ADVERTISEMENT

‘ಪ್ರಜಾವಾಣಿ ರಸಪ್ರಶ್ನೆ’ ಸ್ಪರ್ಧೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 18:21 IST
Last Updated 24 ಡಿಸೆಂಬರ್ 2017, 18:21 IST
‘ಪ್ರಜಾವಾಣಿ ರಸಪ್ರಶ್ನೆ’ ಸ್ಪರ್ಧೆ ಆಯೋಜನೆ
‘ಪ್ರಜಾವಾಣಿ ರಸಪ್ರಶ್ನೆ’ ಸ್ಪರ್ಧೆ ಆಯೋಜನೆ   

ಬೆಂಗಳೂರು: ‘ಪ್ರಜಾವಾಣಿ’ ಪ್ರತಿ ವರ್ಷದಂತೆ ಈ ಬಾರಿಯೂ ಪ್ರೌಢಶಾಲೆ ವಿದ್ಯಾರ್ಥಿಗಳ ಬುದ್ಧಿಶಕ್ತಿ ಪರೀಕ್ಷಿಸುವ, ಆ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ದಾರಿದೀಪವಾಗಬಲ್ಲ ‘ರಸಪ್ರಶ್ನೆ’ ಸ್ಪರ್ಧೆ ಆಯೋಜಿಸುತ್ತಿದೆ.

ಈ ಬಾರಿಯ ಸ್ಪರ್ಧೆ ನಮ್ಮ ನಾಲ್ಕನೇ ಆವೃತ್ತಿಯಾಗಿದ್ದು, 2018ರ ಜನವರಿ 8ರಿಂದ 24ರವರೆಗೆ ರಾಜ್ಯದ ಹತ್ತು ವಲಯಗಳಲ್ಲಿ ನಡೆಯುತ್ತದೆ.

ಪ್ರವೇಶ ಉಚಿತ:  ಸ್ಪರ್ಧೆಗೆ ಭಾಗವಹಿಸಲು ಉಚಿತ ಪ್ರವೇಶಾವಕಾಶವಿದೆ. ಭಾಗವಹಿಸಲು ಇಚ್ಛಿಸುವ ತಂಡಗಳು ಕಡ್ಡಾಯವಾಗಿ ಶಾಲೆಯ ಅನುಮತಿ ಪಡೆದಿರಬೇಕು. ಸ್ಪರ್ಧೆ ನಡೆಯುವ ದಿನದವರೆಗೂ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ.

ADVERTISEMENT

ಹತ್ತು ವಲಯಗಳಲ್ಲಿ ನಡೆಯಲಿದೆ ಸ್ಪರ್ಧೆ:  ಮೈಸೂರು, ಹಾಸನ, ಮಂಗಳೂರು, ಧಾರವಾಡ, ವಿಜಯಪುರ, ಕಲಬುರ್ಗಿ, ರಾಯಚೂರು, ದಾವಣಗೆರೆ, ತುಮಕೂರಿನಲ್ಲಿ ವಲಯಮಟ್ಟದ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ ಸ್ಪರ್ಧಿಗಳು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ 20 ಪ್ರಶ್ನೆಗಳಿಗೆ ಉತ್ತರಿಸಬೇಕು.

ಒಂದು ಶಾಲೆಯಿಂದ ಗರಿಷ್ಠ 3 ತಂಡಗಳು ಭಾಗವಹಿಸಬಹುದು. ತಂಡದಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರತಿ ವಲಯದಿಂದ ಒಟ್ಟು ಆರು ತಂಡಗಳನ್ನು ಬೆಂಗಳೂರಿನಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ನಂತರ ಒಟ್ಟು ಹತ್ತು ತಂಡಗಳು ಅಂತಿಮ ಹಂತಕ್ಕೆ ಪ್ರವೇಶ ಪಡೆಯಲಿವೆ.

ಪೈನಲ್‌ ತಲುಪಿದ ಎಲ್ಲಾ ತಂಡಗಳಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಮೊದಲ ಐದು ತಂಡಗಳನ್ನು ಮಾತ್ರ ವಿಜೇತ ತಂಡಗಳೆಂದು ಘೋಷಿಸಲಾಗುವುದು. ಜತೆಗೆ, ವಲಯಮಟ್ಟದಲ್ಲಿ ಮೊದಲ ಮೂರು ಸ್ಥಾನ ಪಡೆದುಕೊಳ್ಳುವ ತಂಡಗಳಿಗೆ ಪ್ರತ್ಯೇಕ ಪ್ರಶಸ್ತಿ ನೀಡಲಾಗುವುದು. ಒಟ್ಟು ₹2 ಲಕ್ಷದವರೆಗೂ ಬಹುಮಾನ ನೀಡಲಾಗುವುದು.

ಕ್ವಿಜ್‌ ಮಾಸ್ಟರ್‌ಗಳಾಗಿ ರಾಘವ್‌ ಚಕ್ರವರ್ತಿ ಮತ್ತು ಸಾರ್ಥಕ್‌ ಖುಂಟಿಯಾ ರಸಪ್ರಶ್ನೆ ನಡೆಸಿಕೊಡಲಿದ್ದಾರೆ. ವಾಲ್‌ನಟ್‌ ನಾಲೆಡ್ಜ್‌ ಸಲ್ಯೂಷನ್ಸ್‌ ಸಹಭಾಗಿತ್ವದಲ್ಲಿ ‘ದೀಕ್ಷಾ’ ಶಿಕ್ಷಣ ಸಂಸ್ಥೆಯು ‘ಪ್ರಜಾವಾಣಿ–ರಸಪ್ರಶ್ನೆ’ಯನ್ನು ಪ್ರಸ್ತುತಪಡಿಸುತ್ತಿದೆ. ಸನ್‌ಪ್ಯೂರ್‌, ಸಿಂಡಿಕೇಟ್‌ ಬ್ಯಾಂಕ್‌, ಗ್ಲೂಕೋವಿಟ ಬೋಲ್ಟ್ಸ್‌ ಪ್ರಾಯೋಜಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.