ADVERTISEMENT

ಅಪೂರ್ವ, ಪ್ರಣವ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST
ಬೆಂಗಳೂರಿನಲ್ಲಿ ಮಂಗಳವಾರ ಕೊನೆಗೊಂಡ ಎಐಟಿಎ ಟ್ಯಾಲೆಂಟ್‌ ಸೀರಿಸ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಸಾಯಿ ಪ್ರಣವ್‌ (ಎಡ) ಮತ್ತು ಎಸ್‌.ಬಿ. ಅಪೂರ್ವ ಟ್ರೋಫಿಯೊಂದಿಗೆ ಸಂಭ್ರಮಿಸಿದ ಕ್ಷಣ
ಬೆಂಗಳೂರಿನಲ್ಲಿ ಮಂಗಳವಾರ ಕೊನೆಗೊಂಡ ಎಐಟಿಎ ಟ್ಯಾಲೆಂಟ್‌ ಸೀರಿಸ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಸಾಯಿ ಪ್ರಣವ್‌ (ಎಡ) ಮತ್ತು ಎಸ್‌.ಬಿ. ಅಪೂರ್ವ ಟ್ರೋಫಿಯೊಂದಿಗೆ ಸಂಭ್ರಮಿಸಿದ ಕ್ಷಣ   

ಬೆಂಗಳೂರು: ಕರ್ನಾಟಕದ ಎಸ್‌.ಬಿ. ಅಪೂರ್ವ ಮತ್ತು ಸಾಯಿ ಪ್ರಣವ್‌ ಇಲ್ಲಿ ನಡೆದ ಜೈನ್‌–ಎಐಟಿಎ ಟ್ಯಾಲೆಂಟ್‌ ಸೀರಿಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮ ವಾಗಿ ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಕನಕಪುರದ ಜೆಐಆರ್‌ಎಸ್‌ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅಪೂರ್ವ 6–2, 7–6 ರಲ್ಲಿ ತಮಿಳುನಾಡಿನ ಶ್ರುತಿ ಪಾಂಡುದುರೈ ಅವರನ್ನು ಮಣಿಸಿದರು. ನಾಲ್ಕನೇ ಶ್ರೇಯಾಂಕದ ಅಪೂರ್ವ ಸೆಮಿಫೈನಲ್‌ನಲ್ಲಿ 4–6, 6–1, 6–2 ರಲ್ಲಿ ಭೂಮಿಕಾ ವಿರುದ್ಧ ಗೆಲುವು ಪಡೆದಿದ್ದರು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಸಾಯಿ ಪ್ರಣವ್‌ 6–2, 6–2 ರಲ್ಲಿ ಕರ್ನಾಟಕದವರೇ ಆದ ರಾಹುಲ್‌ ಶಂಕರ್‌ ಅವರನ್ನು ಮಣಿಸಿದರು. ಎರಡನೇ ಶ್ರೇಯಾಂಕದ ಪ್ರಣವ್‌ ನಾಲ್ಕರಘಟ್ಟದ ಪಂದ್ಯದಲ್ಲಿ 6–4,     6–7, 6–4 ರಲ್ಲಿ ಹರಿ ಸಿಂಗ್‌ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.