ADVERTISEMENT

ಅಂಗವಿಕಲರ ವಾಲಿಬಾಲ್ : ಕರ್ನಾಟಕಕ್ಕೆ ಕಿರೀಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಬೆಳಗಾವಿ: ಎದುರಾಳಿಗಳ ಪ್ರಬಲ ಪೈಪೋಟಿಯನ್ನು ಸಮರ್ಥವಾಗಿ ಮೆಟ್ಟಿ ನಿಂತ ಕರ್ನಾಟಕ ತಂಡದವರು ಭಾರತೀಯ ಪ್ಯಾರಾಲಿಂಪಿಕ್ ವಾಲಿಬಾಲ್ ಒಕ್ಕೂಟ ಆಶ್ರಯದ ಅಂಗವಿಕಲರ ರಾಷ್ಟ್ರೀಯ ಸ್ಟ್ಯಾಂಡಿಂಗ್ ವಾಲಿಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆದರು.

ನಗರದ ಸಿಪಿಇಡಿ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ನಿಶಾಂತ ಹಾಗೂ ಅಶೋಕ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಆತಿಥೇಯ ತಂಡ 3-1ಸೆಟ್‌ಗಳಿಂದ ಆಂಧ್ರಪ್ರದೇಶದ ಎದುರು ಜಯ ಪಡೆಯಿತು.

ಮೊದಲ ಎರಡು ಸೆಟ್‌ಗಳನ್ನು ಕ್ರಮವಾಗಿ 25-16 ಹಾಗೂ 25-18 ರಲ್ಲಿ ಸುಲಭವಾಗಿ ಗೆದ್ದುಕೊಂಡ ಕರ್ನಾಟಕ ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಿಸಬೇಕಾಗಿ ಬಂತು. ಈ ಸೆಟ್ 25-21 ಪಾಯಿಂಟ್‌ಗಳಿಂದ ಆಂಧ್ರದ ಪಾಲಾಯಿತು.

ಆದರೆ ನಾಲ್ಕನೇ ಸೆಟ್‌ನಲ್ಲಿ ಮೊದಲಿನಿಂದಲೂ ಹಿಡಿತ ಸಾಧಿಸಿದ ಆತಿಥೇಯರು 25-18 ಪಾಯಿಂಟ್‌ಗಳಿಂದ ಜಯ ಸಾಧಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.