ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST

1) ಈ ಕೆಳಕಂಡವರಲ್ಲಿ ಯಾರನ್ನು ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ?
a) ಆ್ಯಡಂ ಸ್ಮಿತ್ 
b) ಎ. ಮಾರ್ಷಲ್
c) ಡಾ. ಕೇನ್ಸ್
d) ಜಾನ್ ರಾಬಿನ್ಸ್

2) ಅರ್ಥಶಾಸ್ತ್ರದಲ್ಲಿ ಇಳಿಮುಖ ಸೀಮಾಂತ ತುಷ್ಟಿಗುಣವನ್ನು ಜನಪ್ರಿಯಗೊಳಿಸಿದ ಅರ್ಥಶಾಸ್ತ್ರಜ್ಞ ಯಾರು ?
a) ಗುನ್ನಾರ್ ಮಿರ್ಡಾಲ್  
b) ಆಲ್ಫ್ರೆಡ್ ಮಾರ್ಷಲ್
c) ಜೆ. ಎಸ್. ಮಿಲ್ 
d) ರಗ್ನಾರ್ ಪ್ರಿಷ್

3) 2012 ಜೂನ್ 18ರಂದು ವಿಧಾನಸಭೆಯಲ್ಲಿ ಯಾವ ಮಹೋತ್ಸವನ್ನು ಆಚರಿಸಲಾಯಿತು?
a) ರಜತ ಮಹೋತ್ಸವ 
b) ಸುವರ್ಣ ಮಹೋತ್ಸವ
c) ವಜ್ರ ಮಹೋತ್ಸವ
d) ಯಾವುದು ಅಲ್ಲ

4) ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಎಷ್ಟನೇ ವಿಧಾನಸಭೆ ಚಾಲ್ತಿಯಲ್ಲಿದೆ?
a) 11ನೇ ವಿಧಾನಸಭೆ
b) 12ನೇ ವಿಧಾನಸಭೆ
c) 13ನೇ ವಿಧಾನಸಭೆ
d) 14ನೇ ವಿಧಾನಸಭೆ

5) ಕರ್ನಾಟಕ ರಾಜ್ಯದಲ್ಲಿ ಒಟ್ಟು ಎಷ್ಟು ಬಾರಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಲಾಗಿದೆ?
a) 2 ಬಾರಿ 
b) 3 ಬಾರಿ
c) 4 ಬಾರಿ 
d) 5 ಬಾರಿ

6) ವಿಶ್ವದ ಅತಿ ಎತ್ತರದ ಪ್ರಸ್ಥಭೂಮಿ ಯಾವುದು? ಅದು ಎಲ್ಲಿದೆ?
a) ಕಿಂಬರ್ಲಿ ಪ್ರಸ್ಥಭೂಮಿ - ಆಸ್ಟ್ರೇಲಿಯಾ  
b) ಶಾನ್ ಪ್ರಸ್ಥಭೂಮಿ - ಇರಾನ್
c) ಪಾಮಿರ್ ಪ್ರಸ್ಥಭೂಮಿ - ಟಿಬೆಟ್ 
d) ಕೊಲರೇಡೊ ಪ್ರಸ್ಥಭೂಮಿ - ಉತ್ತರ ಅಮೆರಿಕ

7) ಈ ಕೆಳಕಂಡ ಯಾವ ಮಣ್ಣಿನಲ್ಲಿ ಅತಿ ಹೆಚ್ಚು ಸಾರಜನಕ ಮತ್ತು ಸಾವಯವ ಅಂಶಗಳಿರುತ್ತವೆ?
a) ಮರುಭೂಮಿ ಮಣ್ಣು 
b) ಪರ್ವತ ಮಣ್ಣು
c) ನೀರಾವರಿ ಮಣ್ಣು  
d) ಗಟ್ಟಿ ಮಣ್ಣು

8) ಸೂರ್ಯ ದೇವನನ್ನು ಪೂಜಿಸುತ್ತಿದ್ದ ಸುಮೇರಿಯನ್ನರ ಕಾಲದಲ್ಲಿ ದೇವಾಲಯಗಳನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?
a) ಜಿಗ್ಗುರಾತ್ 
b) ಶಮಾಸ್
c) ಗಿಲ್ಗಮೇಶ್ 
d) ಕ್ಯೂನಿಫಾರಂ

9) ಭಾರತಕ್ಕೆ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಬಂದಿತು. ಅದು ಯಾವ ವಾರವಾಗಿತ್ತು?
a) ಶುಕ್ರವಾರ  
b) ಶನಿವಾರ
c) ಭಾನುವಾರ  
d) ಸೋಮವಾರ

10) ಕರ್ನಾಟಕದಲ್ಲಿ ಭೂಕಂಪ ಮಾಪನ ಕೇಂದ್ರವು ಈ ಕೆಳಕಂಡ ಯಾವ ಸ್ಥಳದಲ್ಲಿದೆ?
a) ಹಿರಿಯೂರು  
b) ಗೌರಿಬಿದನೂರು
c) ಬೆಂಗಳೂರು   
d) ಹಾಸನ

ಉತ್ತರಗಳು: 1-a, 2-b, 3-c, 4-d, 5-d, 6-c, 7-b, 8-a, 9-a, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.