ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2016, 19:49 IST
Last Updated 6 ಮಾರ್ಚ್ 2016, 19:49 IST

1) 2016–2017ನೇ ಸಾಲಿನ ಬಜೆಟ್‌ನಲ್ಲಿ ರಸ್ತೆ (ಎಲ್ಲ ರೀತಿಯ) ಅಭಿವೃದ್ಧಿಗಾಗಿ ಒಟ್ಟು ಎಷ್ಟು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ? (ಸಾವಿರ ಕೋಟಿ ರೂಪಾಯಿಗಳಲ್ಲಿ)
a) 97        
b)  98  
c) 99  
d) 99.5 ಸಾವಿರ ಕೋಟಿ ರೂಪಾಯಿ

2) 2016–17ನೇ ಸಾಲಿನ ಬಜೆಟ್‌ನಲ್ಲಿ ಈ ಕೆಳಕಂಡ ಯಾವ ಕ್ಷೇತ್ರಕ್ಕೆ  ಮೊದಲ ಭಾರಿಗೆ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ?
a) ಮೂಲಸೌಕರ್ಯ  
b) ಕೈಗಾರಿಕೆ
c) ನವೋದ್ಯಮ   
d) ನೀರಾವರಿ

3)  ಈ ಸಾಲಿನ (2016–17ನೇ) ರೈಲ್ವೆ ಬಜೆಟ್‌ನಲ್ಲಿ ಒಟ್ಟು ನಾಲ್ಕು ಸೂಪರ್‌ಫಾಸ್ಟ್‌  ರೈಲು ಯೋಜನೆಗಳನ್ನು  ಪ್ರಕಟಿಸಲಾಗಿದೆ. ಈ ಕೆಳಕಂಡವುಗಳಲ್ಲಿ ಯಾವುದು ಸೇರಿಲ್ಲ?
a) ತೇಜಸ್‌,  
b) ಭಾಗ್ಯಲಕ್ಷ್ಮಿ
c)  ಉದಯ್‌       
d) ಅಂತ್ಯೋದಯ

ADVERTISEMENT

4) ರೈತರು ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸುವ ಸಲುವಾಗಿ ಪ್ರಸಕ್ತ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಯಾವ ಯೋಜನೆಯನ್ನು  ಪ್ರಕಟಿಸಿದೆ?
a)ಫಸಲ್‌ ಭೂಮಿ ಯೋಜನೆ
b) ಫಸಲ್‌ ಬೀಮಾ ಯೋಜನೆ
c) ಸಾರಾ ಭೂಮಿ ಯೋಜನೆ
d) ಯಾವುದು ಅಲ್ಲ

5) ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸುವವರಿಗೆ ಈ ಸಾಲಿನ ಬಜೆಟ್‌ನಲ್ಲಿ ಎಷ್ಟು ವರ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಘೋಷಣೆ ಮಾಡಲಾಗಿದೆ?
a) ಎರಡು ವರ್ಷ
b) ಒಂದು ವರ್ಷ
c) ಮೂರು ವರ್ಷ
d) ನಾಲ್ಕು ವರ್ಷ

6) ಬಾಲಿವುಡ್‌ ಹಿರಿಯ ನಟ ಮನೋಜ್‌ ಕುಮಾರ್‌ಗೆ ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. ಇವರು ನಟಿಸಿದ ಯಾವ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಂದಿದೆ?
a) ಉಪ್‌ಕಾರ್‌  
b) ಶೋರ್‌
c) ಕ್ರಾಂತಿ 
d) ಕಾಂಜ್‌ ಕಿ ಗುಡಿಯಾ

7) ಸೆಲ್ಯುಲಾಯ್ಡ್‌ ಮ್ಯಾನ್‌ ಎಂದೇ ಜನಪ್ರಿಯರಾಗಿದ್ದ ಪಿ.ಕೆ ನಾಯರ್‌ ಮಾರ್ಚ್‌ 4 ರಂದು ನಿಧನರಾದರು. ಇವರು ಈ ಕೆಳಕಂಡ ಯಾವ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿದ್ದರು?
a)ನ್ಯಾಷನಲ್‌ ಫಿಲಂ ಅಕಾಡೆಮಿ  
b) ನ್ಯಾಷನಲ್‌ ಫಿಲಂ ಆರ್ಕೈವ್‌ ಆಫ್‌ ಇಂಡಿಯಾ
c) ಪುಣೆ  ಫಿಲಂ  ಆಕಾಡೆಮಿ  
d) ಇಂಡಿಯನ್‌ ಫಿಲಂ ಸೊಸೈಟಿ

8) ಲೋಕಸಭೆಯ ಮಾಜಿ ಸ್ಪೀಕರ್‌ ಪಿ.ಎ. ಸಂಗ್ಮಾ ಮಾರ್ಚ್‌ 4 ರಂದು ನಿಧನರಾದರು. ಇವರು ಹೆಚ್ಚಾಗಿ ಯಾವ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು?
a) ತುರಾ  
b) ವೆಸ್ಟ್‌ಗಾರೊ 
c) ಅಗರ್ತಲಾ  
d) ಮೇಘಾಲಯ ಲೋಕಸಭಾ ಕ್ಷೇತ್ರ

9) 2016ರ ಟಿ–20 ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಯಾವ ದೇಶ ಗೆಲುವು ಪಡೆಯಿತು?
a)ಭಾರತ 
b) ಪಾಕಿಸ್ತಾನ
c) ಶ್ರೀಲಂಕಾ 
d) ಯುಎಇ

10) ದೇಶದ್ರೋಹದ ಆರೋದಡಿಯಲ್ಲಿ ಬಂಧಿತರಾಗಿದ್ದ ದೆಹಲಿಯ ಜವಾಹರ ಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು?  ಆ ವಿದ್ಯಾರ್ಥಿಯ ಹೆಸರು ಏನು?
a) ಶೆಹ್ಲಾ ರಷೀದ್‌  
b)ಕನ್ಹಯ್ಯಾ ಕುಮಾರ್‌
c) ಅರ್ನಾಬ್‌ ಕುಮಾರ್‌                
d) ಮುಸ್ತಾಫ್‌ ಪಟೌಡಿ

ಉತ್ತರಗಳು.... 1–a, 2-–d, 3–b, 4–b, 5–c, 6–a, 7–b, 8–a, 9–b, 10–b

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.