ADVERTISEMENT

OK, Google ಎಂದು ಮೈಕ್ ಬಟನ್ ಒತ್ತಿ ‘ಹುಡುಕುವ’ ಮುನ್ನ ಗಮನಿಸಿ

ರಶ್ಮಿ ಕಾಸರಗೋಡು
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST
OK, Google ಎಂದು ಮೈಕ್ ಬಟನ್ ಒತ್ತಿ ‘ಹುಡುಕುವ’ ಮುನ್ನ ಗಮನಿಸಿ
OK, Google ಎಂದು ಮೈಕ್ ಬಟನ್ ಒತ್ತಿ ‘ಹುಡುಕುವ’ ಮುನ್ನ ಗಮನಿಸಿ   

ಗೂಗಲ್‌ನಲ್ಲಿ ಟೈಪ್ ಮಾಡುವ ಬದಲು ವಾಯ್ಸ್ ಸರ್ಚ್ ಮಾಡಿದ್ದೀರಾ? ಉದಾಹರಣೆಗೆ, ಗೂಗಲ್ ಸರ್ಚ್‌ಬಾರ್‌ನಲ್ಲಿ india ಎಂದು ಟೈಪ್ ಮಾಡುವ ಬದಲು ಮೈಕ್ ಒತ್ತಿ ಇಂಡಿಯಾ ಎಂದು ಹೇಳಿದರೆ ಇದಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಗಳು ತೆರೆದುಕೊಳ್ಳುತ್ತವೆ.

ಹೀಗೆ ನಮಗೆ ಸಹಾಯ ಮಾಡುತ್ತಿರುವುದು ಗೂಗಲ್ ಅಸಿಸ್ಟೆಂಟ್. ಹೀಗೆ ಸಹಾಯ ಮಾಡುವುದರ ಜತೆಗೆ ಗೂಗಲ್ ನಾವು ಹೇಳಿದ್ದನ್ನೆಲ್ಲಾ ರೆಕಾರ್ಡ್ ಮಾಡಿಟ್ಟಿರುತ್ತದೆ!. ಗೂಗಲ್ ಈ ರೀತಿ ಮಾಡುತ್ತಿದೆಯಾ ಎಂದು ಹುಬ್ಬೇರಿಸಬೇಡಿ. ನಮ್ಮ ವಾಯ್ಸ್ ಸರ್ಚ್‌ಗಳನ್ನೆಲ್ಲಾ ಗೂಗಲ್ ಸಂಗ್ರಹಿಸಿಟ್ಟಿರುತ್ತದೆ. ಇದು ಯಾಕೆ ಅಂತೀರಾ?

ಪ್ರತಿಯೊಬ್ಬ ವ್ಯಕ್ತಿಯ ಉಚ್ಚಾರಣೆಯನ್ನು ಗಮನಿಸಿ ಗೂಗಲ್ ವಾಯ್ಸ್ ಸರ್ಚ್ ಅನ್ನು ಮತ್ತಷ್ಟು ಉತ್ತಮಗೊಳಿಸುವ ಸಲುವಾಗಿ ಈ ಎಲ್ಲ ವಾಯ್ಸ್ ಸರ್ಚ್‌ಗಳನ್ನು ಗೂಗಲ್ ಸೇವ್ ಮಾಡಿರುತ್ತದೆ. Language Recognition Tools ಉತ್ತಮಗೊಳಿಸಲು ಇದು ಸಹಾಯವಾಗುತ್ತದೆ ಎಂದು ಗೂಗಲ್ ಹೇಳಿದೆ.

ADVERTISEMENT

ನಾವು ಮಾಡಿದ ವಾಯ್ಸ್ ಸರ್ಚ್ ಇಲ್ಲಿದೆ.

