ADVERTISEMENT

ಅಟೊ ಟೆಕ್

​ಪ್ರಜಾವಾಣಿ ವಾರ್ತೆ
Published 13 ಜೂನ್ 2012, 19:30 IST
Last Updated 13 ಜೂನ್ 2012, 19:30 IST
ಅಟೊ ಟೆಕ್
ಅಟೊ ಟೆಕ್   

ಕಾರ್ ಇನ್ಫಾರ್ಮೇಷನ್ ಸೆಂಟರ್ ಹ್ಯಾಂಡ್ ಬ್ರೇಕ್
ದೂರದ ಪ್ರಯಾಣ ಮಾಡುತ್ತಿದ್ದೀರಿ, ಹೊರಡುವ ಮುನ್ನ ಸಾಕಷ್ಟು ಪೆಟ್ರೋಲ್‌ನ್ನೋ, ಡೀಸೆಲ್‌ನ್ನೋ ತುಂಬಿಸಿಕೊಂಡೇ ಹೊರಟಿದ್ದಿರಿ. ಆದರೂ ಮನದಲ್ಲಿ ದುಗುಡ. ಕಾರ್ ಎಷ್ಟು ಮೈಲೇಜ್ ನೀಡುವುದು ಏನೋ, ಖಾಲಿಯಾದರೆ ಏನು ಮಾಡುವುದು? ಫ್ಯೂಯಲ್ ಗೇಜ್‌ನ್ನು ನಂಬುವಂತಿಲ್ಲ.
 
ಕೆಲವೊಮ್ಮೆ ತಪ್ಪಾಗೇ ತೋರಿಸುತ್ತದೆ. ಹಾಗಾದರೆ ಈ ಸಮಸ್ಯೆಗೆ ಪರಿಹಾರವೇ ಇಲ್ಲವೆ? ಖಂಡಿತಾ ಇದೆ. ಕಾರ್ ಇನ್ಫಾರ್ಮೇಷನ್ ಸೆಂಟರ್ ಇದ್ದರೆ ತೊಂದರೆಯೇ ಇಲ್ಲ.
 

ಕಾರ್ ಇನ್ಫಾರ್ಮೇಷನ್ ಸೆಂಟರ್
ಸಾಮಾನ್ಯವಾಗಿ ಮೈಲೇಜ್‌ನ ಬಗ್ಗೆ ಒಂದು ಅಂದಾಜಿರುತ್ತದೆ. ಆದರೆ ಪೆಟ್ರೋಲ್‌ನ ಗುಣಮಟ್ಟ, ಬಂಕ್‌ಗಳಲ್ಲಿ ಪೆಟ್ರೋಲ್ ಹಾಕುವ ಪ್ರಮಾಣದಲ್ಲಿ ಮಾಡುವ ಮೋಸಗಳಿಗೆ ಮೈಲೇಜ್ ಕಡಿಮೆ ಆದರೂ ಆಗಬಹುದು. ಆದರೆ ಕಾರ್ ಇನ್ಫಾರ್ಮೇಷನ್ ಸೆಂಟರ್ ಇದ್ದರೆ ಈ ಸಮಸ್ಯೆ ತಪ್ಪುವುದು.
 
ಇದು ಕಂಪ್ಯೂಟರ್ ಆಧಾರಿತ ವ್ಯವಸ್ಥೆಯಾಗಿದ್ದು, ಕಾರ್‌ನ ಇಂಧನ ಟ್ಯಾಂಕ್ ಹಾಗೂ ಎಂಜಿನ್‌ಗೆ ನೇರ ಸಂಪರ್ಕದಲ್ಲಿ ಇರುತ್ತದೆ. ಕಾರ್‌ನಲ್ಲಿರುವ ಇಂಧನ ಪ್ರಮಾಣವನ್ನು ಲೆಕ್ಕ ಹಾಕಿ, ನಿಖರವಾಗಿ ಇಷ್ಟೇ ಮೈಲೇಜನ್ನು ಕಾರ್ ನೀಡುತ್ತದೆ, ಇಷ್ಟು ದೂರವನ್ನು ಕ್ರಮಿಸಲು ಸಾಧ್ಯ ಎಂದು ಚಾಲಕನ ಎದುರಿನ ಪರದೆಯ ಮೇಲೆ ತೋರಿಸುತ್ತದೆ. ಅಷ್ಟೇ ಅಲ್ಲದೇ, ಕಾರ್‌ನ ಎಂಜಿನ್ ಶಾಖ, ಕಾರ್ ಒಳಗಿನ ತಾಪಮಾನಗಳ ಮಾಹಿತಿಯನ್ನೂ ಇದು ನೀಡುತ್ತದೆ.
 

ಹ್ಯಾಂಡ್ ಬ್ರೇಕ್
ಇದನ್ನು ಎಮರ್ಜೆನ್ಸಿ ಬ್ರೇಕ್, ಇ-ಬ್ರೇಕ್, ಪಾರ್ಕಿಂಗ್ ಬ್ರೇಕ್ ಎಂದೂ ಕರೆಯಲಾಗುತ್ತದೆ. ನಾಲ್ಕು ಚಕ್ರದ ಎಲ್ಲ ವಾಹನಗಳಲ್ಲಿ ಇದು ಸಾಮಾನ್ಯ.

ಚಾಲಕನ ಕಾಲ ಬಳಿ ಇರುವ ಬ್ರೇಕ್‌ನ ಜತೆಗೆ ಹೆಚ್ಚುವರಿಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಚಾಲಕನ ಕೈ ಬಳಿ ಇರುವ ಈ ಬ್ರೇಕ್ ವಾಹನದ ನಾಲ್ಕೂ ಚಕ್ರಗಳನ್ನು ಬಂದ್ ಮಾಡುತ್ತದೆ.

ಚಿಕ್ಕ ಸನ್ನೆ ಕೋಲಿನಂತಿರುವ ಇದನ್ನು ಬಲವಾಗಿ ಎತ್ತಿದಾಗ, ಬ್ರೇಕ್ ಬಳಕೆಯಾಗುತ್ತದೆ. ಚಲನೆಯ ತುರ್ತು ಸಂದರ್ಭಗಳಲ್ಲಿ, ದಿಣ್ಣೆ ಅಥವಾ ಅಗ್ಗಿನಲ್ಲಿ ವಾಹನ ಉರುಳದಂತೆ ನೋಡಿಕೊಳ್ಳಲು ಇದು ಸಹಾಯಕಾರಿ. ಜತೆಗೆ ಪಾರ್ಕಿಂಗ್‌ನಲ್ಲಿ ಇದರ ಬಳಕೆಯಿಂದ, ವಾಹನ ಚಲಿಸದಂತೆ ನೋಡಿಕೊಳ್ಳುತ್ತದೆ. ವಾಹನವನ್ನು ಗಿಯರ್‌ನಲ್ಲಿ ಇಡುವುದರ ಜತೆಗೆ, ಹ್ಯಾಂಡ್ ಬ್ರೇಕ್‌ನ್ನೂ ಹಾಕಬೇಕಾದ್ದು ಅತಿ ಮುಖ್ಯ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.