ADVERTISEMENT

ಸೋಮವಾರ, ಆಗಸ್ಟ್ 28, 2017

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2017, 19:30 IST
Last Updated 27 ಆಗಸ್ಟ್ 2017, 19:30 IST

1) 1814-15ರಲ್ಲಿ ನೇಪಾಳದ ಗೂರ್ಖಾರೊಂದಿಗೆ ಯುದ್ಧ ಮಾಡಿದ ಬ್ರಿಟಿಷ್ ಅಧಿಕಾರಿ ಯಾರು?
a) ಲಾರ್ಡ್ ಹೆಸ್ಟಿಂಗ್ಸ್
b) ಲಾರ್ಡ್ ಕ್ಯಾನಿಂಗ್
c) ಲಾರ್ಡ್ ಹೆಲ್ಗಿನ್
d) ಲಾರ್ಡ್ ಎಲೆನ್ ಬರ್ಗ್

2) ಖಾನ್ ಅಬ್ದುಲ್ ಗಫಾರ್ ಖಾನ್ ‘ಕೆಂಪಂಗಿದಳ’ ಸ್ಥಾಪನೆ ಮಾಡಿದರೆ, ‘ಬಹಿಷ್ಕೃತ ಹಿತಕಾರಿಣಿ ಸಭಾ’ವನ್ನು ಯಾರು ಸ್ಥಾಪನೆ ಮಾಡಿದರು?
a) ಜ್ಯೋತಿ ಭಾ ಪುಲೆ b) ಗದ್ದರ್
c) ಎಂ.ಎನ್. ರಾಯ್ d) ಬಿ.ಆರ್. ಅಂಬೇಡ್ಕರ್

3) 1865ರಲ್ಲಿ ‘ಆದಿ ಬ್ರಹ್ಮಸಮಾಜ’ವನ್ನು ಸ್ಥಾಪನೆ ಮಾಡಿದ ಸಮಾಜಸುಧಾರಕ ಯಾರು?
a) ದೇವೇಂದ್ರನಾಥ್ ಠಾಕೂರ್
b) ಕೇಶವ್ ಚಂದ್ರಸೇನ್
c) ಆತ್ಮರಾಮ್ ಪಾಂಡುರಂಗ
d) ಗೋಪಾಲ ಹರಿ ದೇಶ್‌ಮುಖ್‌

ADVERTISEMENT

4) ಗೌರವ ಡಾಕ್ಟರೇಟ್‌ಗೆ ಸಮನಾದ ‘ನಾಡೋಜ’ ಪ್ರಶಸ್ತಿಯನ್ನು ಈ ಕೆಳಕಂಡ ಯಾವ ವಿಶ್ವವಿದ್ಯಾಲಯ ನೀಡುತ್ತದೆ?
a) ಕುವೆಂಪು ವಿಶ್ವವಿದ್ಯಾಲಯ b) ಧಾರಾವಾಡ ವಿಶ್ವವಿದ್ಯಾಲಯ
c) ಕನ್ನಡ ವಿಶ್ವವಿದ್ಯಾಲಯ d) ಮೈಸೂರು ವಿಶ್ವವಿದ್ಯಾನಿಲಯ

5)ಜನರಿಗೆ ಆವಶ್ಯಕವಾಗಿ ಬೇಕಾಗಿರುವಂತಹ ಆಹಾರ, ವಸತಿ, ಬಟ್ಟೆ ಸಿಗದಂತಹ ಪರಿಸ್ಥಿತಿಯು……………?
a) ನಿರಾಪೇಕ್ಷ ಬಡತನ b) ಸಾಪೇಕ್ಷ ಬಡತನ c) ಸಮಪೇಕ್ಷ ಬಡತನ d) ಸಾಂದ್ರಿಕ ಬಡತನ

6) ಸಟ್ಲೆಜ್ ನದಿಗೆ ಕಟ್ಟಿರುವ ಭಾಕ್ರಾ ನಂಗಲ್ ಅಣೆಕಟ್ಟೆಯ ನೀರನ್ನು ಈ ಕೆಳಕಂಡ ಯಾವ ರಾಜ್ಯಗಳು ಬಳಕೆ ಮಾಡುತ್ತವೆ?
a) ಪಂಜಾಬ್ b) ಹರಿಯಾಣc) ರಾಜಸ್ತಾನ d) ಮೇಲಿನ ಎಲ್ಲವು

7) ಸ್ವಾತಂತ್ರ್ಯಪೂರ್ವದಲ್ಲಿ ಅಸ್ತಿತ್ವದಲ್ಲಿಲ್ಲದ ಒಂದು ಭೂಸುಧಾರಣಾ ಪದ್ಧತಿಯನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
a) ಜಮೀನ್ದಾರಿ ಪದ್ಧತಿ b) ರೈತವಾರಿ ಪದ್ಧತಿ
c) ಮಹಲ್ವಾರಿ ಪದ್ಧತಿ d) ಭೂವಾರಿ ಪದ್ಧತಿ

8) 2002ರಲ್ಲಿ ಸಂವಿಧಾನದ 86ನೇ ತಿದ್ದುಪಡಿ ಮೂಲಕ ಯಾವ ಮೂಲಭೂತ ಕರ್ತವ್ಯವನ್ನು ಸೇರಿಸಲಾಯಿತು?
a) ಮಕ್ಕಳಿಗೆ ಕಡ್ಡಾಯ ಶಿಕ್ಷಣ b) ವಯಸ್ಕರಿಗೆ ಕಡ್ಡಾಯ ಶಿಕ್ಷಣ
c) ಮಹಿಳೆಯರಿಗೆ ಕಡ್ಡಾಯ ಶಿಕ್ಷಣ d) ಶಿಕ್ಷಕರಿಗೆ ಕನಿಷ್ಠ ವೇತನ

9) ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರ ವಯೋಮಿತಿ ಎಷ್ಟು ವರ್ಷಗಳು?
a) 60 ವರ್ಷಗಳು b) 62 ವರ್ಷಗಳು
c) 65 ವರ್ಷಗಳು d) ವಯಸ್ಸಿನ ಮಿತಿ ಇಲ್ಲ

10) 70 ಕೆ. ಜಿ. ತೂಕದ ಒಬ್ಬ ಮನುಷ್ಯನ ದೇಹದಲ್ಲಿರುವ ರಕ್ತದ ಸರಾಸರಿ ಪ್ರಮಾಣ ಎಷ್ಟಿರುತ್ತದೆ?
a) 2.5 ಲೀಟರ್ b) 3.5 ಲೀಟರ್
c) 4. 6 ಲೀಟರ್ d) 5.6 ಲೀಟರ್

ಉತ್ತರಗಳು 1-a, 2-d, 3- b, 4-c, 5-b, 6-d, 7-d, 8-a, 9-c, 10-d.

⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.