ADVERTISEMENT

ಮೊದಲು ನನಗೆ; ಮಿಕ್ಕಿದ್ದು ಸಮಾಜಕ್ಕೆ...

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST
ಮೊದಲು ನನಗೆ; ಮಿಕ್ಕಿದ್ದು ಸಮಾಜಕ್ಕೆ...
ಮೊದಲು ನನಗೆ; ಮಿಕ್ಕಿದ್ದು ಸಮಾಜಕ್ಕೆ...   

ನನ್ನ ವೈಯಕ್ತಿಕ ಖರ್ಚಿಗೆ ಬಳಸಿಕೊಂಡು ಉಳಿದ ಹಣವನ್ನು ಸಮಾಜೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸುತ್ತೇನೆ.

ಮನೆಗಳಿಲ್ಲದೆ ರಸ್ತೆಯ ಬದಿಯಲ್ಲಿ ಗುಡಿಸಲು ಕಟ್ಟಿಕೊಂಡು ಮಳೆಯ ಸಂದರ್ಭದಲ್ಲಿ ಯಾತನೆಪಡುವ ಜನರಿಗೆ ಮನೆ ಕಟ್ಟಿಕೊಡಬೇಕು ಎಂಬುದು ನನಗೆ ಯಾವಾಗಲೂ ಅನಿಸುತ್ತದೆ. ಆ ಜನರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತೇನೆ. ದಿನಕ್ಕೊಂದು ಊರಿಗೆ ಹೋಗುವ ಅಲೆಮಾರಿ ಜನರಿಗೆ ಎಲ್ಲರಂತೆ ವ್ಯವಸ್ಥಿತವಾಗಿ ಬದುಕುವುದಕ್ಕೆ ಹಣಕಾಸಿನ ಸಹಾಯ ನೀಡುತ್ತೇನೆ.

ಅವರ ಬಗ್ಗೆ‌ ಯಾವುದೇ ಸರ್ಕಾರಗಳೂ ಕಾಳಜಿವಹಿಸದೆ ಇರುವುದು ದುರಂತ. ಹಾಗಾಗಿ ಅವರಿಗೆ ನೆರವಾಗುತ್ತೇನೆ. ಉಳಿದ ಹಣವನ್ನು ಅಂತರ್ಜಾತಿ ವಿವಾಹಕ್ಕೆ ಸಹಾಯಮಾಡಲು ಇಚ್ಛಿಸುತ್ತೇನೆ.

ADVERTISEMENT

–ಹರೀಶ್ ಶಾಕ್ಯ ಎಸ್.

ಚಿಕ್ಕಬೇಗೂರು ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.