಚ ಕೊಬ್ಬರಿ ಎಣ್ಣೆ, 7 ಚಮಚ ಅಡುಗೆ ಸೋಡಾ ಕಲಸಿಕೊಂಡು ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನು ಟೂತ್‌ಪೇಸ್ಟ್‌ನಂತೆ ಬಳಸಿ ಹಲ್ಲು ಉಜ್ಜಿ, ನಂತರ ಬಿಸಿನೀರಿನಲ್ಲಿ ಬಾಯಿ ಮುಕ್ಕಳಿಸಿ. ಕೊಬ್ಬರಿ ಎಣ್ಣೆ ರೋಗಾಣುಗಳನ್ನು ನಿವಾರಿಸುತ್ತದೆ. ಅಡುಗೆ ಸೋಡಾ ಹಲ್ಲನ್ನು ಬಿಳುಪಾಗಿಸುತ್ತದೆ.
* ಉಪ್ಪು, ಸೋಡಾ, ಪುದೀನ ಎಲೆಗಳನ್ನು ಬೆರೆಸಿ ಪೇಸ್ಟ್‌ ಮಾಡಿಕೊಳ್ಳಿ. ಇದನ್ನು ಹಲ್ಲುಗಳ ಮೇಲೆ ಹಚ್ಚಿ 20 ನಿಮಿಷ ಬಿಡಿ, ನಂತರ ಬಿಸಿನೀರಿನಲ್ಲಿ ಬಾಯಿ ಮುಕ್ಕಳಿಸಿ. ಇದು ಹಲ್ಲು ಹಳದಿಯಾಗಿರುವುದನ್ನು ನಿವಾರಿಸುತ್ತದೆ.
* ಬಾಯೊಳಗೆ ಹುಣ್ಣಾಗಿದ್ದರೆ ಗ್ಲಿಸರಿನ್, ಕೊಬ್ಬರಿ ಎಣ್ಣೆ ಎರಡು ಚಮಚ ಮಿಶ್ರಣ ಮಾಡಿ ಬಾಯಿ ಮುಕ್ಕಳಿಸಿ.
* ಬೇವಿನ ಎಲೆಯನ್ನು ನೀರೊಳಗೆ ಹಾಕಿ ಕುದಿಸಿ, ಕಷಾಯ ಮಾಡಿಕೊಳ್ಳಿ. ಇದನ್ನು ನಿತ್ಯ ಬೆಳಿಗ್ಗೆ–ರಾತ್ರಿ ಮೌತ್‌ವಾಷ್‌ನಂತೆ ಬಳಸಿ.
* ಕಬ್ಬನ್ನು ಜಗಿದು ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ. ಹಲ್ಲಿನ ಮೇಲಿನ ಕಲೆ, ಹಲ್ಲು ಹಳದಿಯಾಗುವುದನ್ನು ತಡೆಯುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.