ಬೆಂಗಳೂರು: ಕೋಲಾರದ ಡಾ. ಟಿ. ತಿಮ್ಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಅಜಿತ್ ಕುಮಾರ್ ಹಾಗೂ ದಕ್ಷಿಣ ಕನ್ನಡದ ಸಹ್ಯಾದ್ರಿಯ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಶ್ರುತಿ ಎಸ್. ಶೆಟ್ಟಿ ಅವರು ಯಲಹಂಕದ ಸರ್. ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಶ್ರಯದಲ್ಲಿ ನಡೆಯುತ್ತಿರುವ 14ನೇ ವಾರ್ಷಿಕ ವಿ.ಟಿ.ಯು. ರಾಜ್ಯ ಮಟ್ಟದ ಅಂತರ ಎಂಜಿನಿಯರಿಂಗ್ ಕಾಲೇಜ್ ಅಥ್ಲೆಟಿಕ್ ಕೂಟದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಸರ್.ಎಂ. ವಿ.ಐ.ಟಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಥ್ಲೆಟಿಕ್ ಕೂಟದ 400 ಮೀ. ಓಟದ ಸ್ಪರ್ಧೆಯಲ್ಲಿ ಅಜಿತ್ ಕುಮಾರ್ ಅವರು 53.3ಸೆಕೆಂಡ್‌ಗಳಲ್ಲಿ ತಮ್ಮ ಗುರಿ ತಲುಪಿದರು. ಮಹಿಳೆಯರ ವಿಭಾಗದಲ್ಲಿ ಶ್ರುತಿ ಎಸ್. ಶೆಟ್ಟಿ 1:04.7ಸೆಕೆಂಡ್‌ಗಳಲ್ಲಿ ಗುರಿ ಕ್ರಮಿಸಿ ಬಂಗಾರದ ಪದಕಕ್ಕೆ ಕೊರಳೊಡ್ಡಿದರು.
ಅಥ್ಲೆಟಿಕ್ಸ್ ಕೂಟದ ಗುರುವಾರದ ಫಲಿತಾಂಶ: ಪುರುಷರ ವಿಭಾಗ: 400 ಮೀ ಓಟ: ಅಜಿತ್ ಕುಮಾರ್-1, ಆರ್. ಬಿಪಿನ್ ಕೃಷ್ಣನ್ (ಎಸ್‌ಸಿಇಎಂ)-2, ಕಾಲ 54.5ಸೆ; ಶಮಂತ್ (ಎಸ್‌ಐಟಿ)-3. ಕಾಲ: 54.6 ಸೆ.; 20 ಕಿಮೀ. ನಡಿಗೆ ಸ್ಪರ್ಧೆ: ರಚಿತ್ ಅನು (ಕೆಎಲ್‌ಇಸಿಎ) -1, ಅವಧಿ- 2:13:50:4ಸೆ; ಜಿ. ಕಿರಣ್ ಕುಮಾರ್ (ಕೆಐಟಿ)-2-ಅವಧಿ2:13:52:5ಸೆ; ಬಿ.ಎಸ್. ಜಿತೇಂದರ್ ಸಿಂಗ್ (ಎಪಿಎಸ್‌ಸಿಇ)-3, ಅವಧಿ 2:14:17ಸೆ.; 4x400ಮೀ ರಿಲೇ: ಎಂಎಸ್‌ಆರ್‌ಐಟಿ-1, ಕಾಲ: 3.41.1ಸೆ; ಎಸ್‌ಸಿಇಎಂ-2, ಕಾಲ: 3:41:24ಸೆ; ಕೋಲಾರದ ಡಾ. ಟಿ. ತಿಮ್ಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು-3, 3.41.26ಸೆ.
ಮಹಿಳೆಯರ ವಿಭಾಗ: 100ಮೀ ಹರ್ಡಲ್ಸ್: ಎನ್. ಅವನೀತ್ (ಬಿಐಟಿ)-1, ಕಾಲ: 20.08ಸೆ; ಜಿಬಾ ಅಲಿ (ಎಸ್‌ಜೆಇಸಿ)-2, ಕಾಲ 21ಸೆ; ಓಜಲ್ ಸರಹಾ ಪೌಲ್ (ಆರ್‌ಐಟಿಎಂ)-3, ಕಾಲ-21.1ಸೆ.; 400 ಮೀ ಓಟ: ಶ್ರುತಿ ಎಸ್. ಶೆಟ್ಟಿ (ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು)1, ಅವಧಿ-1:04.7ಸೆ; ಬಿ.ಕೆ. ಸುನಿತಾ ಕುಮಾರಿ (ಆರ್‌ಐಟಿಎಂ)-2, ಅವಧಿ-1:06:4ಸೆ; ಟಿ. ಸಾನಿಯಾ (ಜಿಐಟಿ)-3, ಅವಧಿ-1.09.4ಸೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.