ADVERTISEMENT

ಹೊಸ ವರ್ಷಕ್ಕೆ ಇದೇ ನನ್ನ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 19:30 IST
Last Updated 20 ಡಿಸೆಂಬರ್ 2017, 19:30 IST
ಹೊಸ ವರ್ಷಕ್ಕೆ  ಇದೇ ನನ್ನ ನಿರ್ಧಾರ
ಹೊಸ ವರ್ಷಕ್ಕೆ ಇದೇ ನನ್ನ ನಿರ್ಧಾರ   

ಹೊಸ ವರ್ಷ ಬಂದರೆ ಸಾಕು, ಎಲ್ಲರಿಗೂ ಹೊಸ ಕನಸುಗಳು. ಈ ವರ್ಷವಾದರೂ ಹೊಸ ಮನೆ ಕಟ್ಟಬೇಕು, ಮದುವೆ ಆಗಬೇಕು, ಕೆಲಸ ಬದಲಾಯಿಸಬೇಕು ಅಥವಾ ವೃತ್ತಿಯನ್ನೇ ತೊರೆದು ಕೃಷಿ ಮಾಡಬೇಕು... ಹೀಗೆ ಹತ್ತಾರು ಆಸೆಗಳು. ಆ ಆಸೆಗಳ ಈಡೇರಿಕೆಗಾಗಿ ವರ್ಷದ ಮೊದಲ ದಿನವೇ ಬರುತ್ತವೆ ಒಂದಿಷ್ಟು ನಿರ್ಧಾರಗಳು.

ಹೌದು. ಪ್ರತಿ ವರ್ಷದ ಮೊದಲ ದಿನ ಯಾವುದಾದರೂ ಒಂದು ನಿರ್ಧಾರ ತೆಗೆದುಕೊಂಡು ಮರುದಿನವೇ ಮರೆಯುವವರು ಹೆಚ್ಚು. (ಪ್ರಾಯಶಃ ನಿಮ್ಮ ಹೆಸರೂ ಈ ಪಟ್ಟಿಯಲ್ಲಿ ಇರಬಹುದು; 2017ರ ಜನವರಿ ಒಂದರಂದು ಕೈಗೊಂಡ ನಿಮ್ಮ ನಿರ್ಧಾರ ಏನಾಯಿತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ! ) ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಏಳುವ, ಧಾರಾವಾಹಿ ವೀಕ್ಷಣೆ ಕಡಿಮೆ ಮಾಡುವ, ವ್ಯಸನದಿಂದ ಮುಕ್ತಿ ಹೊಂದುವ, ದುಂದುವೆಚ್ಚಕ್ಕೆ ಕಡಿವಾಣ ಹಾಕುವ, ಉಳಿತಾಯವನ್ನು ಹೆಚ್ಚಿಸುವ, ಪ್ರವಾಸಕ್ಕೆ ಹೆಚ್ಚಿನ ಸಮಯ ನೀಡುವ, ವಿಫಲ ಪ್ರೇಮಕ್ಕಾಗಿ ಕಣ್ಣೀರು ಸುರಿಸುವುದನ್ನು ನಿಲ್ಲಿಸುವ, ಕುಟುಂಬದ ಜೊತೆ ಹೆಚ್ಚಿನ ಕಾಲ ಕಳೆಯುವ... ಇಂತಹ ಏನೇನೋ ನಿರ್ಧಾರಗಳು. ಅಂದ ಹಾಗೆ ಹೊಸ ವರ್ಷಕ್ಕೆ ನೀವು ಕೈಗೊಳ್ಳಲಿರುವ ನಿರ್ಧಾರ ಏನು?

ಹಿಂದಿನ ವರ್ಷದ ನಿರ್ಧಾರ ಏನಾಯಿತು ಎಂದು ‘ಕಾಮನಬಿಲ್ಲು’ ಕೇಳುವುದಿಲ್ಲ. ಆದರೆ ಈ ಸಲ ಕೈಗೊಳ್ಳುವ ನಿರ್ಧಾರ ಗಟ್ಟಿಯಾದುದು ಎಂಬ ಖಾತ್ರಿ ಮಾತ್ರ ಅದಕ್ಕೆ ಬೇಕೇಬೇಕು! ಬರಹದ ಮಿತಿ 200 ಪದಗಳು. ನಿಮ್ಮ ವಿಳಾಸವನ್ನು ಸ್ಫುಟವಾಗಿ ಬರೆದಿರಬೇಕು. ಬರಹ ಕೈ ಸೇರಲು ಕೊನೆಯ ದಿನ ಡಿಸೆಂಬರ್ 30. ವಿಳಾಸಕ್ಕೆ ಏಳನೇ ಪುಟದ ಅಂಚನ್ನು ನೋಡಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.