ADVERTISEMENT

ಕ್ಯಾಂಪಸ್... ಕಲರ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 19:30 IST
Last Updated 22 ಫೆಬ್ರುವರಿ 2011, 19:30 IST
ಕ್ಯಾಂಪಸ್...  ಕಲರ್
ಕ್ಯಾಂಪಸ್... ಕಲರ್   

ದಾವಣಗೆರೆಯ ಬಾಪೂಜಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ  ಹೊನ್ನಾಳಿ ತಾಲ್ಲೂಕಿನ ತೀರ್ಥ ರಾಮೇಶ್ವರದಲ್ಲಿ ನಡೆದ ಮನೋಲ್ಲಾಸ ಮತ್ತು ನಾಯಕತ್ವ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವರ್ಗದ  ಸಿಬ್ಬಂದಿ ಜೊತೆಯಾಗಿ ತೆಗೆಸಿಕೊಂಡ ಚಿತ್ರ ಇದು. ಈ ವಿದ್ಯಾರ್ಥಿಗಳೇಕೆ ಕಾಡು ಮನುಷ್ಯರಂತೆ ವೇಷ ಹಾಕಿಕೊಂಡು ಫೋಟೊಗೆ ಪೋಸ್ ನೀಡಿದ್ದಾರೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು.

ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ  ಗುಡ್ಡ ಹತ್ತುವುದು, ಕಾಡು ಜನರ ವೇಷ ಹಾಕುವುದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಾಗಾಗಿ ಇಂತಹ ವೇಷ. ಅದೆಲ್ಲಾ ಸರಿ... ಚಿತ್ರವನ್ನು ಇನ್ನೊಮ್ಮೆ ನೋಡಿ ಮಧ್ಯದಲ್ಲಿ ನಿಂತ ವಿದ್ಯಾರ್ಥಿನಿಯೊಬ್ಬರು ನಾಲಿಗೆ ಹೊರಗಡೆ ಚಾಚಿ ಕೈಯಲ್ಲಿ ಏನೋ ಹಿಡಿದಿದ್ದಾರೆ. ಮಹಾಕಾಳಿ ಥರ!
 
ಕಾಡು ವೇಷಕ್ಕೂ ಈ ಪೋಸ್‌ಗೂ ಏನು ಸಂಬಂಧ? ಕಾಡು ಜನರ ದೇವತೆಯ ಪ್ರತಿಬಿಂಬವಾಗಿರಬಹುದೇ? ನಮಗೇನೂ ಗೊತ್ತಿಲ್ಲ. ಅವರೇ ಹೇಳಬೇಕಷ್ಟೆ... ಅಂದ ಹಾಗೆ ಈ ಚಿತ್ರವನ್ನು ವಿದ್ಯಾಲಯದ ಪ್ರಾಂಶುಪಾಲರೇ ‘ಯುವಜನ’ಕ್ಕೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.