ADVERTISEMENT

ಕ್ಯಾಂಪಸ್‌ನೊಳಗೊಂದು ಫೆಸ್ಟ್

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST
ಕ್ಯಾಂಪಸ್‌ನೊಳಗೊಂದು ಫೆಸ್ಟ್
ಕ್ಯಾಂಪಸ್‌ನೊಳಗೊಂದು ಫೆಸ್ಟ್   

ಕಾಲೇಜು ಕ್ಯಾಂಪಸ್ ಎಂದರೆ ಮೊದಲೇ ವರ್ಣರಂಜಿತ. ಇನ್ನು ಕಾರ್ಯಕ್ರಮಗಳಂತೂ ಒಂದು ಹಿಂದೆ ಒಂದರಂತೆ ನಡೆಯುತ್ತಿರುತ್ತದೆ. ಕಾಲೇಜು ಫೆಸ್ಟ್ ಅದರಲ್ಲೊಂದು. ಆದರೆ ಕೆಲವು ಕಾಲೇಜುಗಳಂತೂ ಅದಕ್ಕಿಂತ ಭಿನ್ನವಾಗಿ ಕಾಲೇಜಿನೊಳಗೇ ವಿವಿಧ ತರಗತಿಗಳಿಗಾಗಿ ಫೆಸ್ಟ್ ನಡೆಸುತ್ತದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಗೆಡಹುದು ಇದರ ಹಿಂದಿನ ಉದ್ದೇಶ.

ವಿದ್ಯಾರ್ಥಿಗಳ ಕ್ರಿಯೇಟಿವಿಟಿ ಅಡಗಿರುವುದೂ ಇಲ್ಲಿಯೇ. ಬೆಂಗಳೂರಿನ ಕಾಲೇಜಿಗೆ ಅದ್ಲ್ಲೆಲೆಲ್ಲಿಂದಲೋ ವಿದ್ಯಾರ್ಥಿಗಳು ಬರುತ್ತಾರೆ. ಪ್ರತೀ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ.

ಇವುಗಳನ್ನೆಲ್ಲ ಅರಿತುಕೊಳ್ಳಲು, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಲು ನಗರದ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜು ಮತ್ತು ದಯಾನಂದ ಸಾಗರ್ ಸ್ಕೂಲ್ ಆಫ್ ಇನ್‌ಫಾರ್ಮೇಶನ್ ಮತ್ತು ಟೆಕ್ನಾಲಜಿ ಇತ್ತೀಐರಿಸ್-2011~ ಮತ್ತು `ಸಾಗರ್ ಟೆಕ್‌ಫೆಸ್ಟ್-2011~ ಐರಿಸ್ ಫೆಸ್ಟ್‌ನಲ್ಲಿ ಕಾಲೇಜಿನ ಸುಮಾರು 22 ಸಂಘಟನೆಗಳು ಒಟ್ಟು ಸೇರಿ ನಾಲ್ಕು ದಿನಗಳ ಕಾಲ 8 ಸ್ಪರ್ಧೆಗಳನ್ನು ನಡೆಸಿತು.

`ಫ್ಯಾಷನ್ ಡಿಸಾಸ್ಟರ್~, ಸ್ಟಿಕೋಮ್ ಕ್ವಿಜ್, ಟ್ಯಾಟೂನಿಂಗ್, ಬ್ಲಾಗಿಂಗ್, ಜುವೆಲ್ಲರಿ ಡಿಸೈನಿಂಗ್, ಬಿಬ್ಲಿಕಲ್ ಆರ್ಟ್, ಮೆಹೆಂದಿ ಮುಂತಾದವುಗಳು ಈ ಸ್ಪರ್ಧೆಯಲ್ಲಿ ಸೇರಿದ್ದವು. `ಬ್ಯಾಟಲ್ ಆಫ್ ದಿ ರಾಕ್ ಬ್ಯಾಂಡ್~ ಸ್ಪರ್ಧೆಯನ್ನು ಇದೇ ಮೊದಲ ಬಾರಿಗೆ ಫೆಸ್ಟ್‌ನ ಅಂಗವಾಗಿ ನಡೆಸಲಾಗಿತ್ತು.

ನಾಲ್ಕು ದಿನಗಳ ಕಾಲ ನಡೆದ ಫೆಸ್ಟ್‌ನಲ್ಲಿ ಕಾಲೇಜು ವರ್ಣರಂಜಿತವಾಗಿ ಕಂಡುಬಂದಿತ್ತು. ಕ್ಯಾಂಪಸ್ ವರ್ಣರಂಜಿತವಾಗಿ ಕಾಣಿಸಿಕೊಳ್ಳಲು ಮತ್ತು ವಿದ್ಯಾರ್ಥಿಗಳಲ್ಲಿ ಹುರುಪು ತುಂಬಿಸಲು ಡ್ರೆಸ್‌ಕೋಡ್‌ಗಳನ್ನು ನೀಡಲಾಗಿತ್ತು.

