ADVERTISEMENT

ನಾಲಿಗೆಗೆ ರುಚಿ ಆರೋಗ್ಯಕ್ಕೂ ಸವಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ನಾಲಿಗೆಗೆ ರುಚಿ ಆರೋಗ್ಯಕ್ಕೂ ಸವಿ
ನಾಲಿಗೆಗೆ ರುಚಿ ಆರೋಗ್ಯಕ್ಕೂ ಸವಿ   

ಕೆಲವರಿಗೆ ಸಿಹಿ ಎಂದರೆ ಪಂಚಪ್ರಾಣ. ಸಕ್ಕರೆ ಬಳಕೆ ದೇಹಕ್ಕೆ ಮಾರಕ ಎಂದು ಗೊತ್ತಿದ್ದರೂ ಸವಿಯಾದ ಸಿಹಿ ತಿಂಡಿಗಳನ್ನು ಬಿಡಲಾದೀತೆ? ಅದರ ಬದಲು ನೀವು ಆಹಾರ ತಯಾರಿಸುವಾಗ ನೈಸರ್ಗಿಕವಾದ ಈ ಸಿಹಿಗಳನ್ನು ಹೆಚ್ಚಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ. ಹೊಸವರ್ಷದ ಡಯೆಟ್‌ ಪಟ್ಟಿಯಲ್ಲಿ ಇವುಗಳಿಗೇ ಆದ್ಯತೆ ಇರಲಿ.

ಕಬ್ಬಿನಹಾಲು: ಅತ್ಯುತ್ತಮವಾದ ಎನರ್ಜಿ ಡ್ರಿಂಕ್‌ ಇದು. ಚರ್ಮಕ್ಕೆ ಕಾಂತಿ ನೀಡುವ, ದೇಹ ಶುದ್ಧಿಕಾರಕವೂ ಹೌದು. ಕಬ್ಬಿನಹಾಲಿನಲ್ಲಿ ಔಷಧೀಯ ಗುಣಗಳೂ ಸಾಕಷ್ಟಿವೆ. ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಹಲವು ತೊಂದರೆಗಳಿಗೆ ಇದು ಔಷಧಿಯೂ ಹೌದು.

ಜೇನುತುಪ್ಪ: ಮನುಷ್ಯನ ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ನೀಡಿರುವ ಅತ್ಯುತ್ತಮ ರೋಗನಿರೋಧಕ ಜೇನುತುಪ್ಪ. ನೂರಾರು ವರ್ಷಗಳಿಂದಲೂ ಮನೆಯ ಔಷಧಿಗಳ ಪಟ್ಟಿಯಲ್ಲಿ ಜೇನುತುಪ್ಪಕ್ಕೆ ಆದ್ಯತೆ. ಇದರಲ್ಲಿ ಪ್ರೊಟೀನ್‌, ಖನಿಜಾಂಶ ಹಾಗೂ ವಿಟಮಿನ್‌ಗಳು ಹೇರಳವಾಗಿವೆ. ಹೀಗಾಗಿ ನಿತ್ಯ ಒಂದು ಚಮಚದಷ್ಟಾದರೂ ಜೇನುತುಪ್ಪ ಸೇವನೆ ಒಳ್ಳೆಯದು.

ADVERTISEMENT

ತೆಂಗಿನ ಸಕ್ಕರೆ: ರುಚಿಗಾಗಿ ಸಕ್ಕರೆಯ ಬದಲು ಬಳಸಬಹುದು. ಇದರಲ್ಲಿರುವ ಕಬ್ಬಿಣಂಶ, ಸತು, ಕ್ಯಾಲ್ಶಿಯಂ, ಪೊಟಾಶಿಯಂ, ಸ್ವಲ್ಪ ಪ್ರಮಾಣದ ಫ್ಯಾಟಿ ಆಸಿಡ್‌ಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ತೆಂಗಿನ ಸಕ್ಕರೆ ಹಾಗೂ ತೆಂಗಿನ ಮಕರಂದದಲ್ಲಿ ಇನ್ಯುಲಿನ್‌ ಎನ್ನುವ ನಾರಿನಂಶ ಇರುತ್ತದೆ. ಇದು ಗ್ಲುಕೋಸ್‌ ಅನ್ನು ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಮಧುಮೇಹ ಸಮಸ್ಯೆ ಇರುವವರಿಗೆ ಇದು ಸಹಕಾರಿ.

ಸ್ಟೀವಿಯಾ ಸಸ್ಯೋತ್ಪನ್ನ: ನೈಸರ್ಗಿಕ ಸಿಹಿಕಾರಕವಾಗಿ ಸ್ಟೀವಿಯಾ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸುತ್ತಿದೆ. ಸಕ್ಕರೆಯಂಥದ್ದೇ ರುಚಿ ನೀಡುವ ವಿಭಿನ್ನ ಉತ್ಪನ್ನಗಳೂ ದೊರೆಯುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಇನ್ಸುಲಿನ್‌ ಪ್ರಮಾಣದ ಮೇಲೆ ಯಾವುದೇ ರೀತಿಯಲ್ಲಿಯೂ ಪರಿಣಾಮ ಬೀರುವುದಿಲ್ಲ. ಇದನ್ನು ನಿತ್ಯದ ಡಯೆಟ್‌ನಲ್ಲಿ ಚಿಂತೆಯಿಲ್ಲದೆ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.