ಮುಂಬೈ (ಪಿಟಿಐ): ಕಾರ್ನರ್ ಸ್ಟೋನ್ ಸ್ಪೋರ್ಟ್ ಮತ್ತು ಎಂಟರ್‌ಟೇನ್‌ಮೆಂಟ್ (ಸಿಎಸ್‌ಇ) ಏಜೆನ್ಸಿ ಬುಧವಾರ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಕಾರ್ನರ್‌ಸ್ಟೋನ್ ಏಜೆನ್ಸಿ ಈ ಮೊದಲು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
‘ಕಾರ್ನರ್‌ಸ್ಟೋನ್ ಏಜೆನ್ಸಿ ಜೊತೆ ಕೆಲಸ ಮಾಡಲು ತುದಿಗಾಲಿನಲ್ಲಿ ನಿಂತಿದ್ದೇನೆ. ಏಜೆನ್ಸಿಗೆ ನನ್ನಿಂದ ಅಗತ್ಯವಿರುವ ಎಲ್ಲಾ ಬಗೆಯ ಸಹಕಾರ ಮತ್ತು ಬೆಂಬಲ ನೀಡಲು ಸಿದ್ಧನಿದ್ದೇನೆ’ ಎಂದು ರಹಾನೆ ತಿಳಿಸಿದ್ದಾರೆ.
ಕಾರ್ನರ್‌ಸ್ಟೋನ್ ಏಜೆನ್ಸಿ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಉಮೇಶ್ ಯಾದವ್, ವರುಣ್ ಆ್ಯರನ್, ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಮತ್ತು ಎಫ್–1 ಚಾಲಕ ಜೆಹಾನ್ ದಾರುವಾಲ ಅವರೊಂದಿಗೂ ಒಪ್ಪಂದ ಮಾಡಿಕೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.