ADVERTISEMENT

ಹೊಸ ಬದುಕಿನ ಆರಂಭ...

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST
ಹೊಸ  ಬದುಕಿನ ಆರಂಭ...
ಹೊಸ ಬದುಕಿನ ಆರಂಭ...   

ಕಾಲೇಜಿನ ಮೊದಲ ದಿನ ಎಲ್ಲರಿಗೂ ವಿಶೇಷ ಅನುಭವ ನೀಡುತ್ತದೆ. ಕಾಲೇಜಿಗೆ ಮೊದಲ ಬಾರಿ ಪ್ರವೇಶಿಸುವ ವಿದ್ಯಾರ್ಥಿಗಳಿಗಂತೂ ಏನು ಮಾಡಬೇಕೆಂಬುದೇ ತಿಳಿಯುವುದಿಲ್ಲ. ಆದರೆ, ದಿನಕಳೆದಂತೆ ಕಾಲೇಜು ಕ್ಯಾಂಪಸ್ ಆತ್ಮೀಯವಾಗತೊಡುತ್ತದೆ....

ಪ್ರೌಢಶಾಲೆಯ ಶಿಸ್ತಿನ ಜೀವನ ಮುಗಿಸಿ ಕಾಲೇಜು ಪ್ರವೇಶಿಸುವುದೆಂದರೆ ಎಲ್ಲರಿಗೂ ಅದೊಂದು ಅಪೂರ್ವ ಅನುಭವವೇ ಸರಿ. ಕಾಲೇಜಿನ ಆರಂಭದ ದಿನಗಳಲ್ಲಂತೂ ಎಲ್ಲೆಲ್ಲೂ ರಶ್ಶೋ ರಶ್ಶು.

ಕಾಲೇಜಿಗೆ ಮೊದಲ ಬಾರಿ ಪ್ರವೇಶಿಸುವ ವಿದ್ಯಾರ್ಥಿಗಳಿಗಂತೂ ಏನು ಮಾಡಬೇಕೆಂಬುದೇ ತಿಳಿಯುವುದಿಲ್ಲ. ಶಾಲೆ ಬಿಟ್ಟು ಕಾಲೇಜಿಗೆ ತೆರಳುವ ಕುತೂಹಲ ಮನಸ್ಸಿನಲ್ಲಿ ಇದ್ದರೂ ಕೂಡ ಎಷ್ಟೋ ವಿದ್ಯಾರ್ಥಿಗಳಿಗೆ ಕಾಲೇಜಿನ ಕುರಿತು ಸ್ವಲ್ಪವೂ ಮಾಹಿತಿ ಇರುವುದಿಲ್ಲ.

ಕಾಲೇಜಿನ ಮೊದಲ ದಿನವಂತೂ ಎಲ್ಲರಿಗೂ ವಿಶೇಷ ಅನುಭವ ನೀಡುತ್ತದೆ. ಕಾಲೇಜು ಜೀವನ ಹೆಚ್ಚಿನ ಸ್ವಾತಂತ್ರ್ಯ  ನೀಡುವುದಲ್ಲದೆ ವಿದ್ಯಾರ್ಥಿಗಳು ಹೊಸ ಹೊಸ ಗೆಳೆಯರನ್ನು ಸಂಪಾದಿಸುವಲ್ಲಿ ಎಲ್ಲರೂ ನಿರತರಾಗುತ್ತಾರೆ.
 
`ಹೊಸ ಗೆಳೆಯರನ್ನು ಸಂಪಾದಿಸುವ ವೇಳೆ ಟೆನ್ಶನ್ ಖಂಡಿತ ಆಗುತ್ತದೆ. ಸರಿಯಾಗಿ ಆಯ್ಕೆ ಮಾಡದಿದ್ದಲ್ಲಿ ಕೆಲವೊಮ್ಮೆ ಕೆಟ್ಟ ಮಂದಿಯ ಸಹವಾಸದಲ್ಲಿ ಬೀಳುವ ಸಾಧ್ಯತೆ ಇರುತ್ತದೆ~ ಎನ್ನುತ್ತಾರೆ ಈಗಷ್ಟೇ ಕಾಲೇಜು ಪ್ರವೇಶಿಸಿರುವ ತನ್ಯಾ ಜೇಕಬ್.

ಕಾಲೇಜು ಪ್ರವೇಶಿಸುವ ಹೆಚ್ಚಿನ ವಿದ್ಯಾರ್ಥಿಗಳು ಇದೇ ಅನುಭವವನ್ನು ಹೊಂದಿದವರಾಗಿರುತ್ತಾರೆ. ಹಾಗಾಗಿ ಅವರು ತಮ್ಮಳಗೆ ಆತ್ಮವಿಶ್ವಾಸ ವರ್ಧಿಸಿಕೊಳ್ಳುವುದು ಅಗತ್ಯವಾಗಿದೆ.

`ನಾನಂತೂ ತುಂಬಾ ನರ್ವಸ್ ಆಗಿದ್ದೆ. ಆದರೂ ಕೂಡ ಆತ್ಮವಿಶ್ವಾಸದ ಮುಖ ಹೊತ್ತುಕೊಂಡೇ ಒಳಪ್ರವೇಶಿಸಿದೆ, ಅದು ನನಗೆ ತುಂಬಾ ಸಹಾಯವಾಯಿತು~ ಜ್ಯೋತಿ ನಿವಾಸ್ ಕಾಲೇಜಿನ ನಿವೇದಿತಾ ದಿನಕರ್ ಹೇಳುತ್ತಾರೆ.

