ADVERTISEMENT

ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ `ಕೋಟ್ಲಾ'

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST
ದಿಗ್ಗಜರ ಸಮಾಗಮ... ಸಚಿನ್ ತೆಂಡೂಲ್ಕರ್ ಹಾಗೂ ವಿವಿಯನ್ ರಿಚರ್ಡ್ಸ್ ಮುಖಾಮುಖಿಯಾದ ಅಪರೂಪದ ಕ್ಷಣ
ದಿಗ್ಗಜರ ಸಮಾಗಮ... ಸಚಿನ್ ತೆಂಡೂಲ್ಕರ್ ಹಾಗೂ ವಿವಿಯನ್ ರಿಚರ್ಡ್ಸ್ ಮುಖಾಮುಖಿಯಾದ ಅಪರೂಪದ ಕ್ಷಣ   

ನವದೆಹಲಿ (ಪಿಟಿಐ): ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಡೇರ್‌ಡೆವಿಲ್ಸ್ ಮತ್ತು ಇಂಡಿಯನ್ಸ್ ನಡುವಿನ  ಪಂದ್ಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ವಿಂಡೀಸ್ ಕ್ರಿಕೆಟ್‌ನ ದಂತಕಥೆ ಸರ್ ವಿವಿಯನ್ ರಿಚರ್ಡ್ಸ್ ಮತ್ತು ಸಚಿನ್ ಅವರನ್ನು ನೇರವಾಗಿ ಕಾಣುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ದೊರಕಿತ್ತು.

ಡೆವಿಲ್ಸ್ ತಂಡದ ಸಲಹೆಗಾರರಾಗಿ ನೇಮಕವಾಗಿರುವ ರಿಚರ್ಡ್ಸ್ ಅವರನ್ನು ಸಚಿನ್ ಭೇಟಿಯಾಗಿ ಕೆಲವು ನಿಮಿಷಗಳ ಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದರು.

ರಿಚರ್ಡ್ಸ್ ಕ್ರೀಡಾಂಗಣಕ್ಕೆ ಆಗಮಿಸಿದ ಬಗ್ಗೆ ಸಚಿನ್‌ಗೆ ಡೇರ್‌ಡೆವಿಲ್ಸ್ ತಂಡದ ಮತ್ತೊಬ್ಬ ಸಲಹೆಗಾರ ಟಿ.ಎ ಶೇಖರ್ ತಿಳಿಸಿದರು. ಆಗ ಅಭ್ಯಾಸ ನಡೆಸುತ್ತಿದ್ದ ಸಚಿನ್ ತಕ್ಷಣವೇ ರಿಚರ್ಡ್ಸ್ ಬಳಿ ತೆರಳಿದರು. ಮೊದಲಿಗೆ ಆಲಿಂಗನ ಮಾಡಿಕೊಂಡು, ಬಳಿಕ ಇಬ್ಬರೂ ನಗುತ್ತಾ ಮಾತಿಗಿಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.