ಇಷ್ಟೇ ಅಲ್ಲದೆ ಬೆಂಕಿಯಿಲ್ಲದೆ ಅಡುಗೆ ಮಾಡುವುದು, ಹೊಸ ರಾಗ ಹುಡುಕುವುದು, ನಿಧಿ ಹುಡುಕಾಟ ಮುಂತಾದ ಸ್ಪರ್ಧೆಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇನ್ನು ಫ್ಯಾಷನ್ ಶೋ ಇಲ್ಲದ ಫೆಸ್ಟ್ ಇದೆಯೇ? ಇಲ್ಲಿಯೂ ಅಷ್ಟೆ.

ಫ್ಯಾಷನ್ ಶೋದ್ಲ್ಲಲಿ ಕಾಲೇಜಿನ ವಿವಿಧ ಮಾಡೆಲ್‌ಗಳು ರ‌್ಯಾಂಪ್ ಮೇಲೆ ನಡೆದು ಕಾಸ್ಮೊಪಾಲಿಟನ್ ಮುಖವುಳ್ಳ ಭಾರತದ ವಿವಿಧ ಸಂಸ್ಕೃತಿಯನ್ನು ಪ್ರದರ್ಶಿಸಿದರು.

ಕೊನೆಯ ದಿನವಂತೂ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಇಷ್ಟೇ ಅಲ್ಲದೆ `ಮಿಸ್ ಐರಿಸ್~ ಕಿರೀಟಧಾರಣೆಯೂ ನಡೆಯಿತು.

ದಯಾನಂದ ಸಾಗರ್ ಸ್ಕೂಲ್ ಆಫ್ ಇನ್‌ಫಾರ್‌ಮೇಷನ್ ಆ್ಯಂಡ್ ಟೆಕ್ನಾಲಜಿ `ಸಾಗರ್ ಟೆಕ್‌ಫೆಸ್ಟ್-2011~ ಆಚರಿಸಿತು. ಎರಡು ದಿನಗಳ ಕಾಲ ನಡೆದ ಫೆಸ್ಟ್‌ನಲ್ಲಿ ವಿದ್ಯಾರ್ಥಿಗಳ ಬೌದ್ಧಿಕತೆಯನ್ನು ಅಳೆಯುವ ಹಲವು ಸ್ಪರ್ಧೆಗಳು ನಡೆದವು. 

`ಪೇಪರ್ ಪ್ರೆಸೆಂಟೇಶನ್~ ಕುರಿತಾದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ತಮ್ಮ ಉತ್ತರಗಳನ್ನು ನೀಡಿದರು.

ಎರಡು ದಿನಗಳ ಫೆಸ್ಟ್‌ನಲ್ಲಿ ಕಾಯಕ್ರಮಗಳ ಸರಣಿಯೇ ನಡೆಯಿತಲ್ಲದೆ ವಿದ್ಯಾರ್ಥಿಗಳಿಗೆ ಹೊಸ ಹೊಸ ವಿಷಯಗಳನ್ನು ಕಲಿಯುವ ಅವಕಾಶ ಒದಗಿಸಿತು. ಐಟಿ ಕ್ವಿಜ್‌ನಲ್ಲಂತೂ ವಿದ್ಯಾರ್ಥಿಗಳ ನಡುವೆ ತೀವ್ರ ಸ್ಪರ್ಧೆ ನಡೆಯಿತು. `ಡಿಬಗ್ಲಿಂಗ್~ನಲ್ಲಿ ಪ್ರೋಗ್ರಾಂ ಲ್ಯಾಂಗ್ವೇಜ್‌ಗಳನ್ನು ಬರೆಯುವ ಸ್ಪರ್ಧೆ ನಡೆಯಿತು.

ಇಷ್ಟೇ ಅಲ್ಲದೆ ಕಂಪ್ಯೂಟರ್ ಅಪ್ಲಿಕೇಷನ್‌ಗೆ ಸಂಬಂಧಿಸಿದಂತೆ ಪ್ರಬಂಧ ಸ್ಪರ್ಧೆಯೂ ನಡೆಯಿತು. ಬಿಸಿಎ, ಎಂಸಿಎ ಮತ್ತು ಬಿ ಎಸ್ಸಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಔದ್ಯಮಿಕ ವಲಯದಲ್ಲಿನ ಬೆಳವಣಿಗೆಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಈ ಸ್ಪರ್ಧೆಯ ಉದ್ದೇಶವಾಗಿತ್ತಲ್ಲದೆ ಫೆಸ್ಟ್ ವೇಳೆ ವಿದ್ಯಾರ್ಥಿಗಳು ಉದ್ಯಮ ವಲಯದ ಪರಿಣತರೊಂದಿಗೆ ಚರ್ಚೆ ನಡೆಸಿದರು.

ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಪ್ರಾಕ್ಟಿಕಲ್ ಅನುಭವಗಳನ್ನು ಪಡೆಯುವುದು ಈ ಫೆಸ್ಟ್‌ನಿಂದ ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.