`ರ‌್ಯಾಗಿಂಗ್ ಭಯವೂ ಇತ್ತು. ಜೊತೆಗೆ ಸೀನಿಯರ್ ವಿದ್ಯಾರ್ಥಿಗಳನ್ನು ಹೇಗೆ ಸಮೀಪಿಸುವುದು ಎಂಬ ಭಯವೂ ಇತ್ತು. ಸೀನಿಯರ್ ವಿದ್ಯಾರ್ಥಿಗಳನ್ನು `ಸರ್~, `ಮ್ಯಾಡಮ್~ ಎಂದು ಸಂಬೋಧಿಸಬೇಕೆಂದು ಕೇಳಿದಾಗಲಂತೂ ಶಾಕ್ ಹೊಡೆದಂತಾಗಿತ್ತು~ ಎನ್ನುತ್ತಾರೆ.

ಇದನ್ನು ಹೊರತುಪಡಿಸಿದಲ್ಲಿ ಹೆದರುವ ಸಂದರ್ಭವೇನೂ ಇ್ಲ್ಲಲ. ಕಾಲೇಜಿನ ಮೊದಲ ಕೆಲವು ದಿನಗಳಲ್ಲಿ ಮಾತ್ರ ಈ ರೀತಿಯ ಭಾವನೆ  ಮೂಡುತ್ತವೆ~ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನ ಆನಂದ್ ಬುವಾ ಅಭಿಪ್ರಾಯಪಡುತ್ತಾರೆ.

`ಕಾಲೇಜಿನ ಮೊದಲ ದಿನವಂತೂ ನಮ್ಮ ತರಗತಿಗಳನ್ನು ಹುಡುಕುವುದೇ ದೊಡ್ಡ ಸಾಹಸದ ಕೆಲಸ. ನನಗೆ ರೂಂ ನಂಬರ್ ಗೊತ್ತಿದ್ದರೂ ಕೂಡ ಹುಡುಕುವುದು ಸಾಧ್ಯವಾಗಲಿಲ್ಲ.
 
ಅದೇ ವೇಳೆ ಹುಡುಗಿಯರ ಗುಂಪೊಂದು ಅದೇ ಕೋಣೆಯನ್ನು ಹುಡುಕುತ್ತ್ದ್ದಿದುದರಿಂದ ಸುಲಭವಾಯಿತು~ ಎನ್ನುತ್ತಾರೆ ಜ್ಯೋತಿ ನಿವಾಸ್ ಕಾಲೇಜಿನ ಪ್ರೀತಿ ಅಯ್ಯರ್.

ಇದೇನಿದ್ದರೂ ಕಾಲೇಜಿನ ಮೊದಲ ದಿನದ ಅನುಭವ ಮಾತ್ರ ಅನನ್ಯ. ದಿನಕಳೆದಂತೆ ಕಾಲೇಜ್ ಕ್ಯಾಂಪಸ್ ಹೆಚ್ಚು ಆತ್ಮೀಯವಾಗತೊಡಗುತ್ತದೆ. ಹೊಸ ಸ್ನೇಹಿತರು, ಉಪನ್ಯಾಸಕರು  ಎಲ್ಲರೂ ಪರಿಚಯವಾಗಿ ಸೀನಿಯರ್ಸ್ ಗಳೂ ಹಮ್ಮು ಬಿಮ್ಮು ಬಿಗುಮಾನ ತೊರೆದು ಹೊಂದಿಕೊಳ್ಳುತ್ತಾರೆ.

ಇವೆಲ್ಲವೂ ಮುಗಿಯುವ ಹೊತ್ತಿಗೆ ಪರೀಕ್ಷೆಗಳ ಕಾಲ ಎದುರು ನಿಲ್ಲುತ್ತದೆ. ಇಷ್ಟು ಬೇಗ ಒಂದು ವರ್ಷ ಮುಗಿದೇ ಹೋಯ್ತಲ್ಲ ಎಂದು ಯೋಚಿಸುವುದರೊಳಗೆ ಜೂನಿಯರ್ಸ್‌ಗಳು ಸೀನಿಯರ್ಸ್‌ಗಳಾಗಿರುತ್ತಾರೆ. 
 
ಕಾಲೇಜ್ ಬದುಕಿನಲ್ಲಿ ನಿಮ್ಮಲ್ಲೂ ಅನೇಕರಿಗೆ ಇದೇ ಬಗೆಯ  ಅನುಭವಗಳು  ಆಗಿರಬೇಕು. ನಿಮ್ಮದೇ ಊರಿನ ಇಲ್ಲವೇ ಬೇರೆ ಪಟ್ಟಣಗಳ ಕಾಲೇಜ್ ಪ್ರವೇಶಿಸುವಾಗ ನೀವು ಪಟ್ಟ ಪಡಿಪಾಟಲು ಮತ್ತಿತರ  ಹತ್ತಾರು ಅನುಭವಗಳನ್ನು `ಯುವಜನ~ ಜತೆ ಹಂಚಿಕೊಳ್ಳಿ.          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.