ADVERTISEMENT

ಕೇಶ ಕಲೆಯಿದು...

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST
ಕೇಶ ಕಲೆಯಿದು...
ಕೇಶ ಕಲೆಯಿದು...   

ಪ್ರತಿಯೊಂದು ಕೆಲಸದ ಒಳಗೂ ‘ಕಲೆ’ ಇರುತ್ತದೆ. ಅದು ನಿಜವೆನಿಸಿದ್ದು ಈ ಕೇಶ ಸಿಂಗಾರವನ್ನು ನೋಡಿ. ಕೊಲಂಬಿಯಾದ ಕಾಲಿ ಎಂಬಲ್ಲಿ ಆಫ್ರಿಕಾದ ಹೇರ್‌ಡ್ರೆಸರ್ಸ್‌ಗಳಿಗೆಂದೇ ನಡೆದ 13ನೇ ಸ್ಪರ್ಧೆಯಲ್ಲಿ ಆಫ್ರೊ–ಕೊಲಂಬಿಯನ್ ಕೇಶ ಶೈಲಿ ಹೊತ್ತ ಯುವತಿಯೊಬ್ಬಳು ನಾಚಿ ನಸುನಗು ಸೂಸಿದ್ದು ಹೀಗೆ... ಭರವಸೆಯ ನೇಯ್ಗೆ (ವೀವಿಂಗ್ ಹೋಪ್ಸ್ –ಟೆಜೀಂದೊ ಎಸ್ಪೆಆಂಜಸ್) ಎಂಬ ಈ ಸ್ಪರ್ಧೆಯನ್ನು ಆಫ್ರಿಕಾದ ಸಂಪ್ರದಾಯ, ಸಂಸ್ಕೃತಿಯನ್ನು ಬಿಂಬಿಸಲು ನಡೆಸಲಾಯಿತಂತೆ.

*


ಸೂರ್ಯ ಸರಿವ ಹೊತ್ತಲ್ಲಿ
ಸೂರ್ಯನಿಗೋ ದಿನದ ಜಂಜಡ ಕಳೆದು ಜಾರುವ ಅವಸರ. ಆದರೆ ಈ ಪುಟ್ಟ ಪೋರನಿಗೆ? ಜಗವಿಡೀ ವಿಶ್ರಾಂತಿಗೆ ಹಾತೊರೆಯುವಾಗ ನೀರಿನೊಡನಾಡುವ ಹಂಬಲ. ಈ ಸ್ನೇಹಿತನನ್ನೇ ಜೊತೆಮಾಡಿಕೊಂಡು ಪ್ಯಾಲಿಸ್ಟೀನ್‌ನಲ್ಲಿನ ಗಾಜಾ ಸಿಟಿಯ ಇಳಿಸಂಜೆಯ ಸಾಗರದ ರಂಗಲ್ಲಿ ತನ್ನ ನಗುವಿನ ರಂಗನ್ನೂ ಜೊತೆಗೂಡಿಸಿದ...

ADVERTISEMENT

*


ಮೊಬೈಲ್ ಮಾಯೆಯ ದಾಟಿ
ಪ್ರಪಂಚದಲ್ಲಿ ಮೊಬೈಲ್‌ ಬಳಕೆಯ ವೇಗ ಅಳೆಯಲು ಸಾಧ್ಯವೇ ಇಲ್ಲದಂತಾಗಿದೆ. ಅದರ ಮಾಯೆಗೆ ಸಿಲುಕದವರೂ ಬೆರಳೆಣಿಕೆಯಷ್ಟು ಎನ್ನಿ. ಆದರೆ ಟೋಕಿಯೊದ ವಟಾನೇಬ್ ಮಸಾನೋಗೆ ಹಳೇ ಮೊಬೈಲ್ ಸಂಗ್ರಹಿಸುವ ಗೀಳು. ಇಪ್ಪತ್ತು ವರ್ಷಕ್ಕೂ ಹೆಚ್ಚು ಅವಧಿಯಿಂದ ಸಂಗ್ರಹಿಸಿದ ಸಾವಿರಾರು ಮೊಬೈಲ್‌ಗಳು ಈತನ ಬಳಿ ಇವೆ. ಅದನ್ನು ಎಲ್ಲರೂ ನೋಡಿ ಖುಷಿ ಪಡಲಿ ಎಂದು ಮೊಬೈಲ್‌ಗಳಿಂದಲೇ ತನ್ನ ಎಲೆಕ್ಟ್ರಾನಿಕ್ ಅಂಗಡಿ ಗೋಡೆಯನ್ನು ಸಿಂಗರಿಸಿರುವುದು ಹೀಗೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.