ADVERTISEMENT

ಏನ್ ಗುರು ಸಮಾಚಾರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 19:30 IST
Last Updated 28 ಜೂನ್ 2017, 19:30 IST
ಏನ್ ಗುರು ಸಮಾಚಾರ
ಏನ್ ಗುರು ಸಮಾಚಾರ   

ಟ್ರಾಫಿಕ್‌ ಲೇಡೀಸ್‌
ಉತ್ತರ ಕೊರಿಯಾದ ಪಿಯಾಂಗ್‌ಯಾಂಗ್‌ನ ಹಾದಿ–ಬೀದಿಯಲ್ಲಿ ಪೊಲೀಸ್‌ ಸಮವಸ್ತ್ರಧಾರಿ ತರುಣಿಯರು ಕಣ್ಣಿಗೆ ಬೀಳುತ್ತಾರೆ. ಅಂದಹಾಗೆ, ಅವರೆಲ್ಲ ಟ್ರಾಫಿಕ್‌ ಸೆಕ್ಯುರಿಟಿ ಅಧಿಕಾರಿಗಳು. ‘ಟ್ರಾಫಿಕ್‌ ಲೇಡೀಸ್‌’ ಎಂದೇ ಅವರಿಗೆ ಹೆಸರು. ಹದಿಹರೆಯದ ಹುಡುಗಿಯರನ್ನೇ ಈ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆ. ಮದುವೆ ನಿಗದಿಯಾದರೆ ಕಡ್ಡಾಯವಾಗಿ ಕೆಲಸಕ್ಕೆ ರಾಜೀನಾಮೆ ಕೊಡಬೇಕು. ಒಂದುವೇಳೆ ಮದುವೆಯಾಗದೆ ಕೆಲಸ ಮುಂದುವರಿಸಿದರೆ 26ನೇ ವಯಸ್ಸಿಗಾಗಲೇ ಕಡ್ಡಾಯ ನಿವೃತ್ತಿ ಕಾದಿರುತ್ತದೆ. ಸುಗಮ ಸಂಚಾರದ ಹೊಣೆ ನಿಭಾಯಿಸುವ ಈ ‘ಟ್ರಾಫಿಕ್‌ ಲೇಡೀಸ್‌’ ಪ್ರವಾಸಿಗರ ಕಣ್ಮಣಿಗಳಂತೆ!

****

ಸಗ್ಗವಳ್ಳಿ ಆಟ
ಇಂಗ್ಲೆಂಡ್‌ನ ಸಮರ್‌ಸೆಟ್‌ ಕೌಂಟಿಯ ಪಿಲ್ಟನ್‌ ಎಂಬ ಊರಿನಲ್ಲಿ ಈಚೆಗೆ ಸಂಗೀತ ಹಬ್ಬ ನಡೆಯಿತು. ‘ಆರ್ಕೇಡಿಯಾ ಸ್ಪೆಕ್ಟಾಕ್ಯುಲರ್‌’ (ಸ್ವರ್ಗದ ಹಳ್ಳಿಯಿಂದ ಬಂದ ಪ್ರದರ್ಶಕರು!) ತಂಡದ ಕಲಾವಿದರು ಈ ಹಬ್ಬದಲ್ಲಿ ನೀಡಿದ ರೋಚಕ ಪ್ರದರ್ಶನವಿದು. ಗ್ರೀಕ್‌ ಹಳ್ಳಿಗಾಡಿನ ಈ ಪ್ರದರ್ಶನವನ್ನು ಕಂಡವರೆಲ್ಲ ‘ಹೌದಪ್ಪ ಹೌದು, ಇದು ನಿಜಕ್ಕೂ ಸಗ್ಗವಳ್ಳಿ (ಸ್ವರ್ಗದ ಹಳ್ಳಿ) ಆಟವೇ’ ಎಂಬ ಉದ್ಗಾರ ತೆಗೆದರಂತೆ!

ADVERTISEMENT

****
ಡೋಲಕ್ ಬಾಲೆಯರು

ಚೀನಾದ ಮಹಾಗೋಡೆ ಪ್ರದೇಶದಲ್ಲಿ ಕಳೆದ ವಾರ ಪ್ರಾಥಮಿಕ ಶಾಲೆಯ ಪುಟಾಣಿಗಳು ಸೊಂಟಕ್ಕೆ ಡೋಲಕ್‌ ಕಟ್ಟಿಕೊಂಡು ಬಾರಿಸುತ್ತಾ ಕುಣಿಯುತ್ತಿದ್ದರು. ಅದು ಅವರ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಂತೆ. ಡೋಲಕ್‌ ನಿನಾದ ಅಲೆ–ಅಲೆಯಾಗಿ ಕಿವಿಗೆ ಬೀಳುತ್ತಿದ್ದಂತೆ ಮಹಾಗೋಡೆಯನ್ನು ನೋಡಲು ಬಂದವರು, ಬಂದ ಕೆಲಸವನ್ನೇ ಮರೆತು, ಈ ಮಕ್ಕಳ ಪ್ರದರ್ಶನ ನೋಡುತ್ತಾ ಸ್ಥಳದಲ್ಲೇ ಮೈಮರೆತು ಕುಳಿತುಬಿಟ್ಟರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.