ಗೂಗಲ್‌ನಲ್ಲಿ ವಾಯ್ಸ್ ಸರ್ಚ್ ಮಾಡಿದ್ದರೆ, ನಾವು ಇಲ್ಲಿಯವರೆಗೆ ಮಾಡಿದ ನಮ್ಮ ವಾಯ್ಸ್ ಸರ್ಚ್ ಅನ್ನು ಗೂಗಲ್ ಸೇವ್ ಮಾಡಿಟ್ಟಿರುತ್ತದೆ. ಇದು ಎಲ್ಲಿದೆ ಎಂದು ನೋಡಬೇಕಾದರೆ https://support.google.com/websearch/answer/6030020?hl=en ಎಂಬ ಲಿಂಕ್ ಕ್ಲಿಕ್ ಮಾಡಿ. ಅಲ್ಲಿ ಗೂಗಲ್ ಖಾತೆಗೆ ಸೈನ್ ಇನ್ ಆಗಿ.

ನಿಮ್ಮ ಬಲಭಾಗದಲ್ಲಿ ಸೆಟ್ಟಿಂಗ್ಸ್ ಕೆಳಗೆ Delete searches & other activity ಎಂಬ ಲಿಂಕ್ ಕಾಣುತ್ತದೆ. ನಂತರ https://myactivity.google.com/myactivity ಎಂಬ ಲಿಂಕ್ ಕ್ಲಿಕ್ ಮಾಡಿದರೆ ನೀವು ಕಂಪ್ಯೂಟರ್, ಮೊಬೈಲ್‍ನಲ್ಲಿ ಹುಡುಕಿದ ಪದಗಳ ಮಾಹಿತಿ ಸಿಗುತ್ತದೆ. ಇಲ್ಲಿ ವರ್ಷಗಳ ಹಿಂದೆ ನಾವು ಬಳಸಿದ ವಾಯ್ಸ್ ಸರ್ಚ್‌ನ ಎಲ್ಲ ಮಾಹಿತಿ ಕಾಣಬಹುದು. ನಾವು ಸರ್ಚ್ ಮಾಡಿದ ಪದಗಳು ಯಾವುವು? ಯಾವಾಗ ಸರ್ಚ್ ಮಾಡಿದ್ದಿರಿ? ಹೀಗೆ ಎಲ್ಲ ಮಾಹಿತಿಗಳು ಇರುತ್ತವೆ. ನಮ್ಮ ಅರಿವಿಗೆ ಬಾರದಂತೆ ಇದೆಲ್ಲವೂ ಇಲ್ಲಿ ಸಂಗ್ರಹವಾಗಿರುತ್ತದೆ. ಅದನ್ನು ಡಿಲೀಟ್ ಮಾಡಬೇಕಾದರೆ ಡಿಲೀಟ್ ಆಯ್ಕೆಯೂ ಅಲ್ಲಿದೆ.

ಒಂದು ವೇಳೆ ನೀವು ಹುಡುಕುವ ಪದವನ್ನು ಸೇವ್ ಮಾಡುವುದು ಬೇಡ ಎಂದಾದರೆ Stop saving activity completely ಅಥವಾ Stop saving activity temporarily ಆಯ್ಕೆ ಕ್ಲಿಕ್ ಮಾಡಬಹುದು. ಹೀಗೆ ಮಾಡಬೇಕಾದರೆ https://myaccount.google.com/activitycontrols ಲಿಂಕ್ ಕ್ಲಿಕ್ ಮಾಡಿ, Web & App Activity ಎಂಬ ಆಯ್ಕೆಯನ್ನು ಆಫ್ ಮಾಡಿ. 2015ರಲ್ಲಿ ವಾಯ್ಸ್ ಸರ್ಚ್ ಫೀಚರ್ ಬಳಕೆಗೆ ಬಂದಿತ್ತು. ಗೂಗಲ್ ಸರ್ಚ್‌ಬಾರ್‌ನಲ್ಲಿ ‘Ok Google’ ಎಂಬ ಪದದ ಜತೆ ಮೈಕ್ ಚಿಹ್ನೆ ಕೂಡ ಕಾಣಿಸುತ್ತದೆ. ಮೈಕ್ ಒತ್ತಿ ನಮಗೆ ಸರ್ಚ್ ಮಾಡಬೇಕಾದ ವಿಷಯ ಹೇಳಿದರೆ ಕ್ಷಣಮಾತ್ರದಲ್ಲಿ ನಮ್ಮ ದನಿಯನ್ನು ಗುರುತಿಸಿ ಗೂಗಲ್ ಮಾಹಿತಿ ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.