ADVERTISEMENT

ವಿ(ಚಿತ್ರ)ಶಿಷ್ಟ ಪತ್ರ!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಪ್ರಿಯೆ / ಪ್ರಿಯತಮ

ಇದುವರೆಗೂ ನೀನು ನನ್ನಲ್ಲಿ ತೋರುತ್ತಿದ್ದ ಪ್ರೀತಿ. ಇಂದು
ಬೇಡವಾಗಿದೆ. ನಿನ್ನಿಂದ ದೂರವಾಗಬೇಕೆಂಬ ಆಸೆ ಬಹಳ
ಹೆಚ್ಚಾಗಿದೆ.ನಿನ್ನನ್ನು ಕಾಣಬೇಕೆಂಬ ಆತುರ ಈಗ ನನ್ನ ಮನದಲ್ಲಿ ಇಲ್ಲ.
ಏಕೆಂದರೆ ನಿನ್ನ ಅನುಚಿತ ವರ್ತನೆ ದಿನದಿನಕ್ಕೂ ಅಧಿಕವಾಗುತ್ತಿದೆ.

ಅಂದು ನಿನ್ನನ್ನು ಯಾವಾಗ ಭೇಟಿಯಾಗುವೆನೋ ಎಂದು ಕಾಯುತ್ತಿದ್ದೆ.
ಆದರೆ, ಈಗ ನಿನ್ನನ್ನು ನೋಡುವುದೇ ಬೇಡ ಅನ್ನಿಸುತ್ತಿದೆ.
ನಾವಿಬ್ಬರೂ ಒಂದಾದರೆ ಸದಾ ದುಃಖವನ್ನನುಭವಿಸಬೇಕಾಗುತ್ತದೆ.
ಅದರ ಬದಲು ದೂರವಾದರೆ ಸುಖದಿಂದ ಇರಬಹುದು.

ನಿನ್ನ ಕಾಗದಗಳನ್ನು ಓದಿದಾಗ ಹಿಂದೆ ನಡೆದುದೆಲ್ಲ ನೆನೆದು ದುಃಖವಾದರೂ,
ಸದ್ಯಕ್ಕೆ ನನ್ನ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನವಾಯಿತು.
ಕಡೆಯದಾಗಿ ಒಂದು ಮುಖ್ಯವಾದ ವಿಷಯ ಹೇಳುತ್ತೇನೆ.

ಇನ್ನು ಮುಂದೆ ನೀನು ನನಗೆ ಪತ್ರ ಬರೆಯುವುದು ಬೇಡ.
ನನ್ನನ್ನು ಮರೆತು ಬಾಳು. ನನ್ನಿಂದ ದೂರವಾಗುವುದಕ್ಕೆ ತಡ ಮಾಡಬೇಡ.
ನಿನಗೆ ಶುಭವಾಗಲಿ.
ಇನ್ನು ಮುಂದೆ ಕನಸಿನಲ್ಲಿಯೂ ಕೂಡ ನಿನ್ನನ್ನು ನೆನಪಿಸಿಕೊಳ್ಳಲಾರೆ.

ಸೂಚನೆ:  ಗೆಳತಿ/ಗೆಳೆಯ, ಇದರಲ್ಲಿ ಎರಡು ಪತ್ರವಿದೆ. ಈಗ ಪುನಃ ಮೇಲಿನಿಂದ ಒಂದು ಸಾಲಿನ ನಂತರ ಒಂದು ಸಾಲನ್ನು ಬಿಟ್ಟು ಓದುತ್ತಾ ಹೋಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT