ದುಬೈ (ಪಿಟಿಐ): ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ಟೆಸ್ಟ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ.
ಭಾನುವಾರ ಬಿಡುಗಡೆಯಾದ ರ್‍ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಮೊದಲ ಸ್ಥಾನಕ್ಕೆ ಏರಿದ್ದಾರೆ. ಅಶ್ವಿನ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ (17ಕ್ಕೆ6) ಅತ್ಯುತ್ತಮ ದಾಳಿ ನಡೆಸಿದ್ದರು. ಇದರಿಂದ ಬ್ರಾಡ್27 ಅಂಕ ಪಡೆದ ಕಾರಣ ಅಶ್ವಿನ್ ಹಿಂದುಳಿದರು. ಬ್ರಾಡ್ ಬಳಿ 880 ಪಾಯಿಂಟ್ಸ್ ಇವೆ. ಅಶ್ವಿನ್ 871 ಪಾಯಿಂಟ್ಸ್ ಹೊಂದಿದ್ದಾರೆ.
ಬ್ರಾಡ್ ಅವರು ಸ್ಟೀವ್ ಹಾರ್ಮಿನ್‌ಸನ್ ಬಳಿಕ ಅಗ್ರಸ್ಥಾನಕ್ಕೆ ಏರಿದ ಇಂಗ್ಲೆಂಡ್‌ನ ಆಟಗಾರ ಎನಿಸಿದ್ದಾರೆ. 2004ರಲ್ಲಿ ಹಾರ್ಮಿನ್‌ಸನ್ ಮೂರು ತಿಂಗಳು ಮೊದಲ ಸ್ಥಾನದಲ್ಲಿದ್ದರು. ಇದಕ್ಕೂ ಮೊದಲು 1980ರಲ್ಲಿ ಇಯಾನ್ ಬಾಥಮ್ ಟೆಸ್ಟ್ ಬೌಲರ್‌ಗಳ ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭದ ಬಳಿಕ ಬ್ರಾಡ್ 40 ಪಾಯಿಂಟ್ಸ್ ಗಳಿಸಿದ್ದಾರೆ. ಮೂರು ಟೆಸ್ಟ್ ಪಂದ್ಯಗಳಿಂದ ಅವರು 15 ವಿಕೆಟ್ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಮೂರನೇ ಸ್ಥಾನದಲ್ಲಿದ್ದಾರೆ. ಆರನೇ ಸ್ಥಾನದಲ್ಲಿರುವ ರವೀಂದ್ರ ಜಡೇಜ ಭಾರತದ ಎರಡನೇ ಅತ್ಯುತ್ತಮ ಬೌಲರ್ ಎನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.