ADVERTISEMENT

ಪ್ರಜಾವಾಣಿ ಕ್ವಿಜ್‌: ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ ಕುತೂಹಲ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 19:30 IST
Last Updated 31 ಡಿಸೆಂಬರ್ 2017, 19:30 IST
ಪ್ರಜಾವಾಣಿ ಕ್ವಿಜ್‌: ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ ಕುತೂಹಲ
ಪ್ರಜಾವಾಣಿ ಕ್ವಿಜ್‌: ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ ಕುತೂಹಲ   

ಬೆಂಗಳೂರು: ‘ಪ್ರಜಾವಾಣಿ’ ರಸಪ್ರಶ್ನೆ ಕಾರ್ಯಕ್ರಮದ ದಿನಾಂಕ ಸಮೀಪಿಸುತ್ತಿದ್ದು ವಿದ್ಯಾರ್ಥಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ರಾಜ್ಯದಾದ್ಯಂತ ಈಗಾಗಲೇ ನೂರಾರು ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ರಸಪ್ರಶ್ನೆಲ್ಲಿ ಭಾಗವಹಿಸಲು ತಮ್ಮ ಹೆಸರು ನೋಂದಾಯಿಸಿದ್ದಾರೆ. ದಿನದಿಂದ ದಿನಕ್ಕೆ ತಂಡಗಳ ಸಂಖ್ಯೆ ಏರುತ್ತಿದ್ದು, ವಿದ್ಯಾರ್ಥಿಗಳಲ್ಲಿ ಪೈಪೋಟಿಯೂ ತೀವ್ರಗೊಳ್ಳುತ್ತಿದೆ.

‘ಪ್ರಜಾವಾಣಿ’ ರಸಪ್ರಶ್ನೆಯಲ್ಲಿ ತಮ್ಮ ಶಾಲಾ ವಿದ್ಯಾರ್ಥಿಗಳ ಬುದ್ಧಿ ಶಕ್ತಿಯನ್ನು ಓರೆಗೆ ಹಚ್ಚಲು ಸಿದ್ಧವಾಗಿರುವ ಶಾಲೆಗಳು ಇದಕ್ಕಾಗಿಯೇ, ಶಾಲಾ ಮಟ್ಟದಲ್ಲಿ ವಿವಿಧ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.

ADVERTISEMENT

ಮೈಸೂರು, ಹಾಸನ, ಮಂಗಳೂರು, ಧಾರವಾಡ, ವಿಜಯಪುರ, ಕಲಬುರ್ಗಿ, ರಾಯಚೂರು, ದಾವಣಗೆರೆ, ತುಮಕೂರು, ಬೆಂಗಳೂರಿನಲ್ಲಿ (ಒಟ್ಟು 10 ನಗರಗಳಲ್ಲಿ) ಕ್ವಿಜ್‌ ಆಯೋಜಿಸಲಾಗಿದೆ. 800ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ರಸಪ್ರಶ್ನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಕ್ವಿಜ್‌ ಎಲ್ಲೆಲ್ಲಿ: ಮೈಸೂರು ವಲಯದ ರಸಪ್ರಶ್ನೆ ಇದೇ 8ರಂದು ನಡೆಯಲಿದೆ. ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವಿದ್ಯಾರ್ಥಿ
ಗಳು ಭಾಗವಹಿಸಬಹುದು. ಹಾಸನ ವಲಯದಲ್ಲಿ ಇದೇ9ರಂದು ರಸಪ್ರಶ್ನೆ ನಡೆಯಲಿದ್ದು, ಹಾಸನ, ಚಿಕ್ಕಮಗಳೂರು, ಮಂಡ್ಯದ ಕೆಲ ಭಾಗದ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದೆ.

ಇದೇ 11ರಂದು ಮಂಗಳೂರು ವಲಯದಲ್ಲಿ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ), ಇದೇ 12ರಂದು ಧಾರವಾಡ ವಲಯದಲ್ಲಿ (ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ, ಹಾವೇರಿ), ಇದೇ 16ರಂದು ವಿಜಯಪುರ ವಲಯದಲ್ಲಿ (ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಕೆಲ ಭಾಗ), ಇದೇ17 ರಂದು ಕಲಬುರ್ಗಿ ವಲಯದಲ್ಲಿ (ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲೆಗಳು), ಇದೇ 18ರಂದು ರಾಯಚೂರು ವಲಯದಲ್ಲಿ (ರಾಯಚೂರು, ಕೊಪ್ಪಳ, ಬಳ್ಳಾರಿಯ ಕೆಲ ಭಾಗ), ಇದೇ 19ರಂದು ದಾವಣಗೆರೆ ವಲಯದಲ್ಲಿ (ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ), ತುಮಕೂರು ವಲಯದಲ್ಲಿ ಇದೇ 22ರಂದು (ತುಮಕೂರು, ಚಿಕ್ಕಬಳ್ಳಾಪುರ), ಬೆಂಗಳೂರು ವಲಯದಲ್ಲಿ ಇದೇ 24ರಂದು (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ) ಕ್ವಿಜ್‌ ನಡೆಯಲಿವೆ.

ಎಲ್ಲ ಹಂತಗಳಿಗೂ ಆಯ್ಕೆಯಾದ ತಂಡಗಳಿಗೆ ಅತ್ಯಾಕರ್ಷಕ ಬಹುಮಾನಗಳು ದೊರೆಯಲಿವೆ. ನೋಂದಣಿಗೆ ಶುಲ್ಕ ಇಲ್ಲ. ವಲಯ ಮಟ್ಟದಲ್ಲಿ ನಡೆಯುವ ಕ್ವಿಜ್‌ಗೆ ಇನ್ನೂ ಸಮಯಾವಕಾಶ ಇದ್ದು, ಆಯಾ ವಲಯ ವ್ಯಾಪ್ತಿಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಮೂಲಕ ನೋಂದಾಯಿಸಿಕೊಳ್ಳಬಹುದು.

ಇದು ‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಶಿಪ್‌ನ ನಾಲ್ಕನೇ ಆವೃತ್ತಿಯಾಗಿದ್ದು, ವಾಲ್‌ನಟ್‌ ನಾಲೆಡ್ಜ್‌ ಸಲ್ಯೂಷನ್ಸ್‌ ಸಹಭಾಗಿತ್ವದಲ್ಲಿ ‘ದೀಕ್ಷಾ’ ಶಿಕ್ಷಣ ಸಂಸ್ಥೆ ಪ್ರಸ್ತುತಪಡಿಸುತ್ತಿದೆ. ಕ್ವಿಜ್‌ ಮಾಸ್ಟರ್‌ಗಳಾಗಿ ರಾಘವ್‌ ಚಕ್ರವರ್ತಿ, ಸಾರ್ಥಕ್‌ ಖುಂಟಿಯಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಈ ಹಿಂದೆ ಕೇಳಲಾಗಿದ್ದ ಪ್ರಶ್ನೆಗಳು ಮತ್ತು ಹೆಚ್ಚಿನ ಮಾಹಿತಿಗೆ www.prajavani.netಗೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.