ADVERTISEMENT

ಅನುಚಿತ ವರ್ತನೆ: ಸಂಕಷ್ಟದಲ್ಲಿ ರಾಮ್ದಿನ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST

ಲಂಡನ್ (ಪಿಟಿಐ): ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿದ     ವೆಸ್ಟ್‌ಇಂಡೀಸ್ ಆಟಗಾರ ದಿನೇಶ್ ರಾಮ್ದಿನ್ ಅವರ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ದಂಡ ವಿಧಿಸುವ ಸಾಧ್ಯತೆ ಇದೆ.

ಆದರೆ ತಾನು ತಪ್ಪು ಮಾಡಿಲ್ಲ ಎಂದು ರಾಮ್ದಿನ್ ಸಮರ್ಥಿಸಿಕೊಂಡಿದ್ದಾರೆ. ಅವರು ಸೋಮವಾರ ವಿಚಾರಣೆ ಎದುರಿಸಲಿದ್ದಾರೆ.`ಸಮಿತಿಯ ನೀತಿ ಸಂಹಿತೆಯನ್ನು ರಾಮ್ದಿನ್ ಉಲ್ಲಂಘಿಸ್ದ್ದಿದಾರೆ' ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ಫೀಲ್ಡ್ ಅಂಪೈರ್‌ಗಳಾದ ಸ್ಟೀವ್ ಡೇವಿಸ್ ಹಾಗೂ ನಿಜೆಲ್ ಲಾಂಗ್ ಅವರ ಹೇಳಿಕೆಗಳ ಮೇಲೆ ಐಸಿಸಿ ಈ ಕ್ರಮಕೈಗೊಳ್ಳಲು ಮುಂದಾಗಿದೆ.ನಿಯಮ ಉಲ್ಲಂಘಿಸಿದ್ದಕ್ಕಾಗಿ ಆಟಗಾರನ ಪಂದ್ಯದ ಸಂಭಾವನೆಯ ಶೇ 50ರಿಂದ 100 ರಷ್ಟು ದಂಡ ಅಥವಾ ಎರಡು ಏಕದಿನ ಪಂದ್ಯಗಳ ಅಮಾನತು ಶಿಕ್ಷೆ ವಿಧಿಸಬಹುದಾಗಿದೆ.

ನಡೆದಿದ್ದೇನು?: ಪಾಕಿಸ್ತಾನ ಇನ್ನಿಂಗ್ಸ್‌ನಲ್ಲಿ ನಾಯಕ ಮಿಸ್ಬಾ ಉಲ್ ಹಕ್ ಅವರ ಕ್ಯಾಚ್ ಪಡೆದಿರುವುದಾಗಿ ರಾಮ್ದಿನ್ ವಾದಿಸಿದ್ದರು. ಆಸ್ಟ್ರೇಲಿಯಾದ ಅಂಪೈರ್ ಸ್ಟೀವ್ ಡೇವಿಸ್ ಮಿಸ್ಬಾ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ನಿರ್ಣಯವನ್ನು ಮೂರನೇ ಅಂಪೈರ್ ಟೋನಿ ಹಿಲ್ ಅವರಿಗೆ ಶಿಫಾರಸ್ಸು ಮಾಡಿದಾಗ, ರಾಮ್ದಿನ್ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಮಿಸ್ಬಾಗೆ ಆಡಲು ಅವಕಾಶ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.