ADVERTISEMENT

ನೀ ಏಕೆ ಮಾತು ಬಿಟ್ಟೆ?

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2011, 19:30 IST
Last Updated 2 ಆಗಸ್ಟ್ 2011, 19:30 IST
ನೀ ಏಕೆ ಮಾತು ಬಿಟ್ಟೆ?
ನೀ ಏಕೆ ಮಾತು ಬಿಟ್ಟೆ?   

ನಾನು ನಿನಗೆ
ಕೇಳಿದ್ದಾದರೂ ಏನು ನನ್ನ ಜೀವಾ?
ನಿನ್ನ ಪುಟ್ಟ ಮನಸ್ಸು ಮತ್ತು
ಬೊಗಸೆಯಷ್ಟು ಪ್ರೀತಿ ಮಾತ್ರ
ಆದರೆ, ನೀನು ನೀಡಿದ್ದು ಕೋಟಿ ಕೋಟಿ ಕನಸು
ಜೊತೆಗೆ, ಸಾಕೆನಿಸುವಷ್ಟು ನೋವು

ಪ್ರೀತಿಯ `ಪಾಪು~ ಹೇಗಿದ್ದೀಯೋ? ನೀನು ಚೆನ್ನಾಗಿರಬೇಕು ಅಂತಾ ದಿನಾಲು ದೇವರ ಹತ್ತಿರ ಕೇಳಿಕೊಳ್ಳುತ್ತೇನೆ. ಕಳೆದ ವಾರ ನಿನ್ನ ಬರ್ತ್ ಡೇ. ಅದಕೋಸ್ಕರಾನೆ ನಾ ನಿಂಗೆ ಈ ಪತ್ರವನ್ನಾ ಬರೀತಾ ಇದೀನಿ.

ಕಾರಣ ನೀ ನನ್ನ ಜೊತೆ ಮಾತಾಡದೇನೆ ಇವತ್ತಿಗೆ 6 ತಿಂಗಳು ಮುಗಿದು ಹೋದವು `ಪಾಪು~ ಏನೇ ಬರಲಿ, ನಾನು ನಿನಗೆ ಜನ್ಮದಿನದ ಶುಭಾಶಯ ಹೇಳುವೆ. ಪ್ರತಿ ವರ್ಷ ನೀನು ಹೀಗೆ ನಗುತ್ತಾ ಚೆನ್ನಾಗಿರಬೇಕು.

100 ವರ್ಷ ಬಾಳಿ ಬದುಕಬೇಕು. ಆ ಆಕಾಶದ ತಾರೆಗಳಂತೆ ಮಿರಿ ಮಿರಿ ಮಿಂಚತಾ ಇರಬೇಕು. ದುಃಖಾ ಅನ್ನೋದೆ ನಿನ್ನ ಬಾಳಲ್ಲಿ ಸುಳಿಬಾರದು. ಹಾಗೇ ನೀನು ಇರಬೇಕು.

ನಿನ್ನ ನಗುವನ್ನು ನೋಡಿ ಆ ದೇವರು ಸಹ ನಾಚಬೇಕು. ನಿನ್ನ ನಗು ಮುಖಾ ನೋಡೊಕೆ ಸೂರ್ಯ, ಚಂದ್ರ ಜಗಳಾಡಬೇಕು, ಆ ಥರಾ ಇರಬೇಕು ನೀನು ಅನ್ನೋದೆ, ಈ ನಿನ್ನ ಅಮ್ಮಿ ಆಸೆ. ಪುಟ್ಟಾ ಅದು ನನ್ನ ಬಿಟ್ಟು ನೀನು ಹೇಗೊ ಇದೀಯಾ?  ನನ್ನಿಂದಾ ಮಾತ್ರ ನಿನ್ನ ಮರೆಯೋಕೆ ಆಗ್ತಾನೆ ಇಲ್ಲಾ.

ದಿನಾ - ದಿನಾ ನಿನ್ನ ನೆನಪು ಹೆಚ್ಚು ಆಗ್ತಿದೆ ವಿನಃ ಕಡಿಮೆ ಆಕ್ತಿಲ್ಲ. ಡುಮ್ಮಾ ನೀ ಅಂದ್ರೆ ನಂಗೆ ತುಂಬಾ ಇಷ್ಟಾ ಕಣೋ. ನಿನ್ನ ಬಿಟ್ಟು ನಂಗೆ ಬದುಕಿರೋಕೆ ಸಾಧ್ಯಾನೇ ಇಲ್ಲಾ.
 ಪುಟ್ಟಾ ದಿನಾಲು ನೆನಪು ಬರ‌್ತೀಯಾ ಕಣೋ. ನಂಗೆ ಒಂದೇ ಒಂದು ಆಸೆ ಕಣೋ ನಿನ್ನ ಮಡಿಲಲ್ಲಿ ಮಲಗಿ ಜೋರಾಗಿ ಅಳಬೇಕು ಅನ್ನೊ ಆಸೆ.

ನಿನ್ನ ತೋಳಲ್ಲಿ ನಿಂತು ನನ್ನ ದುಃಖ, ತಳಮಳ ಎಲ್ಲಾ ಹೇಳಿ ಬಿಡೋ ಆಸೆ. ಆ ಟೈಮ್ ಬರುತ್ತೋ. ಇಲ್ಲೋ ಗೊತ್ತಿಲ್ಲಾ. ಬಂದ್ರೆ ನನ್ನಂತಹ ಅದೃಷ್ಟವಂತೆ ಬೇರೆ ಯಾರು ಇಲ್ಲಾ.ನಮ್ಮಿಬ್ಬರನ್ನು   ಅಗಲಿಸಿದ ಆ ದೇವರ ಮೇಲೆ ತುಂಬಾ ಕೋಪಾ ಕಣೋ ನಂಗೆ. ಅದಕ್ಕೆ ಅವನಿಗೆ ಬೈದು  ಮನಸ್ಸು ಹಗುರ ಮಾಡಿಕೊಳ್ಳುವೆ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT