ADVERTISEMENT

ಡಾನ್ಸ್ ಮಾಡ್ತಾ ಮಾಡ್ತಾ ಹೆರಿಗೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ಡಾನ್ಸ್ ಮಾಡ್ತಾ ಮಾಡ್ತಾ ಹೆರಿಗೆ
ಡಾನ್ಸ್ ಮಾಡ್ತಾ ಮಾಡ್ತಾ ಹೆರಿಗೆ   

ನಾದಕ್ಕೆ ಹೆಜ್ಜೆ ಸೇರಿಸಲು ಎಲ್ಲರಿಗೂ ಇಷ್ಟ. ಆದರೆ ತುಂಬು ಗರ್ಭಿಣಿಯಾದಾಗ ನೃತ್ಯ ಮಾಡಲು ಹೇಳಿದರೆ ಹೇಗಿರಬಹುದು. ಅದರಲ್ಲೂ ಹೆರಿಗೆ ನೋವು ಪ್ರಾರಂಭವಾದ ಮೇಲೆ ನೃತ್ಯ ಮಾಡು ಎಂದರೆ?

ಹೌದು, ಬ್ರೆಜಿಲ್‌ನ ವೈದ್ಯ ಫರ್ನಾಂಡೊ ಗ್ಯೂಡ್ಸ್ ಡಕುನ್ಹಾ ತಮ್ಮ ಯುನಿಮ್ಡ್‌ ವಿಕ್ಟೋರಿಯಾ ಆಸ್ಪತ್ರೆಯಲ್ಲಿ, ನೃತ್ಯ ಮಾಡಿಸುತ್ತಲೇ ಹೆರಿಗೆ ಮಾಡಿಸುವ ಕಲೆಯ ಮೂಲಕ ಹೆಸರಾಗಿದ್ದಾರೆ.

ನೃತ್ಯವು ಹೆರಿಗೆ ನೋವನ್ನು ಕಡಿಮೆ ಮಾಡುತ್ತದೆ ಎನ್ನುವುದು ಅವರ ಸಿದ್ಧಾಂತ. ಡಾನ್ಸಿಂಗ್‌ ಡಾಕ್ಟರ್‌ ಎಂದೇ ಅವರೀಗ ಖ್ಯಾತರು. ಹಾಡೊಂದನ್ನು ಹಾಕಿ ಗರ್ಭಿಣಿಯೊಂದಿಗೆ ತಾನೂ ನೃತ್ಯ ಮಾಡುತ್ತಿರುವ ವಿಡಿಯೊವನ್ನು ವೈದ್ಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವೈದ್ಯರ ಈ ಹೊಸ ಚಿಂತನೆಗೆ ಟ್ವಿಟರ್‌ ಮಂದಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಟ್ವಿಟರ್‌ನಲ್ಲಿ ಮೂವತ್ತಮೂರು ಸಾವಿರಕ್ಕೂ ಹೆಚ್ಚು ಮಂದಿ ಈಗ ಫರ್ನಾಂಡೊ ಬೆಂಬಲಿಗರಾಗಿದ್ದಾರೆ.

ADVERTISEMENT

ದೇಹಕ್ಕೆ ನೃತ್ಯ ಒಳ್ಳೆಯ ವ್ಯಾಯಾಮ ಒದಗಿಸುವುದರ ಜೊತೆಗೆ ಮನಸ್ಸನ್ನೂ ಮುದಗೊಳಿಸುತ್ತದೆ. ಹೀಗಾಗಿ ತುಂಬು ಗರ್ಭಿಣಿಯರು ಅದರಲ್ಲೂ ಹೆರಿಗೆ ನೋವಿನಿಂದ ಬಳಲುತ್ತಿರುವವರು ನೃತ್ಯದಲ್ಲಿ ತೊಡಗಿಸಿಕೊಂಡರೆ ನೋವು ಮರೆಯುವ ಕಾರಣ ಸುಖವಾಗಿ ಹೆರಿಗೆಯಾಗುತ್ತದೆ ಎನ್ನುವುದು ವೈದ್ಯರ ಈ ನಡೆಗೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.